ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ
ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ
Team Udayavani, Jan 20, 2022, 5:55 AM IST
ಮಂಗಳೂರು: ಮಂಗಳೂರು ರಥೋತ್ಸವ ಮತ್ತು ಶ್ರೀ ವೆಂಕಟರಮಣ ದೇವಸ್ಥಾನದ ಪುನಃ ಪ್ರತಿಷ್ಠಾ ದಶಮಾನೋತ್ಸವ ಹಾಗೂ ಶ್ರೀ ದೇವರ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಬುಧವಾರ ಬೆಳಗ್ಗೆ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿದರು. ಅವರಿಗೆ ಭವ್ಯ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ದೇವರ ದರ್ಶನ, ಪೂಜೆಯ ಬಳಿಕ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥದಲ್ಲಿ ಇರಿಸ ಲಿರುವ ಶ್ರೀಗಂಧ ಹಾಗೂ ರಕ್ತ ಚಂದನದಿಂದ ತಯಾರಿಸಲ್ಪಟ್ಟ ಶ್ರೀ ದೇವರ ಪೀಠ ಮತ್ತು ನೂತನ ರಥ ವನ್ನು ಶ್ರೀಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಗುಲದ ಮೊಕ್ತೇಸರರಾದ ಸಿ.ಎಲ್. ಶೆಣೈ, ಕೆ.ಪಿ. ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ಮುಂಡ್ಕೂರ್ ರಾಮದಾಸ್ ಕಾಮತ್, ತಂತ್ರಿ ಪಂಡಿತ್ ನರಸಿಂಹ ಆಚಾರ್ಯ, ಲೆಕ್ಕ ಪರಿಶೋಧಕ ಎಂ. ಜಗನ್ನಾಥ್ ಕಾಮತ್, ವೆಂಕಟೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.