ಕಾನೂನು ಹೋರಾಟದಲ್ಲಿ ರಿಲಯನ್ಸ್ ವಿರುದ್ಧ ಅಮೆಜಾನ್ಗೆ ಜಯ
Team Udayavani, Aug 6, 2021, 6:01 PM IST
ನವದೆಹಲಿ: ಭಾರತದ ಆನ್ಲೈನ್ ವ್ಯಾಪಾರದ ಪ್ರತಿ ಸ್ಪರ್ಧಿಗಳಾದ ಮುಕೇಶ್ ಅಂಬಾನಿ ಮತ್ತು ಜೆಫ್ ಬೆಜೋಸ್ ನಡುವಿನ ಕಾನೂನು ಹೋರಾಟದಲ್ಲಿ ಜೆಫ್ ಗೆ ಜಯದಕ್ಕಿದೆ.
ಫ್ಯೂಚರ್ ಗ್ರೂಪ್ನ ರಿಟೇಲ್ ಆಸ್ತಿಯನ್ನು ಖರೀದಿಸುವ 3.4 ಶತ ಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ರಿಲಯನ್ಸ್ ಕಂಪನಿ ಮುಂದುವರಿ ಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಇದರಿಂದಾಗಿ ಅಮೆಜಾನ್ಗೆ ದೊಡ್ಡ ಯಶಸ್ಸುಸಿಕ್ಕಂತಾಗಿದೆ. ತನ್ನ ಪಾಲುದಾರ ಸಂಸ್ಥೆ ಫ್ಯೂಚರ್ ಗ್ರೂಪ್ ವಿರುದ್ಧ ಅಮೆಜಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತನ್ನ ರಿಟೇಲ್ ಆಸ್ತಿಗಳನ್ನು ರಿಲಯನ್ಸ್ಗೆ ಮಾರಾಟ ಮಾಡಲು ಒಪ್ಪುವ ಮೂಲಕ ಫ್ಯೂಚರ್ ಗ್ರೂಪ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅಮೆಜಾನ್ ಆರೋಪಿಸಿತ್ತು. 2020ರ ಅಕ್ಟೋಬರ್ನಲ್ಲಿ ಸಿಂಗಾಪುರದ ತುರ್ತು ಮಧ್ಯಸ್ಥಿಕೆ ನ್ಯಾಯಾಲಯ ಕೂಡ ರಿಲ ಯನ್ಸ್ ಜೊತೆ ಫ್ಯೂಟರ್ ರಿಟೇಲ್ ವಿಲೀನ ಆಗುವಂತಿಲ್ಲ ಎಂದು ತೀರ್ಪು ನೀಡಿತ್ತು.
ಈಗ ಸುಪ್ರೀಂ ಕೋರ್ಟ್, ವಿದೇಶವೊಂದರ ನ್ಯಾಯಾಧಿಕ ರಣ ನೀಡಿರುವ ತೀರ್ಪನ್ನು ಭಾರತದ ಕಾನೂನಿನ ಅನ್ವಯ ಜಾರಿ ಮಾಡಲು ಸಾಧ್ಯ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ