Udayavni Special

ಎಷ್ಟಿದೆಯೋ ಅಷ್ಟಕ್ಕೇ ಹೊಂದಿಕೊಂಡು ಬದುಕು


Team Udayavani, Jun 3, 2020, 4:28 AM IST

eshtideyo

ಕೋವಿಡ್‌ 19ನಿಂದಾಗಿ ಲಾಕ್‌ಡೌನ್‌ ಆದಾಗ, ನೆಮ್ಮದಿಯಿಂದ ಉಸಿರುಬಿಟ್ಟಿದ್ದು ನಿಜ. ಬೆಳಗ್ಗೆ ದಡಬಡಾಯಿಸಿ ಏಳಬೇಕಿಲ್ಲ. ಒಂದೇ ಉಸಿರಿನಲ್ಲಿ ಮನೆ  ಕೆಲಸ ಮಾಡಿ, ಅಡುಗೆ- ತಿಂಡಿ ತಯಾರಿಸಿ, ಗಬಗಬನೆ ಒಂದಿಷ್ಟು ತಿಂದು ಓಡಬೇಕಿಲ್ಲ.  ಬಸ್ಸಿಗಾಗಿ ಕಾಯುವ ಒತ್ತಡವಿಲ್ಲ. ಸಂಜೆ ಸೋತು ಸೊಪ್ಪಾಗಿ ಬಂದು, ರಾತ್ರಿ ಅಡುಗೆ ಮಾಡುವ ಕಷ್ಟವಿಲ್ಲ. ಇಷ್ಟ ಬಂದಾಗ ಏಳಬಹುದು, ಅಡುಗೆ- ತಿಂಡಿ ನಿಧಾನವಾದರೂ ಕೇಳುವವರಿಲ್ಲ.

ಓದಲು, ಬರೆಯಲು ಬೇಕಾದಷ್ಟು ಸಮಯವಿದೆ ಅಂತ, ಕೊರೊನಾ ಆತಂಕದ  ನಡುವೆಯೂ ಒಳಗೊಳಗೇ ಖುಷಿಪಟ್ಟಿದ್ದೆ. ಅವತ್ತೂ ಎಂದಿನಂತೆ ಬೇಗ ಎದ್ದ ಯಜಮಾನರು ವಾಕಿಂಗ್‌ ಮುಗಿಸಿ, ಪೇಪರ್‌ ಓದಿ, ಕಾಫಿ ಕುಡಿದು, ತಿಂಡಿಗೋಸ್ಕರ ಹೊಂಚು  ಹಾಕಿ ಕುಳಿತಿದ್ದರು. ಇನ್ನೂ ಮಲಗಿಯೇ ಇದ್ದ ನನ್ನನ್ನು ಏಳಿಸಲು ಮನಸ್ಸು ಬಾರದೆ, ಅರ್ಧ ಗಂಟೆಗೊಮ್ಮೆ ರೂಮಿಗೆ ಬಂದು, ಆರೂವರೆ ಆಯ್ತು, ಈಗ ಏಳು ಗಂಟೆ ಅಂತ ಬಹು ಮೆಲ್ಲಗೆ ಹೇಳುತ್ತಾ ಆಚೆ ಈಚೆ ಓಡಾಡುತ್ತಿರುವುದನ್ನು ನೋಡಲಾರದೆ,  ಏಳಲೇಬೇಕಾಯಿತು.

ಪಾಪ, ರಾತ್ರಿ ಬೇಗ ಊಟ ಮುಗಿಸಿ ಮಲಗಿರುತ್ತಾರೆ. ಬೆಳಗ್ಗೆ ಬೇಗ ಅವರಿಗೆ ಹಸಿವಾಗುತ್ತದೆ ಅಂತ, ನಿಧಾನವಾಗಿ ಏಳ್ಳೋಣ ಅಂದುಕೊಂಡ ನಿರ್ಧಾರವನ್ನು ಬದಲಿಸಿದೆ. ಈಗ ಎಲ್ಲರಿಗೂ, ದಿನವೂ  ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಆಗುತ್ತಿದೆ. ಮೊದಲಾದರೆ ಬೆಳಗ್ಗೆ, ರಾತ್ರಿ ಮಾತ್ರ ಅಡುಗೆ ಮಾಡುತ್ತಿದ್ದೆ. ಈಗ ಮೂರು ಹೊತ್ತು ಅಡುಗೆ. ಅಷ್ಟೇ ಅಲ್ಲ, ನಾನು ಮನೆಯಲ್ಲಿಯೇ ಇದ್ದೀನಿ ಅಂತ, ಮಗಳಿಂದ ಒಂದೊಂದೇ ತಿಂಡಿ- ತಿನಿಸಿನ ಬೇಡಿಕೆ.

ಅದಕ್ಕೆ ಪತಿರಾಯರಿಂದಲೂ ಒತ್ತಾಸೆ. ಹಾಗಾಗಿ, ಈ ಲಾಕ್‌ ಡೌನ್‌ ಸಮಯದಲ್ಲಿ ಹೆಚ್ಚು ಹೊತ್ತು ಕಳೆದಿದ್ದು ಅಡುಗೆ ಮನೆಯಲ್ಲಿಯೇ. ನಡುವೆ ಒಂದಿಷ್ಟು ಓದು ಮತ್ತು ಬರಹ. ಸಂಜೆ ಹಳೆಯ ಹಾಡು  ಕೇಳುತ್ತಾ ಸಿಟ್‌  ಔಟ್‌ನಲ್ಲಿಯೇ ಅರ್ಧ, ಮುಕ್ಕಾಲು ಗಂಟೆ ವಾಕಿಂಗ್. ರಾತ್ರಿಗೆ ಪ್ರತಿನಿತ್ಯ ರೊಟ್ಟಿಯ ಸಮಾರಾಧನೆ ಇರಲೇಬೇಕು, ಮಲೆನಾಡಿನ ಪತಿ ಮಹಾಶಯರಿಗೆ. ಇನ್ನು ರಜೆ ಅಂತ ಅನ್ನಿಸುವುದು ಹೇಗೆ? ಹೊರಗಿನ ಕೆಲಸಕ್ಕೆ ರಜೆ ಅಷ್ಟೇ.

ಮನೆಕೆಲಸಕ್ಕೆ  ವರ್‌ ಟೈಂ ಕೆಲಸ. ಅದೆಷ್ಟೋ  ವರ್ಷಗಳ ನಂತರ, ಸಂಪೂರ್ಣ ಗೃಹಿಣಿ ಪಾತ್ರ ನಿರ್ವಹಿಸಿದ ನೆಮ್ಮದಿ. ಹೀಗೆ ತಿಂಗಳುಗಟ್ಟಲೆ ಮನೆಯಿಂದ ಹೊರಗೆ ಹೋಗದೇ ಉಳಿದದ್ದು, ಜೀವನದಲ್ಲಿ ಇದೇ ಮೊದಲು. ಶಾಪಿಂಗ್‌,  ಸಿನಿಮಾ, ಹೋಟೆಲ…, ಪ್ರವಾಸ, ಮದುವೆ, ಗೃಹಪ್ರವೇಶ, ನಾಮಕರಣ ಮುಂತಾದವಕ್ಕೆ ಹಾಜರಾಗದೆ ಇರಲು ಸಾಧ್ಯವೇ?

ಬಂಧು ಬಳಗ, ಸ್ನೇಹಿತರ, ಆತ್ಮೀಯರ ಮನೆಗಳಿಗೆ ಹೋಗದೆ, ಅವರು ನಮ್ಮ ಮನೆಗೆ ಬಾರದೆ ಬದುಕಲು ಸಾಧ್ಯವೇ  ಅನ್ನೋ ಭ್ರಮೆಯಲ್ಲಿ ಇದ್ದದ್ದು ನಿಜ. ಆದರೆ ಸಂದರ್ಭ, ಸನ್ನಿವೇಶ, ಏನೆಲ್ಲವನ್ನೂ ಸಾಧ್ಯವಾಗಿಸಿದೆ. ಮನೆಯಲ್ಲಿಯೇ ಇರುವುದಕ್ಕೆ ಮನಸ್ಸು ಒಗ್ಗಿ ಹೋಗಿದೆ. ಅದು ಬೇಕು ಇದು ಬೇಕು ಅನ್ನುತ್ತಿದ್ದವರೆಲ್ಲರೂ, ಈಗ ಏನಿದೆಯೋ, ಎಷ್ಟಿದೆಯೋ ಅಷ್ಟಕ್ಕೇ ಹೊಂದಿಕೊಳ್ಳುತ್ತಿದ್ದಾರೆ. ಇದೇ  ಅಲ್ಲವೇ ಬದುಕು. ಅದಕ್ಕೇ ಇರಬೇಕು ಡಿವಿಜಿ ಹೇಳಿದ್ದು-

ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೋ ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ನಿನ್ನೊಡಲೆ ಚಿತೆ ಜಗದ ತಂಟೆಗಳೆ ಸವುದೆಯುರಿ ಮಣ್ಣೆ ತರ್ಪಣ ನಿನಗೆ- ಮಂಕುತಿಮ್ಮ 

* ಎನ್.ಶೈಲಜಾ ಹಾಸನ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

ಮಂಡ್ಯದಲ್ಲಿ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

ಸಿಬ್ಬಂದಿಗೆ ಸೋಂಕು ಹಿನ್ನಲೆ ಮೈಸೂರು ಮನಪಾ ಸೀಲ್ ಡೌನ್: ಆಯುಕ್ತರಿಗೂ ಹೋಮ್ ಕ್ವಾರಂಟೈನ್

ಸಿಬ್ಬಂದಿಗೆ ಸೋಂಕು ಹಿನ್ನಲೆ ಮೈಸೂರು ಮನಪಾ ಸೀಲ್ ಡೌನ್: ಆಯುಕ್ತರಿಗೂ ಹೋಮ್ ಕ್ವಾರಂಟೈನ್

ತೆಂಕನಿಡಿಯೂರು: ರಸ್ತೆಯಲ್ಲಿ ಅಡ್ಡ ಹಾಕಿ ಯುವಕನನ್ನು ಇರಿದು ಕೊಲೆ

ತೆಂಕನಿಡಿಯೂರು: ರಸ್ತೆಯಲ್ಲಿ ಅಡ್ಡ ಹಾಕಿ ಯುವಕನನ್ನು ಇರಿದು ಕೊಲೆ

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಕೇರಳಿಗರಿಗೆ ಮಂಗಳೂರು ಪ್ರವೇಶ ನಿರ್ಬಂಧ : ಗಡಿಭಾಗ ತಲಪಾಡಿಯಲ್ಲಿ ಬಿಗುವಿನ ವಾತಾವರಣ

ಹುದ್ದೆ ಕಾಯಂ ಮಾಡುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಉಪವಾಸ ಜೊತೆ ಕೆಲಸ

ಹುದ್ದೆ ಕಾಯಂ ಮಾಡುವಂತೆ ಆಗ್ರಹಿಸಿ ಗುತ್ತಿಗೆ ವೈದ್ಯರ ಉಪವಾಸ ಜೊತೆ ಕೆಲಸ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗಂಗೊಳ್ಳಿಯಲ್ಲಿ ಎರಡು ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bondage

ಮದುವೆ ಎಂಬುದು ಬಂಧನವಾದಾಗ…

self teach

ಸ್ವಾವಲಂಬನೆಯ ಪಾಠ ಕಲಿಸಿತು ಕೋವಿಡ್‌ 19!

balya-male

ಬಾಲ್ಯದ ಮಳೆ ದಿನಗಳು…

utsaha

ಉತ್ಸಾಹವಿದ್ದರೆ ಸಾಲದು ಧೈರ್ಯವೂ ಬೇಕು

i know

ನಿಂಗೆ ಗೊತ್ತಿರುತ್ತೆ ಅಂದುಕೊಂಡೆ…‌

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

ತಿರುವನಂತಪುರಕ್ಕೆ ಟ್ರಿಪಲ್‌ ಲಾಕ್‌ಡೌನ್‌

ತಿರುವನಂತಪುರಕ್ಕೆ ಟ್ರಿಪಲ್‌ ಲಾಕ್‌ಡೌನ್‌

ಆರು ಮಂದಿ ವಿರುದ್ಧ ಚಾರ್ಜ್‌ಶೀಟ್‌

ಆರು ಮಂದಿ ವಿರುದ್ಧ ಚಾರ್ಜ್‌ಶೀಟ್‌

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

ಮಂಡ್ಯದಲ್ಲಿ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ ಭಾರತ

ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ ಭಾರತ

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನಿರಶನ

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನಿರಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.