ಕೋವಿಡ್-19 ಭೀತಿಯಲ್ಲಿ ಸೌರವ್ ಗಂಗೂಲಿ ಕುಟುಂಬ
ಸುದ್ದಿಯನ್ನು ಅಲ್ಲಗಳೆದ ಗಂಗೂಲಿ ಸೋದರ
Team Udayavani, Jun 21, 2020, 6:33 AM IST
ಕೋಲ್ಕತಾ: ಟೀಮ್ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬ ಕೋವಿಡ್-19 ಮಾರಿಯ ಭೀತಿಗೆ ಸಿಲುಕಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅವರ ಅಣ್ಣ, ಬಂಗಾಲ ಕ್ರಿಕೆಟ್ ಮಂಡಳಿಯ (ಸಿಎಬಿ) ಅಧ್ಯಕ್ಷ ಸ್ನೇಹಶಿಷ್ ಗಂಗೂಲಿ ಮತ್ತು ಅವರ ಪತ್ನಿಗೆ ಕೋವಿಡ್-19 ಟೆಸ್ಟ್ ನಡೆಸಿದಾಗ ಪಾಸಿಟಿವ್ ಫಲಿತಾಂಶ ಕಂಡುಬಂದಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು. ಆದರೆ ಇದನ್ನು ಸ್ನೇಹಶಿಷ್ ಅಲ್ಲಗಳೆದಿದ್ದಾರೆ.
ಸ್ನೇಹಶಿಷ್ ಅವರ ಅತ್ತೆ ಮತ್ತು ಮಾವ ಅವರ ಫಲಿತಾಂಶ ಕೂಡ ಪಾಸಿಟಿವ್ ಆಗಿದೆ. ನಾಲ್ವರೂ ಕೋಲ್ಕತಾದ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಬಿ ಅಧಿಕಾರಿ ಶನಿವಾರ ತಿಳಿಸಿದ್ದರು. ಆದರೆ ಸಂಜೆ ವೇಳೆ ಸ್ವತಃ ಸ್ನೇಹಶಿಷ್ ಅವರೇ ಈ ಸುದ್ದಿ ನಿರಾಧಾರ, ತಾನು ಆರೋಗ್ಯದಿಂದ ಇದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…