ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ
Team Udayavani, Jan 21, 2022, 10:15 PM IST
ನವದೆಹಲಿ: ಸ್ವಾತಂತ್ರಾ ನಂತರ ದೇಶವನ್ನು ಕಟ್ಟುವುದು ಎಂಬ ವಿಚಾರ ದೆಹಲಿಯ ಕೆಲ ಎನ್ನುವುದು ಕುಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು. ಸದ್ಯ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಸಂಕುಚಿತ ಮನೋಭಾವನೆ ತೊಡೆದು ಹಾಕಿ, ರಾಷ್ಟ್ರೀಯ ಮಹತ್ವದ ನಿರ್ಮಾಣದ ಕೆಲಸಗಳನ್ನು ಮಾಡುತ್ತಿದೆ’ – ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ನುಡಿದಿದ್ದಾರೆ.
ನವದೆಹಲಿಯಿಂದಲೇ ವಚ್ಯುವಲ್ ಮೂಲಕ ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇಗುಲದ ಬಳಿ ನಿರ್ಮಿಸಲಾಗಿರುವ ಸರ್ಕ್ಯೂಟ್ ಹೌಸ್ ಅನ್ನು ಉದ್ಘಾಟಿಸಿದರು. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಪ್ರಧಾನಿ, ತಮ್ಮ ನೇತೃತ್ವದ ಸರ್ಕಾರ ಸಂಕುಚಿತ ಮನೋಭಾವನೆಯಿಂದ ಹೊರಗೆ ಬಂದು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
“ಸ್ವಚ್ಛತೆ, ಸೌಲಭ್ಯ, ಪ್ರವಾಸಿಗರ ಸಮಯ ಉಳಿತಾಯ ಮತ್ತು ಮಾಡರ್ನ್ ಮೈಂಡ್‌ಸೆಟ್ ಪ್ರವಾಸೋದ್ಯಮದ ಅಭಿವೃದ್ಧಿಗೆ ಅತಿಮುಖ್ಯ. ನಮ್ಮ ಪೂರ್ವಜರು ನಮಗಾಗಿ ಸಾಕಷ್ಟನ್ನು ಬಿಟ್ಟುಹೋಗಿದ್ದಾರೆ. ಅವರು ಬಿಟ್ಟು ಹೋದ ಸಾಂಸ್ಕೃತಿಕ ಮತ್ತು ಧಾರ್ಮಿಕತೆಯ ಅಭಿವೃದ್ಧಿಯಿಂದಲೇ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.
ಸೋಮನಾಥ ದೇಗುಲದ ಇತಿಹಾಸ ನಮಗೆ ದೊಡ್ಡ ಸಂದೇಶ ಕೊಡುತ್ತದೆ. ಇತಿಹಾಸ ಕಾಲದಲ್ಲಿ ಈ ಪವಿತ್ರ ದೇಗುಲವನ್ನು ಎಷ್ಟು ಬಾರಿ ಕೆಡವಿದರೂ, ಮತ್ತೆ ಹೇಗೆ ಸದೃಢವಾಗಿ ನಿರ್ಮಾಣವಾಯಿತು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!
ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ
ಜನರ ಕಡೆ ಕಾಂಗ್ರೆಸ್ ನಡಿಗೆ; ನವ ಸಂಕಲ್ಪಗಳೊಂದಿಗೆ ಜನಸಂಪರ್ಕಕ್ಕೆ ಕಾಂಗ್ರೆಸ್ ಸಿದ್ಧ
ದೇಸಿ ಮಕ್ಕಳ ಮೊಬೈಲ್ ಪ್ರೌಢಿಮೆ; ವಿಶ್ವದಲ್ಲಿ ಭಾರತವೇ ಮೊದಲೆಂದ ಮ್ಯಾಕೆಫೀ ವರದಿ
18ನೇ ಶತಮಾನದ ಭಾರತೀಯ ದೇವಸಹಾಯಂಗೆ ಸಂತ ಪದವಿ