ಟಿ20 ರ್‍ಯಾಂಕಿಂಗ್: 5ಕ್ಕೆ ಏರಿದ ಕೆ.ಎಲ್. ರಾಹುಲ್
Team Udayavani, Nov 25, 2021, 5:13 AM IST
ದುಬಾೖ: ನೂತನ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಕೆ.ಎಲ್. ರಾಹುಲ್ ಒಂದು ಸ್ಥಾನ ಏರಿಕೆ ಕಂಡು 5ನೇ ಶ್ರೇಯಾಂಕದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಟಾಪ್-10 ಯಾದಿಯಿಂದ ಹೊರಬಿದ್ದಿದ್ದಾರೆ. ಪಾಕಿಸ್ಥಾನದ ನಾಯಕ ಬಾಬರ್ ಆಜಂ ಅಗ್ರಸ್ಥಾನಲ್ಲಿ ಮುಂದುವರಿದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಟಿ20 ಸರಣಿಯಿಂದ ಹೊರಗುಳಿದಿದ್ದ ಕೊಹ್ಲಿ 8ರಿಂದ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೊಂದೆಡೆ ನೂತನ ಟಿ20 ನಾಯಕ ರೋಹಿತ್ ಶರ್ಮ ಎರಡು ಸ್ಥಾನಗಳ ಪ್ರಗತಿ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ
ನ್ಯೂಜಿಲ್ಯಾಂಡ್‌ನ ಅನುಭವಿ ಆರಂಭಕಾರ ಮಾರ್ಟಿನ್ ಗಪ್ಟಿಲ್ ಮತ್ತೆ ಟಾಪ್-10 ಯಾದಿಗೆ ಮರಳಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಗಪ್ಟಿಲ್ 2 ಅರ್ಧ ಶತಕ ಬಾರಿಸಿದ್ದರು. ಅವರೀಗ 10ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್ ಕೂಡ ಒಂದು ಸ್ಥಾನ ಮೇಲೇರಿ 4ನೇ ಸ್ಥಾನ ತಲುಪಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ 2ನೇ, ದಕ್ಷಿಣ ಆಫ್ರಿಕಾದ ಐಡನ್ ಮಾರ್ಕ್‌ರಮ್ 3ನೇ ಸ್ಥಾನದಲ್ಲಿದ್ದಾರೆ.