ಶಿಕ್ಷಣವು ಗ್ರಾಹಕ ಸಂರಕ್ಷಣ ಕಾಯ್ದೆಯಲ್ಲಿನ ಸೇವೆಯೇ?


Team Udayavani, Nov 4, 2021, 6:06 AM IST

ಶಿಕ್ಷಣವು ಗ್ರಾಹಕ ಸಂರಕ್ಷಣ ಕಾಯ್ದೆಯಲ್ಲಿನ ಸೇವೆಯೇ?

ಹೊಸದಿಲ್ಲಿ: “ಶಿಕ್ಷಣ ಎನ್ನುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿರುವ ಸೇವೆಯೇ?’ ಇಂಥದ್ದೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಬಂದಿದೆ.

ಲಕ್ನೋದ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಈ ಕುರಿತು ಪರಿಶೀಲಿಸಲು ಸಮ್ಮತಿಸಿದೆ. ಜತೆಗೆ ಮತ್ತೊಂದು ಪ್ರಕರಣದಲ್ಲಿ ಇದೇ ರೀತಿಯ ವಿಚಾರವು ಇತ್ಯರ್ಥಕ್ಕೆ ಬಾಕಿಯಿದ್ದು, ಅದನ್ನೂ ಇದರ ಜತೆಗೆ ಸೇರಿಸಿ ಒಟ್ಟಿಗೇ ವಿಚಾರಣೆ ನಡೆಸುವುದಾಗಿ ಹೇಳಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಆದೇಶ ಹೊರಡಿಸಿದ್ದ  ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ, “ಶೈಕ್ಷಣಿಕ ಸಂಸ್ಥೆಗಳು 1986ರ ಗ್ರಾಹಕ ರಕ್ಷಣ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ, ಈಜು ಸೇರಿದಂತೆ ಹಲವು ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡ ಶಿಕ್ಷಣವನ್ನು ಈ ಕಾಯ್ದೆಯನ್ವಯ “ಸೇವೆ’ ಎಂದು ಪರಿಗಣಿಸಲೂ ಆಗುವುದಿಲ್ಲ’ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಲಕ್ನೋ ನಿವಾಸಿಯೊಬ್ಬರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅವರ ಅರ್ಜಿ ಪರಿಗಣಿಸಿರುವ ನ್ಯಾ| ಡಿ.ವೈ. ಚಂದ್ರಚೂಡ್‌ ಮತ್ತು ಬಿ.ವಿ.ನಾಗರತ್ನಾ ಅವರನ್ನೊಳಗೊಂಡ ನ್ಯಾಯಪೀಠ, “ಶಿಕ್ಷಣವು ಗ್ರಾಹಕ ರಕ್ಷಣ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಸೇವೆಯೇ’ ಎಂದು ಪರಿಶೀಲಿಸಲು ಒಪ್ಪಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಅಫ್ಘಾನಿಸ್ಥಾನ ವಿರುದ್ಧ ಅಬ್ಬರಿಸಿದ ಭಾರತ

ಏನಿದು ಪ್ರಕರಣ?: ಅರ್ಜಿದಾರನ ಮಗ ಕಲಿಯುತ್ತಿರುವ ಶಾಲೆಯು 2007ರಲ್ಲಿ “ಬೇಸಗೆ ಶಿಬಿರ’ ಆಯೋಜಿಸಿತ್ತು. ಅಲ್ಲಿ, ಈಜು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು 1,000 ರೂ. ಶುಲ್ಕ ಪಾವತಿಸುವಂತೆ ಸೂಚಿಸಿತ್ತು. 2007ರ ಮೇ 28ರಂದು ಶಾಲೆಯಿಂದ ಅರ್ಜಿದಾರ ವ್ಯಕ್ತಿಗೆ ಕರೆ ಬಂದಿತ್ತು. “ನಿಮ್ಮ ಮಗ ಅಸ್ವಸ್ಥನಾಗಿದ್ದಾನೆ. ಕೂಡಲೇ ಬನ್ನಿ’ ಎಂದು ಹೇಳಿದ್ದರು. ಈಜುವ ವೇಳೆ ಬಾಲಕ ನೀರಿನಲ್ಲಿ ಮುಳುಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವನು ಅಸುನೀಗಿದ್ದ.

ಈ ಹಿನ್ನೆಲೆಯಲ್ಲಿ ರಾಜ್ಯ ಗ್ರಾಹಕ ಆಯೋಗದ ಮೊರೆ ಹೋಗಿದ್ದ ವ್ಯಕ್ತಿ, ಶಾಲೆಯ ನಿರ್ಲಕ್ಷ್ಯದಿಂದಾಗಿ ಮಗ ಸಾವನ್ನಪ್ಪಿದ್ದು, 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೋರಿದ್ದರು. ಆದರೆ, ದೂರುದಾರನು “ಗ್ರಾಹಕ’ ಅಲ್ಲ ಎಂಬ ಕಾರಣ ಹೇಳಿ ಆಯೋಗವು ಅರ್ಜಿಯನ್ನು ವಜಾ ಮಾಡಿತ್ತು. ರಾಷ್ಟ್ರೀಯ ಆಯೋಗದ ಮೊರೆ ಹೋದಾಗ, ಅದು ಕೂಡ ರಾಜ್ಯ ಆಯೋಗದ ತೀರ್ಪನ್ನೇ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಸುಪ್ರೀಂ ಮೆಟ್ಟಿಲೇರಿದ್ದರು.

ಟಾಪ್ ನ್ಯೂಸ್

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ರಸ್ತೆಯಲ್ಲೇ ಹರಡಿದ್ದ ಹುರುಳಿ ಸೊಪ್ಪು : ಗರ್ಭಿಣಿಯನ್ನು ಹೊತ್ತ ಆಂಬ್ಯುಲೆನ್ಸ್ ಸವಾರನ ಪರದಾಟ

ಆಂಬ್ಯುಲೆನ್ಸ್ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ಅವಾಂತರ : ಗರ್ಭಿಣಿ ಪರದಾಟ, ಚಾಲಕ ಸುಸ್ತು

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಹಳೇ ಲ್ಯಾಂಡ್‌ ರೋವರ್‌ 3 ಎಂ.ಎಸ್‌.ಧೋನಿ ಪಾಲು

ಹಳೇ ಲ್ಯಾಂಡ್‌ ರೋವರ್‌ 3 ಎಂ.ಎಸ್‌.ಧೋನಿ ಪಾಲು!

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

1-asewewewe

ಗೋವಾ ಮಹಾಘಟಬಂಧನ : ಮೈತ್ರಿ ಘೋಷಿಸಿದ ಶಿವಸೇನೆ ಮತ್ತು ಎನ್‍ಸಿಪಿ; ಕಾಂಗ್ರೆಸ್ ಇಲ್ಲ

1-sdsad

ಗೋವಾ ಸಿಎಂ ಅಭ್ಯರ್ಥಿ: ಭಂಡಾರಿ ಸಮುದಾಯಯಕ್ಕೆ ಮಣೆ ಹಾಕಿದ ಆಪ್

1-adasd

ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ: ಸಚಿವೆ ಶೋಭಾ ಮಹತ್ವದ ಪಾತ್ರ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

ಮನೆ ಬಾಗಿಲಿಗೆ ಪಿಂಚಣಿ ಕಾರ್ಯಕ್ರಮ ಮುಂದೂಡಿಕೆ

shivamogga news

473 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ದ್ತಯುಇಕಮನಬವಚಷಱ

ಖರ್ಗೆದ್ವಯರಿಗಾಗಿ ದತ್ತ ದೇಗುಲದಲ್ಲಿ ಪೂಜೆ

ಎರತಯುಇಕಜನಬವಚಷ

ಶಿಕ್ಷಣ ಇಲಾಖೆ ಆದೇಶ ಹಿಂಪಡೆಯಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.