ವಂದೇ ಭಾರತ್ನಲ್ಲಿ ಹಾವು–ಏಣಿ ಆಟ!
Team Udayavani, Feb 12, 2023, 7:45 AM IST
ಹೊಸದಿಲ್ಲಿ : ಈಗಾಗಲೇ ಹಲವು ವೈಶಿಷ್ಟ್ಯಗಳಿಂದ ಜನರ ಮನಸೆಳೆದಿರುವ ವಂದೇ ಭಾರತ್ ಟ್ರೈನ್ ಮತ್ತೊಂದು ಅಚ್ಚರಿಯ ಸೌಲಭ್ಯದೊಂದಿಗೆ ಪ್ರಯಾಣಿಕರಿಗೆ ಹತ್ತಿರವಾಗುತ್ತಿದೆ.
ಆ ನೂತನ ಸೌಲಭ್ಯವೇ “ವಂದೇ ಭಾರತ್ ಹಾವು ಏಣಿ ‘. ಹೌದು ಟ್ರೈನ್ನಲ್ಲಿನ ಪ್ರಯಾಣಿಕರಿಗೆ ಬೇಸರವಾಗದಿರಲು ಅತ್ಯಂತ ಜನ ಪ್ರಿಯ ಆಟವಾದ ಹಾವು -ಏಣಿಯನ್ನು ಟ್ರೈನ್ನಲ್ಲಿ ಆಡುವುದಕ್ಕೆ ಅವಕಾಶ ಮಾಡಲಾಗಿದೆ.
ಇದಕ್ಕಾಗಿ ರೈಲ್ವೇ ಹಾವು ಏಣಿ ಬೋರ್ಡ್ ಗಳನ್ನಿಟ್ಟಿದ್ದು ಪ್ರಯಾಣಿಕರು ಈ ಸೌಲಭ್ಯ ವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ವ್ಯವಸ್ಥೆ ಮುಂಬಯಿ-ಸೋಲಾಪುರ, ಮುಂಬಯಿ-ಸಾಯಿ ನಗರ ಶಿರಡಿ ರೈಲುಗಳಲ್ಲಿ ಮಾತ್ರ ಲಭ್ಯವಿದೆ.
ರೈಲು ಆರಂಭವಾಗುವ ಸ್ಥಳವನ್ನು ಆಟದ ಆರಂಭಕ್ಕೆಂದು ಗುರುತಿಸಿದ್ದು, ತಲುಪುವ ಸ್ಥಳವನ್ನು ಅಂತಿಮ ನಿಲ್ದಾ ಣದ ಹೆಸರಿನಲ್ಲಿ ಗುರುತಿಸಲಾಗಿದೆ. ಸಂಚರಿಸುವ ಮಾರ್ಗಗಳನ್ನೇ ಏಣಿ ತಲುಪುವ ಸ್ಥಳಗಳನ್ನಾಗಿ ಗುರುತಿಸಲಾಗಿದೆ.