ಶುಭಾಪೂಂಜ ಮದುವೆ ಫಿಕ್ಸ್
Team Udayavani, Jun 16, 2020, 7:25 AM IST
ಕರಾವಳಿ ಬೆಡಗಿ ಶುಭಪೂಂಜ ಡಿಸೆಂಬರ್ನಲ್ಲಿ ಮದುವೆ ಆಗುತ್ತಿದ್ದಾರೆ. ಹೌದು ಈ ಸುದ್ದಿಯನ್ನು ಸ್ವತಃ ಶುಭಪೂಂಜ ಅವರೇ ಉದಯವಾಣಿಗೆ ಸ್ಪಷ್ಟಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಅನೇಕ ಚಿತ್ರಗಳ ಮೂಲಕ ಗಮನ ಸೆಳೆದ ಶುಭಪೂಂಜ ಈಗ ಮದುವೆ ಆಗುವ ಖುಷಿಯಲ್ಲಿದ್ದಾರೆ.
ಅಂದಹಾಗೆ, ಶುಭಪೂಂಜ ಅವರನ್ನು ಕೈ ಹಿಡಿಯುತ್ತಿರುವ ಹುಡುಗನ ಹೆಸರು ಸುಮಂತ್ ಬಿಲ್ಲವ. ಮೂಲತಃ ಕುಂದಾಪುರದ ವರಾಗಿರುವ ಸುಮಂತ್ ಬಿಲ್ಲವ ಜಯ ಕರ್ನಾಟಕ ಸಂಘಟನೆಯಲ್ಲಿ ಸೌತ್ ವಿಂಗ್ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಕಮರ್ಷಿಯಲ್ ಗ್ಯಾಸ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ. ಇವರೊಂದಿಗೆ ಶುಭಪೂಂಜ ವಿವಾಹ ಡಿಸೆಂಬರ್ನಲ್ಲಿ ನೆರವೇರಲಿದೆ.
ಇನ್ನೂ ದಿನಾಂಕ ನಿಗದಿಯಾಗದ ಕಾರಣ, ಇಷ್ಟರಲ್ಲೇ ದಿನಾಂಕ ಘೋಷಣೆ ಮಾಡುವುದಾಗಿ ಶುಭಪೂಂಜ ತಿಳಿಸಿದ್ದಾರೆ. ಮುಂದಿನ ತಿಂಗಳು ಮಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆಯನ್ನು ಡಿಸೆಂಬರ್ ವೇಳೆಗೆ ನಡೆಸಲು ಮನೆಯವರು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು