ಟೆಕ್‌ ಸಮ್ಮಿಟ್‌ ಮಾದರಿಯಲ್ಲಿ ಸ್ಕಿಲ್‌ ಸಮ್ಮಿಟ್‌: ಸಚಿವ ನಾಗೇಶ್‌

Team Udayavani, Nov 20, 2019, 5:30 AM IST

ಬೆಂಗಳೂರು: ಮುಂಬರುವ ದಿನಗಳಲ್ಲಿ ಟೆಕ್‌ ಸಮ್ಮಿಟ್‌ ಮಾದರಿಯಲ್ಲೆಯೇ ಸ್ಕಿಲ್‌ ಸಮ್ಮಿಟ್‌ (ಕೌಶಲ ಶೃಂಗಮೇಳ) ಹಮ್ಮಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಕೌಶಲ ವಿನಿಮಯಕ್ಕೆ ವೇದಿಕೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಎಚ್‌. ನಾಗೇಶ್‌ ತಿಳಿಸಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್‌ ಸಮ್ಮಿಟ್‌ನಲ್ಲಿ ಮಂಗಳ ವಾರ ಆಯೋಜಿಸಿದ್ದ “ಬೆಂಗಳೂರು ಸ್ಕಿಲ್‌” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳ ಕೌಶಲ ವಿಚಾರಗಳ ಕುರಿತು ಚರ್ಚಿ ಸಲು, ಕೌಶಲಗಳ ವಿನಿಮಯ ಮಾಡಿಕೊಳ್ಳಲು ಶೃಂಗಸಭೆ ಮಾದರಿಯ ಕಾರ್ಯಕ್ರಮಗಳು ಉಪಯುಕ್ತವಾಗುತ್ತವೆ. ಸದ್ಯ ಟೆಕ್‌ ಸಮ್ಮಿಟ್‌ನ ಭಾಗವಾಗಿ “ಬೆಂಗಳೂರು ಸ್ಕಿಲ್‌” ಕಾರ್ಯಕ್ರಮ ರೂಪಿಸಲಾಗಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ