ಮತ್ತೆ ಸೀಲ್‌ಡೌನ್‌ನತ್ತ ರಾಜ್ಯ? ಜನರಿಂದಲೇ ಸ್ವಯಂಪ್ರೇರಿತ ನಿರ್ಬಂಧ

Team Udayavani, Jun 22, 2020, 6:40 AM IST

ಮತ್ತೆ ಸೀಲ್‌ಡೌನ್‌ನತ್ತ ರಾಜ್ಯ? ಜನರಿಂದಲೇ ಸ್ವಯಂಪ್ರೇರಿತ ನಿರ್ಬಂಧ

ಬೆಂಗಳೂರು: ನಿತ್ಯ ಬೆಳಕಿಗೆ ಬರುತ್ತಿರುವ ಸೋಂಕು ಮತ್ತು ಸೋಂಕು ಪೀಡಿತರ ಸಾವು ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದರಿಂದ ರಾಜ್ಯವು ಮತ್ತೆ “ಅನಧಿಕೃತ ಸೀಲ್‌ಡೌನ್‌’ ನತ್ತ ಮುಖ ಮಾಡುತ್ತಿದೆ!

ಕೋವಿಡ್-19 ಹೆಚ್ಚು ದಾಖಲಾಗುತ್ತಿ ರುವ ಪ್ರದೇಶಗಳಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ಸೀಲ್‌ಡೌನ್‌ ಮಾಡುತ್ತಿ ದ್ದಾರೆ. ಮನೆಗಳಿಂದ ಹೊರಬೀಳುವು ದನ್ನು ಕಡಿಮೆ ಮಾಡುತ್ತಿದ್ದಾರೆ. ಹೊರಗಿನವರು ಬಾರದಂತೆ ಕಾವಲು ಕಾಯುತ್ತಿದ್ದಾರೆ. ಬೆಂಗಳೂರು, ಕನಕ ಪುರ ಸೇರಿದಂತೆ ಹಲವು ಕಡೆಗಳಲ್ಲಿ ಇಂಥ ಬೆಳವಣಿಗೆ ಕಂಡುಬರುತ್ತಿದೆ.

ಇದುವರೆಗೆ ಜನ ಸುದೀರ್ಘ‌ ಲಾಕ್‌ಡೌನ್‌ ಕಂಡಿದ್ದರು. ಅದು ತೆರವಾದ ಬೆನ್ನಲ್ಲೇ ದಾಖಲಾಗುತ್ತಿರುವ ಸೋಂಕು ಮತ್ತು ಸಾವಿನ ಪ್ರಕರಣಗಳ ಭಾರೀ ಹೆಚ್ಚಳ ಬೆಚ್ಚಿಬೀಳಿಸುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲೇ ವಾತಾವರಣ ಉತ್ತಮ ವಾಗಿತ್ತು ಎಂಬ ಅಭಿಪ್ರಾಯ ಸಾರ್ವ ಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಒಂದು ವೇಳೆ ಸೋಂಕಿನ ಸರಣಿ ಇದೇ ವೇಗದಲ್ಲಿ ಸಾಗಿದರೆ ರಾಜ್ಯ ಮತ್ತೆ ಸೀಲ್‌ಡೌನ್‌ನತ್ತ ಮುಖ ಮಾಡಿದರೂ ಅಚ್ಚರಿ ಇಲ್ಲ.

9 ಸಾವಿರ ದಾಟಿದ ಸೋಂಕುಪೀಡಿತರು
ರಾಜ್ಯದಲ್ಲಿ ಕೋವಿಡ್-19 ಸೋಂಕುಪೀಡಿತರ ಸಂಖ್ಯೆ 9 ಸಾವಿರ ದಾಟಿದೆ. ರವಿವಾರ ಮತ್ತೆ 453 ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಸದ್ಯ 3,391 ಸಕ್ರಿಯ ಪ್ರಕರಣಗಳಿದ್ದು, 5,618 ಮಂದಿ ಗುಣಮುಖರಾಗಿದ್ದಾರೆ. ಅತ್ಯಂತ ಆಘಾತಕಾರಿ ಅಂಶವೆಂದರೆ, ರಾಜಧಾನಿ ಬೆಂಗಳೂರಿನಲ್ಲೇ ರವಿವಾರವೇ 196 ಪ್ರಕರಣಗಳು ಕಾಣಿಸಿಕೊಂಡಿವೆ.

ನಿತ್ಯ 300 ಪ್ರಕರಣ; 4 ಸಾವು!
ದೇಶಾದ್ಯಂತ ಜೂನ್‌ 8ರಿಂದ ಲಾಕ್‌ಡೌನ್‌ ತೆರವಾದರೆ ರಾಜ್ಯವು ಮೇ 18ರಿಂದಲೇ ನಿರ್ಬಂಧಗಳಿಂದ ತೆರವಾಗಿದೆ. ಆ ಬಳಿಕ ಸೋಂಕುಪೀಡಿತರ ಸಂಖ್ಯೆ ಕೈಮೀರುತ್ತಿದೆ. ರವಿವಾರ 453 ಪ್ರಕರಣಗಳು ದೃಢಪಟ್ಟಿದ್ದು, ಜೂ.1ರಿಂದ ಇದುವರೆಗೆ ಅಂದರೆ ಕೇವಲ 20 ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಪ್ರತೀ ದಿನ ಸರಾಸರಿ 300 ಪ್ರಕರಣಗಳು ದಾಖಲಾಗಿದ್ದು, ನಿತ್ಯ 4ರಿಂದ 5 ಜನರು ಸಾವನ್ನಪ್ಪಿದ್ದಾರೆ.

15 ಸಾವಿರ ಹೆಚ್ಚಳ
ಹೊಸದಿಲ್ಲಿ: ದೇಶದ ಮಟ್ಟದಲ್ಲಿ ಶನಿವಾರ ಬೆಳಗ್ಗೆಯಿಂದ ರವಿವಾರ ಬೆಳಗ್ಗೆ 8 ಗಂಟೆಯ ವರೆಗೆ ಸೋಂಕುಪೀಡಿತರ ಸಂಖ್ಯೆ 15 ಸಾವಿರ ದಷ್ಟು ಹೆಚ್ಚಳವಾಗಿದೆ. ಇತ್ತೀಚೆಗೆ ದಿನವೂ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ತೀರಾ ಆತಂಕ ಉಂಟು ಮಾಡಿದೆ.

ಈ ಮೊದಲು ಸೋಂಕುಪೀಡಿತ ಪ್ರಕರಣಗಳಲ್ಲಿ ಶೇ. 90ರಷ್ಟು ಹೊರಗಿನಿಂದ ಬಂದವರೇ ಆಗಿದ್ದರು. ಆದರೆ ಕಳೆದ ಒಂದು ವಾರದಿಂದ ಈ ವಲಸಿಗರಲ್ಲಿ ಸೋಂಕಿನ ಪ್ರಮಾಣ ಶೇ. 25ರಿಂದ 30ಕ್ಕೆ ಇಳಿಕೆಯಾಗಿದ್ದು, ಸ್ಥಳೀಯರಲ್ಲಿ ಸೋಂಕು ವ್ಯಾಪಿಸಿದೆ. ಜತೆಗೆ ಸೋಂಕುಪೀಡಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

ಟಾಪ್ ನ್ಯೂಸ್

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಧಾರ್ಮಿಕ ಕ್ಷೇತ್ರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಡಾ| ಹೆಗ್ಗಡೆ

ಧಾರ್ಮಿಕ ಕ್ಷೇತ್ರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಡಾ| ಹೆಗ್ಗಡೆ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.