Udayavni Special

ಶೇಖ್ ಫಾಝಿಲ್ ‌ಯಾರೆಂದು ನನಗೆ ಗೊತ್ತಿಲ, ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಲಿ : ಸಿದ್ದು


Team Udayavani, Sep 15, 2020, 2:51 PM IST

ಶೇಖ್ ಫಾಝಿಲ್ ‌ಯಾರೆಂದು ನನಗೆ ಗೊತ್ತಿಲ, ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಲಿ : ಸಿದ್ದು

ಬಾಗಲಕೋಟೆ: ಡ್ರಗ್ಸ್‌ ಆರೋಪಿ ಶೇಖ್ ಫಾಝಿಲ್‌ ಯಾರೆಂದು ನನಗೆ ಗೊತ್ತಿಲ್ಲ. ಐ ಡೋಂಟ್‌ ನೊ ಹೂ ಹೀ ಇಜ್‌. ಯಾರೋ ಬಂದು ಫೋಟೋ ತಗೋತಾರೆ, ಏನ್‌ ಮಾಡಲು ಆಗುತ್ತದೆ. ಯಾರ ಜತೆಗೆ ಫೋಟೋ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್‌ ಜಾಲದಲ್ಲಿ ಇದ್ದಾರಾ ಅನ್ನೋದು ಮುಖ್ಯ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಶೇಖ್ ಫಾಝಿಲ್ ಯಾರೆಂದು ನನಗೆ ಗೊತ್ತಿಲ್ಲ. ಪುರಾವೆ ಇದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ. ಶಾಸಕ ಜಮೀರ್‌ ಡ್ರಗ್ಸ್‌ ಜಾಲದಲ್ಲಿ ಇದ್ದಾರೆ ಎಂಬುದಕ್ಕೆ ಪುರಾವೆ ಇಲ್ಲ. ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಬಿಜೆಪಿಯ ಪ್ರಚಾರಕ್ಕೆ ಹೋಗಿದ್ದರು. ಅದಕ್ಕೆ ಏನೆಂದು ಕರೆಯಬೇಕು. ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆಗೆ ಕೆ.ಆರ್‌. ಪೇಟೆಯಲ್ಲಿ ಕ್ಯಾಂಪೇನ್‌ ಮಾಡ್ತಾ ಇದ್ದರು.

ಬಿಜೆಪಿ ಸದಸ್ಯೆ ಆಗಿದ್ದಾಳೆ. ಹಾಗಂತ ಡ್ರಗ್ಸ್‌ ಜಾಲದಲ್ಲಿ ವಿಜಯೇಂದ್ರ ಇದ್ದಾನೆಂದು ನಾನು ಹೇಳಲಾ? ಹಾಗೆ ಹೇಳಲು ಆಗುತ್ತದೆಯೇ? ನಟಿ ರಾಗಿಣಿ ಬಿಜೆಪಿಯ ಪ್ರಚಾರಕ್ಕೆ ಹೋಗಿರಬಹುದು. ಡ್ರಗ್ಸ್‌ ಜಾಲದಲ್ಲಿ ವಿಜಯೇಂದ್ರ ಇದ್ದ ಎಂಬುದಕ್ಕೆ ಸಾಕ್ಷಿ ಬೇಕಲ್ಲ. ಯಾರದೋ ಫೋಟೋ ಜತೆಗೆ ಇದ್ದರೆ ತಪ್ಪಿತಸ್ಥರು ಎಂದರ್ಥವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:‌ಡ್ರಗ್ಸ್ ಮಟ್ಟಹಾಕದೆ ಹೋದರೆ ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ: ಖಂಡ್ರೆ

ಗಮನ ಬೇರೆಡೆ ಸೆಳೆಯುವ ತಂತ್ರ: ರಾಜ್ಯದಲ್ಲಿ ಪ್ರವಾಹ, ಕೋವಿಡ್ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಡ್ರಗ್ಸ್‌ ವಿಷಯ ಹೈಲೆಟ್‌ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಸಂಬಳ ಕೊಡುವುದಕ್ಕೂ ಹಣವಿಲ್ಲ. ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲ. ಕೇಂದ್ರದವರು ಜಿಎಸ್‌ಟಿ ಸಹಾಯಧನ ಕೊಡಲಿಲ್ಲ. ಸಾಲ ಮಾಡಿ ಹಣ ಖರ್ಚು ಮಾಡಬೇಕಾಗಿದೆ. ಪ್ರತಿದಿನ ಸಾವಿರಾರು ಜನ ಸಾಯುತ್ತಿದ್ದಾರೆ. ಇದಕ್ಕೆ ಪರಿಹಾರ ಮಾಡಲು ಆಗಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿ ಕೆಟ್ಟು ಹೋಗಿದೆ. ಅದಕ್ಕೆ ಡ್ರಗ್ಸ್‌ನಂತಹ ಪ್ರಕರಣಗಳ ಹೆಚ್ಚು ಹೈಲೈಟ್‌ ಮಾಡಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದರು.

ದೇವರು ಹೇಗೆ ಹೊಣೆ ಆಗ್ತಾರೆ: ಆರ್ಥಿಕ ಕುಸಿತಕ್ಕೆ ದೇವರೆ ಹೊಣೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ದೇವರು ಯಾಕೆ ಹೊಣೆ ಆಗುತ್ತಾರೆ. ಪ್ರವಾಹ ಈಗ ಬಂದಿದೆಯಾ, ಕೋವಿಡ್ ಈಗ ಬಂದಿರುವುದು ನಿಜ. ಇಡೀ ದೇಶ-ಜಗತ್ತಿನಲ್ಲಿ ಕೊರೊನಾ ಇದೆ. ಎಲ್ಲ ರಾಷ್ಟ್ರದವರು ದೇವರೇ ಹೊಣೆ ಎಂದು ಹೇಳಿದ್ದಾರಾ? ನಿರ್ಮಲಾ ಸೀತಾರಾಮನ್‌ ತರಹ ಅಮೆರಿಕ, ಚೀನಾ, ಜಪಾನ್‌, ಫ್ರಾನ್ಸ್‌ ಹೇಳಿವೆಯಾ ಎಂದು ಪ್ರಶ್ನಿಸಿದರು.

ಡ್ರಗ್ಸ್‌ ಯಾರೇ ತೆಗೆದುಕೊಂಡರೂ ಅದೊಂದು ಸಾಮಾಜಿಕ ಕಂಟಕ. ಯಾರೇ ತೆಗೆದುಕೊಳ್ಳಲಿ, ಸರಬರಾಜು ಮಾಡಲಿ ಅದು ಅಪರಾಧ. ಅದಕ್ಕೆ 10ರಿಂದ 20 ವರ್ಷ ಶಿಕ್ಷೆ. ಇದೂವರೆಗೂ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ರಾಜ್ಯ ಅಷ್ಟೇ ಅಲ್ಲ, ದೇಶದಲ್ಲೇ ಡ್ರಗ್ಸ್‌ ಜಾಲವಿದೆ. ಇದಕ್ಕೆ ಯಾರು ಜವಾಬ್ದಾರಿ| ಈಗ ಸಿಕ್ಕಿಹಾಕಿಕೊಂಡವರ ಮೇಲೆ ಕ್ರಮ ಆಗಲಿ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸುತ್ತೇನೆ.
– ಸಿದ್ದರಾಮಯ್ಯ ವಿಪಕ್ಷ ನಾಯಕ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎನ್‌ಎಂಪಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಇನ್ನೊಂದು ಹೊಸ ಜೆಟ್ಟಿ

ಎನ್‌ಎಂಪಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಇನ್ನೊಂದು ಹೊಸ ಜೆಟ್ಟಿ

ಚುನಾವಣೆ ವೆಚ್ಚದ ಮಿತಿ ಶೇ.10 ಹೆಚ್ಚಳ

ಚುನಾವಣೆ ವೆಚ್ಚದ ಮಿತಿ ಶೇ.10 ಹೆಚ್ಚಳ

CA

10ನೇ ತರಗತಿ ಬಳಿಕ ಸಿಎ ಅಭ್ಯಾಸಕ್ಕೆ ಅವಕಾಶ

ಮತ್ತೆ ಕೇಳಿ ಬಂದ ಆಡಿಯೋ ಬಾಂಬ್‌

ಮತ್ತೆ ಕೇಳಿ ಬಂದ ಆಡಿಯೋ ಬಾಂಬ್‌

ಉಡುಪಿ ಸಹಿತ 17 ಜಿಲ್ಲೆಗಳಲ್ಲಿ ಶೇ. 90 ಗುಣಮುಖ

ಉಡುಪಿ ಸಹಿತ 17 ಜಿಲ್ಲೆಗಳಲ್ಲಿ ಶೇ. 90 ಗುಣಮುಖ

ಗುಜರಾತ್‌ನಲ್ಲಿ 1.30 ಲಕ್ಷ ಬಾಲಕಾರ್ಮಿಕರು!

ಗುಜರಾತ್‌ನಲ್ಲಿ 1.30 ಲಕ್ಷ ಬಾಲಕಾರ್ಮಿಕರು!

25 Years Of DDLJ

ಶಾರುಖ್‌- ಕಾಜಲ್‌ ನಟನೆಯ ಸೂಪರ್‌ಹಿಟ್‌ ಚಿತ್ರಕ್ಕೆ 25; ಟ್ರೆಂಡ್‌ ಆದ ಡಿಡಿಎಲ್‌ಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಕೇಳಿ ಬಂದ ಆಡಿಯೋ ಬಾಂಬ್‌

ಮತ್ತೆ ಕೇಳಿ ಬಂದ ಆಡಿಯೋ ಬಾಂಬ್‌

ಉಡುಪಿ ಸಹಿತ 17 ಜಿಲ್ಲೆಗಳಲ್ಲಿ ಶೇ. 90 ಗುಣಮುಖ

ಉಡುಪಿ ಸಹಿತ 17 ಜಿಲ್ಲೆಗಳಲ್ಲಿ ಶೇ. 90 ಗುಣಮುಖ

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

belagavi

ಬೆಳಗಾವಿ: ಸಿಡಿಲ ಅಬ್ಬರಕ್ಕೆ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

Kudಕರಾವಳಿಗೆ 94ಡಿ ಸೌಲಭ್ಯಕ್ಕೆ ಸರಕಾರದ ಉದಾಸೀನ

ಕರಾವಳಿಗೆ 94ಡಿ ಸೌಲಭ್ಯಕ್ಕೆ ಸರಕಾರದ ಉದಾಸೀನ

Onion

ಕಣ್ಣೀರು ಬರಿಸುತ್ತಿದೆ ಈರುಳ್ಳಿ: ದಿನದಿಂದ ದಿನಕ್ಕೆ 10 ರೂ. ಏರಿಕೆ!

ಸ್ಥಳೀಯ ಮಾರುಕಟ್ಟೆಗೆ ಜೀವ ತುಂಬುತ್ತಿರುವ ಹಬ್ಬಗಳ ಸಾಲು

ಸ್ಥಳೀಯ ಮಾರುಕಟ್ಟೆಗೆ ಜೀವ ತುಂಬುತ್ತಿರುವ ಹಬ್ಬಗಳ ಸಾಲು

ಎನ್‌ಎಂಪಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಇನ್ನೊಂದು ಹೊಸ ಜೆಟ್ಟಿ

ಎನ್‌ಎಂಪಿಟಿಯಲ್ಲಿ ನಿರ್ಮಾಣಗೊಳ್ಳಲಿದೆ ಇನ್ನೊಂದು ಹೊಸ ಜೆಟ್ಟಿ

Udupi

ಬಾಕಿ ವಿಲೇವಾರಿ ಶೀಘ್ರಗೊಳಿಸಿ: ಮಹೇಶ್ವರ ರಾವ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.