ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ; ಜೂನ್‌ನಿಂದಲೇ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

Team Udayavani, May 26, 2022, 6:25 AM IST

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ; ಜೂನ್‌ನಿಂದಲೇ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ಹಾಸ್ಟೆಲ್‌ಗ‌ಳ ಮಕ್ಕಳಿಗೆ ಮಾತ್ರ ಯೋಜನೆ ಅನ್ವಯ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್‌ಗ‌ಳಲ್ಲಿ ಕೂಡ ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳೇ ಹೆಚ್ಚಿದ್ದು, ಅವರಿಗೂ ತರಬೇತಿ ಆರಂಭಿಸಬೇಕು ಎಂಬ ಬೇಡಿಕೆ ಇದೆ.

ಉಡುಪಿ: ಸರಕಾರಿ ಹಾಸ್ಟೆಲ್‌ಗ‌ಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈಗಾಗಲೇ ಕರಾಟೆ ತರಬೇತಿ ಆರಂಭಿಸಿರುವ ಸರಕಾರ, 2022-23ನೇ ಸಾಲಿನಿಂದ ಮೆಟ್ರಿಕ್‌ ಅನಂತರ ಬಿಸಿಎಂ ಹಾಸ್ಟೆಲ್‌ಗ‌ಳಲ್ಲಿ ಇರುವ ಬಾಲಕ ಹಾಗೂ ಬಾಲಕಿಯರಿಗೆ ನ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 1,139 ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯಗಳ 1.27 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ “ಸ್ಫೂರ್ತಿಯ ನಡೆ’ ಎಂಬ ಯೋಜನೆಯಡಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ದ.ಕ. ಮತ್ತು ಉಡುಪಿಯ 72 ಹಾಸ್ಟೆಲ್‌ಗ‌ಳ 7,900ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದ ರಿಂದ ಉಪಯೋಗ ಆಗಲಿದೆ.

ತರಬೇತಿ ಹೇಗಿರಲಿದೆ?
ಮುಂದಿನ ಜೂನ್‌ನಿಂದಲೇ ಆರಂಭಿಸಿ 2023ರ ಮಾರ್ಚ್‌ ವರೆಗೆ ಪ್ರತೀ ತಿಂಗಳು ತಲಾ ಒಂದು ಗಂಟೆಯ 15 ತರಗತಿ ನಡೆಸಿ ಆಂಗ್ಲ ಭಾಷೆಯಲ್ಲಿ ಮಾತನಾಡಲು ಕಲಿಸಲಾಗುವುದು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಹಾಸ್ಟೆಲ್‌ನಲ್ಲಿ ಹೆಚ್ಚಿರುವುದರಿಂದ ಅವರ ಸಂವಹನ ಕೌಶಲ ಹೆಚ್ಚಿಸುವುದು ಇದರ ಉದ್ದೇಶ.

ತರಬೇತಿ ನೀಡುವವರ್ಯಾರು?
ಹಾಸ್ಟೆಲ್‌ ವ್ಯಾಪ್ತಿಯ ಸರಕಾರಿ ಪ. ಪೂರ್ವ ಕಾಲೇಜುಗಳ ಇಂಗ್ಲಿಷ್‌ ಉಪ ನ್ಯಾಸಕರು ತರಬೇತಿ ನೀಡಲಿದ್ದಾರೆ. ಅವರ ಕೊರತೆ ಇದ್ದಲ್ಲಿ ಅನುದಾನಿತ ಅಥವಾ ಅನು ದಾನ ರಹಿತ ಪಿಯು ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತದೆ. ಬಾಲಕಿಯರ ಹಾಸ್ಟೆಲ್‌ಗ‌ಳಲ್ಲಿ ಉಪನ್ಯಾಸಕಿ ಯರು ಅಥವಾಮಹಿಳಾ ತರಬೇತುದಾರರು ಕಲಿಸಿಕೊಡಲಿದ್ದಾರೆ. ಉಪನ್ಯಾಸಕರಿಗೆ ತಿಂಗಳಿಗೆ ಗರಿಷ್ಠ 3,000 ರೂ. ಗೌರವಧನ ನೀಡಲಾಗುತ್ತದೆ.

ಫ‌ಲಾನುಭವಿಗಳು
ಉಡುಪಿ ಜಿಲ್ಲೆಯಲ್ಲಿರುವ ಮೆಟ್ರಿಕ್‌ ಅನಂತರ 9 ಬಾಲಕರ ಹಾಸ್ಟೆಲ್‌ಗ‌ಳಲ್ಲಿ 1,025 ಹಾಗೂ 14 ಬಾಲಕಿಯರ ಹಾಸ್ಟೆಲ್‌ಗ‌ಳಲ್ಲಿ 1,730 ಸೇರಿದಂತೆ 23 ಹಾಸ್ಟೆಲ್‌ಗ‌ಳಲ್ಲಿ 2,755 ವಿದ್ಯಾರ್ಥಿಗಳ ಮಿತಿಯಿದೆ. ದ.ಕ. ಜಿಲ್ಲೆಯ 17 ಬಾಲಕರ ಹಾಸ್ಟೆಲ್‌ಗ‌ಳಲ್ಲಿ 1,750 ಹಾಗೂ 32 ಬಾಲಕಿಯರ ಹಾಸ್ಟೆಲ್‌ಗ‌ಳಲ್ಲಿ 3,455 ಸೇರಿದಂತೆ 49 ಹಾಸ್ಟೆಲ್‌ಗ‌ಳಲ್ಲಿ 5,205 ವಿದ್ಯಾರ್ಥಿಗಳ ದಾಖಲಾತಿ ಮಿತಿ ನೀಡಲಾಗಿದೆ. ಜತೆಗೆ ಎರಡು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗ‌ಳನ್ನು ತೆರೆಯಲಾಗಿದೆ.

ಸ್ಫೂರ್ತಿಯ ನಡೆ ಯೋಜನೆಯಡಿ ಬಿಸಿಎಂ ಹಾಸ್ಟೆಲ್‌ಗ‌ಳ ವಿದ್ಯಾರ್ಥಿಗಳಿಗೆ 5 ಕೋ.ರೂ. ವೆಚ್ಚದಲ್ಲಿ ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡಲು ನಿರ್ಧರಿಸಿದ್ದು, ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ಜೂನ್‌ನಲ್ಲಿ ಪ್ರಕ್ರಿಯೆ ಜಾರಿಯಾ ಗಲಿದೆ.
– ಕೋಟ ಶ್ರೀನಿವಾಸ ಪೂಜಾರಿ,
ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

-ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1–sadsa

ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !

voter

3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ

1-dfgfgf-dg

ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ

ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ

ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ

ಕಾರವಾರ: ಜಿಲ್ಲೆಯಲ್ಲಿ 15.21 ಲಕ್ಷ ರೂ. ಬೆಲೆಯ 75 ಕೆಜಿ ಗಾಂಜಾ ನಾಶ

ಕಾರವಾರ: ಜಿಲ್ಲೆಯಲ್ಲಿ 15.21 ಲಕ್ಷ ರೂ. ಬೆಲೆಯ 75 ಕೆಜಿ ಗಾಂಜಾ ನಾಶ

selfi2

ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ

ಅಗ್ನಿಪಥ ಯೋಜನೆ: ಐಎಎಫ್ ಗೆ 59,960 ಅರ್ಜಿ ಸಲ್ಲಿಕೆ

ಅಗ್ನಿಪಥ ಯೋಜನೆ: ಐಎಎಫ್ ಗೆ 59,960 ಅರ್ಜಿ ಸಲ್ಲಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಪು: ಕೋಟೆ ಗ್ರಾ. ಪಂ.ಗೆ ಮರಳಿ ಬಂತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ

ಕಾಪು: ಕೋಟೆ ಗ್ರಾ. ಪಂ.ಗೆ ಮರಳಿ ಬಂತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ

22

ಬನ್ನಂಜೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಕಾರ್ಯಾರಂಭ

21

ಪರ್ಕಳ, ಇಂದ್ರಾಳಿ: ಸವಾರರ ಜೀವ ಹಿಂಡುವ ರಸ್ತೆಗಳು

ಮೂಳೂರು : ಅಲ್ – ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ಉದ್ಘಾಟನೆ

ಮೂಳೂರು : ಅಲ್ – ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ಉದ್ಘಾಟನೆ

19

ಮಾರಸ್ವಾಮಿ ಸೇತುವೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮನವಿ

MUST WATCH

udayavani youtube

ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು

udayavani youtube

ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು

udayavani youtube

ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…

udayavani youtube

ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ

udayavani youtube

ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ

ಹೊಸ ಸೇರ್ಪಡೆ

ಐಎಂಎ‌ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ

ಐಎಂಎ‌ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ

1–sadsa

ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !

voter

3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ

1-dfgfgf-dg

ಸಾಗರ: ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ದಿಢೀರ್ ಅಸ್ವಸ್ಥ

ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ

ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.