ಹೆರಾಯಿನ್ ಹೊಂದಿದ್ದ ಲಂಕಾ ಕ್ರಿಕೆಟಿಗ ಪೊಲೀಸರ ಬಲೆಗೆ
Team Udayavani, May 26, 2020, 5:43 AM IST
ಕೊಲಂಬೊ: ಪ್ರಥಮ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ಮಿಂಚಿದ್ದ ಶ್ರೀಲಂಕಾದ ವೇಗಿ ಶೆಹಾನ್ ಮಧುಶಂಕ ಈಗ ಬೇರೊಂದು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಹೆರಾಯಿನ್ ಪ್ರಕರಣವೊಂದರಲ್ಲಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರವಿವಾರ ಶ್ರೀಲಂಕಾದ ಪನ್ನಾಲ ಪಟ್ಟಣದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದಾಗಲೇ ಮತ್ತೂಬ್ಬ ವ್ಯಕ್ತಿಯೊಂದಿಗೆ ಖಾಸಗಿ ವಾಹನದಲ್ಲಿ ಹೋತ್ತಿದ್ದ ಮಧುಶಂಕ ಅವರನ್ನು ಪೊಲೀಸರು ತಡೆದಾಗ ಇದು ಬೆಳಕಿಗೆ ಬಂದಿದೆ. ಅವರ ಬಳಿ ಸುಮಾರು 2.5 ಗ್ರಾಮ್ಗಳಷ್ಟು ಹೆರಾಯಿನ್ ಇತ್ತು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಮಧುಶಂಕ ಅವರನ್ನು 2 ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.