ಸುಂಕದಕಟ್ಟೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳವು ಪ್ರಕರಣ : ಓರ್ವನ ಬಂಧನ
Team Udayavani, Jan 21, 2021, 8:17 PM IST
ಬಜಪೆ: ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2020ರ ಡಿ.9ರಂದು ಕಚೇರಿಯ ಬೀಗ ಮುರಿದು ಕಪಾಟಿನಲ್ಲಿದ್ದ 5.41ಲ. ರೂ. ಕಳವು ಮಾಡಿದ್ದ ಆರೋಪದಲ್ಲಿ ವಾಮಂಜೂರು ತಿರುವೈಲು ಗ್ರಾಮದ ಈಸ್ಲಾ ಉಲ್ ಜುಮ್ಮಾ ಮಸೀದಿ ಕಾಂಪೌಂಡಿನ ನಿವಾಸಿ ಆರೀಫ್ (26)ನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಈತನ ಮೇಲೆ ಕಳವು, ಸುಲಿಗೆ, ದರೋಡೆ, ಕೊಲೆಗೆ ಯತ್ನ ಮತ್ತು ಎ.ಟಿ.ಎಂ. ಕಳವಿಗೆ ಸಂಬಂಧಿಸಿ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 4, ಕಾವೂರು ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ತಲಾ 2, ಬಂಟ್ವಾಳ ನಗರ , ಗ್ರಾಮಾಂತರ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸಹಿತ ಸುಮಾರು 18 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ !
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮತ್ತು ಬಜಪೆ ಪೊಲೀಸ್ ನಿರೀಕ್ಷಕ ಕೆ. ಆರ್. ನಾಯ್ಕ ನೇತೃತ್ವದಲ್ಲಿ ಪಿಎಸ್‌ಐ ಪೂವಪ್ಪ ಎಚ್.ಎಂ., ರಾಘವೇಂದ್ರ ನಾಯ್ಕ, ಎಎಸ್‌ಐ ರಾಮ ಪೂಜಾರಿ, ಲಕ್ಷ್ಮಣ ಗೌಡ, ಸಿಬಂದಿ ವರ್ಗದ ಸುಧೀರ್ ಶೆಟ್ಟಿ , ಸಂತೋಷ್ ಡಿ.ಕೆ., ರಶೀದ್ ಶೇಖ್, ಲಕ್ಷ್ಮಣ್, ವಕೀಲ್ ಲಮಾಣಿ ಮತ್ತು ವಿನೋದ್ ಕುಮಾರ್ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ “ಸ್ವಯಂ-ಆರೈಕೆ”ಯ ಉಡುಗೊರೆ
ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ
ತೀರಲಿ ಜನರ ಸಂಕಷ್ಟ : ಇಂದು ಬಿಎಸ್ವೈ 8ನೇ ಬಜೆಟ್
ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್ಚೇಂಜರ್ ಉಪಗ್ರಹ ಉಡಾವಣೆ
ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು