Udayavni Special

25ರಿಂದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ


Team Udayavani, Feb 23, 2020, 3:08 AM IST

25rinda

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆ.25ರಿಂದ ಮಾರ್ಚ್‌ 2ರವರೆಗೆ ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುರುರಾಜರ 425ನೇ ವರ್ಧಂತ್ಯುತ್ಸವ ನಿಮಿತ್ತ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿವೆ.

ವರ್ಧಂತ್ಯುತ್ಸವ ನಿಮಿತ್ತ ಮಾ.2ರಂದು ಬೆಳಗ್ಗೆ 8ಕ್ಕೆ ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಗುವುದು. ಅದೇ ದಿನ ಮಠದ ಪ್ರಾಕಾರದಲ್ಲಿ ಚೆನ್ನೈನ ರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಟ್ರಸ್ಟ್‌ನ 450 ಕಲಾವಿದರಿಂದ ನಾದಹಾರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಳೆದ 16 ವರ್ಷದಿಂದಲೂ ಈ ಸಂಸ್ಥೆಯ ಕಲಾವಿದರು ನಾದಹಾರ ಸಂಗೀತ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ಕಾರ್ಯಕ್ರಮ ವಿವರ
* ಫೆ.25ರಂದು ಸಂಜೆ 6ಕ್ಕೆ ಚೆನ್ನೈನ ವಿದ್ವಾನ್‌ ಶೇಖ್‌ ಮೆಹಬೂಬ್‌ ಸುಭಾನಿ ಮತ್ತು ತಂಡದಿಂದ ನಾದಸ್ವರಂ ಕಾರ್ಯಕ್ರಮ ನಡೆಯಲಿದೆ. 7 ಗಂಟೆಗೆ ಮಠದ ಕಾರ್ಯಕ್ರಮ ನಡೆಯಲಿದೆ.

* ಫೆ.26ರಂದು ಸಂಜೆ 6ಗಂಟೆಗೆ ಬೆಂಗಳೂರಿನ ಚೈತ್ರಾವಾಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7:30ಕ್ಕೆ ಬೆಂಗಳೂರಿನ ಜಾದೂಗಾರ ಕದಂಬ ಶ್ರೀನಿವಾಸ ಅವರಿಂದ ಜಾದು ಪ್ರದರ್ಶನ, 9 ಗಂಟೆಗೆ ಮೈಸೂರಿನ ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್‌ ಟ್ರಸ್ಟ್‌ನ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

* ಫೆ.27ರಂದು ಸಂಜೆ 6ಕ್ಕೆ ಬೆಂಗಳೂರಿನ ವಿದುಷಿ ವಸುಧಾ ಪ್ರಸಾದ ಮತ್ತು ವಿಭಾ ಅವರಿಂದ ವೀಣಾ ವಾದನ, 7:30ಕ್ಕೆ ಬೆಂಗಳೂರಿನ ಅರ್ಚನಾ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಬೆಂಗಳೂರಿನ ಸೂರ್ಯ ಆರ್ಟ್‌ ಇಂಟರ್‌ ನ್ಯಾಷನಲ್‌ ಸಂಸ್ಥೆಯ ತಂಡದಿಂದ ಶ್ರೀ ರಾಘವೇಂದ್ರ ವೈಭವೋತ್ಸವದ ನೃತ್ಯ ರೂಪಕ ಪ್ರದರ್ಶನ ಜರುಗಲಿದೆ.

* ಫೆ.28ರಂದು ಸಂಜೆ 6 ಗಂಟೆಗೆ ಚನ್ನರಾಯಪಟ್ಟಣದ ಶ್ವೇತಾ ಭಾರದ್ವಾಜ ಅವರಿಂದ ಭರತನಾಟ್ಯ, ಹುಬ್ಬಳ್ಳಿಯ ಭಾವದೀಪ ಶಿಕ್ಷಣ ಸಂಸ್ಥೆಯಿಂದ ಹರಿಸರ್ವೋತ್ತಮ ಸಾಂಸ್ಕೃತಿಕ ನಾಟಕ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿವೆ. 9 ಗಂಟೆಗೆ ರಾಯಚೂರಿನ ಜಿ. ಸುಮೇಧ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುವುದು.

* ಫೆ.29ರಂದು ಸಂಜೆ 6ಗಂಟೆಗೆ ಕರ್ನೂಲ್‌ನ ವಿದ್ವಾನ್‌ ರಾಮಕೃಷ್ಣ ವರಪ್ರಸಾದ ಅವರಿಂದ ಭಕ್ತಿಗೀತೆ ಗಾಯನ, 7:30ಕ್ಕೆ ಹುಬ್ಬಳ್ಳಿಯ ಬಾಲಚಂದ್ರ ನಾಕೋಡ್‌ ಮತ್ತು ಅರ್ಪಿತಾ ಪ್ರಹ್ಲಾದ ಜೋಶಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 9 ಗಂಟೆಗೆ ಬೆಂಗಳೂರಿನ ನಮ್ರತಾ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

* ಮಾರ್ಚ್‌ 1ರಂದು ಸಂಜೆ 6ಗಂಟೆಗೆ ಬೆಂಗಳೂರಿನ ರಾಮಕಲಾ ತಂಡದಿಂದ ದಾಸವಾಣಿ ಕಾರ್ಯಕ್ರಮ, ಬೆಂಗಳೂರಿನ ಶೃಶ್ರಾವ್ಯ ಆಚಾರ್‌ ಅವರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ. ಹೈದರಾಬಾದ್‌ನ ನಾಟ್ಯಾರ್ಪಣ ನೃತ್ಯ ಅಕಾಡೆಮಿ ತಂಡದಿಂದ ಕುಚೂಪುಡಿ ನೃತ್ಯ ಪ್ರದರ್ಶನ ನಡೆಯಲಿದೆ.

* ಮಾ.2ರಂದು ಸಂಜೆ 6 ಗಂಟೆಗೆ ಮಂತ್ರಾಲಯದ ಕಡಪ ಹನುಮಂತಾಚಾರ್‌ ಅವರಿಂದ ವೀಣಾವಾದನ ನಡೆಯಲಿದೆ.

ಗಣ್ಯರಿಗೆ ಸನ್ಮಾನ: ಬೆಂಗಳೂರಿನ ವಿದ್ವಾನ್‌ರಾದ ವಿಷ್ಣುದಾಸ ನಾಗೇಂದ್ರಾ ಚಾರ್‌, ರಘುಪತಿ ಉಪಾಧ್ಯಾಯ, ಉಡುಪಿಯ ವಿದ್ವಾನ್‌ ಬಿ.ಆರ್‌.ಗೋಪಾಲಾಚಾರ್ಯ, ತಿರುಪತಿಯ ವಿದ್ವಾನ್‌ ಡಾ| ರಾಮಲಾಲ್‌ ಶರ್ಮಾ, ಬೆಂಗಳೂರಿನ ವಿದ್ವಾನ್‌ ಗೋವಿಂದ ಭಟ್‌, ರಾಯಚೂರಿನ ಮಠಾಧಿ ಕಾರಿ ವಿಜೇಯಂದ್ರಾಚಾರ್‌, ಬೆಂಗಳೂರಿನ ಕೃಷ್ಣಾರಾಜ ಕುಟ್ಟಪಾಡಿ ಅವರಿಗೆ ಮಂತ್ರಾಲಯದ ಶ್ರೀರಾಯರ ಮಠದ ಯೋಗೀಂದ್ರ ಮಂಟಪದಲ್ಲಿ ನಡೆಯಲಿರುವ ಅಭಿನಂದನಾ ಮತ್ತು ಅಭಿವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.

ತೆಲಂಗಾಣದ ರಾಜ್ಯಪಾಲ ಡಾ| ತಮಿಳಸಾಯಿ ಸೌಂದರ್ಯರಾಜನ್‌, ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ತಮಿಳುನಾಡಿನ ಉಪಮುಖ್ಯಮಂತ್ರಿ ಒ.ಪೆನ್ನಾರಸೆಲ್ವಂ, ಆಂಧ್ರಪ್ರದೇಶದ ಸಚಿವರಾದ ಪೆಡ್ಡಿರೆಡ್ಡಿ ರಾಮಚಂದ್ರ ರೆಡ್ಡಿ, ಗುಮ್ಮನೂರು ಜೈರಾಮ್‌, ಕರ್ನೂಲ್‌ ಸಂಸದ ಕೆ.ಸಂಜೀವ ಕುಮಾರ, ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್‌, ತಮಿಳುನಾಡಿನ ಶಾಸಕ ಕೆ.ಕುಪ್ಪನ್‌, ಕೇರಳದ ಐ.ಜಿ.ಎಚ್‌.ವೆಂಕಟೇಶ, ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅ ಧಿಕಾರಿ ಅನಿಲ ಕುಮಾರ ಸಿಂಗಹಾಳ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

ಶ್ರೀ ರಾಮ, ಸೀತಾ ಪಾತ್ರಧಾರಿಗಳ ಸಂಭ್ರಮ

ಶ್ರೀ ರಾಮ, ಸೀತಾ ಪಾತ್ರಧಾರಿಗಳ ಸಂಭ್ರಮ

ಇತಿಹಾಸ ಸೃಷ್ಟಿಸಲಿದೆ ರಾಮ ಮಂದಿರ

ಇತಿಹಾಸ ಸೃಷ್ಟಿಸಲಿದೆ ರಾಮಮಂದಿರ; ಅಯೋಧ್ಯೆಯಿಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನುಭವ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

Sanjay-Manjrekar

ಸಂಜಯ್ ಮಾಂಜ್ರೇಕರ್‌ ಮನವಿ ತಿರಸ್ಕರಿಸಿದ ಬಿಸಿಸಿಐ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

Ghee

ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇತಿಹಾಸ ಸೃಷ್ಟಿಸಲಿದೆ ರಾಮ ಮಂದಿರ

ಇತಿಹಾಸ ಸೃಷ್ಟಿಸಲಿದೆ ರಾಮಮಂದಿರ; ಅಯೋಧ್ಯೆಯಿಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನುಭವ

ಮಳೆ ತುರ್ತು ನಿರ್ವಹಣೆ: 50 ಕೋ. ರೂ. ಬಿಡುಗಡೆಗೆ ಸಿಎಂ ಸೂಚನೆ

ಮಳೆ ತುರ್ತು ನಿರ್ವಹಣೆ: 50 ಕೋ. ರೂ. ಬಿಡುಗಡೆಗೆ ಸಿಎಂ ಸೂಚನೆ

ಕಾಂಗ್ರೆಸ್‌ ನಾಯಕರಿಂದ ರಾಮ ಜಪ!

ಕಾಂಗ್ರೆಸ್‌ ನಾಯಕರಿಂದ ರಾಮ ಜಪ!

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ರಾಜ್ಯದಲ್ಲಿ ಭೀಕರ ಮಳೆ, ಪ್ರವಾಹ ಭೀತಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರಿಗೆ ಗಂಭಿರ ಗಾಯ

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mysteryಹೊಸ ಸೇರ್ಪಡೆ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

ಶ್ರೀ ರಾಮ, ಸೀತಾ ಪಾತ್ರಧಾರಿಗಳ ಸಂಭ್ರಮ

ಶ್ರೀ ರಾಮ, ಸೀತಾ ಪಾತ್ರಧಾರಿಗಳ ಸಂಭ್ರಮ

ಇತಿಹಾಸ ಸೃಷ್ಟಿಸಲಿದೆ ರಾಮ ಮಂದಿರ

ಇತಿಹಾಸ ಸೃಷ್ಟಿಸಲಿದೆ ರಾಮಮಂದಿರ; ಅಯೋಧ್ಯೆಯಿಂದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನುಭವ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

ಭೂಮಿಪೂಜೆ ಕಾರ್ಯಕ್ರಮದಲ್ಲಿ ಕಡೆಗೂ ಉಮಾ ಭಾಗಿ

Sanjay-Manjrekar

ಸಂಜಯ್ ಮಾಂಜ್ರೇಕರ್‌ ಮನವಿ ತಿರಸ್ಕರಿಸಿದ ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.