Udayavni Special

ಆಹಾರ ಸರಬರಾಜಿನಲ್ಲಿ ಭ್ರಷ್ಟಾಚಾರ ಆರೋಪ! ತಾ.ಪಂ ಸಾಮಾನ್ಯ ಸಭೆಯಲ್ಲಿ ಸಿಡಿಪಿಒ ತರಾಟೆಗೆ

Team Udayavani, Sep 23, 2020, 3:10 PM IST

ಆಹಾರ ಸರಬರಾಜಿನಲ್ಲಿ ಭ್ರಷ್ಟಾಚಾರ ಆರೋಪ! ತಾ.ಪಂ ಸಾಮಾನ್ಯ ಸಭೆಯಲ್ಲಿ ಸಿಡಿಪಿಒ ತರಾಟೆಗೆ

ಬೀಳಗಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಏಜೆನ್ಸಿ ಕೈ ಬಿಟ್ಟು, ಉತ್ತಮ ಮಹಿಳಾ ಸಂಘಟನೆಗಳಿಗೆ ವಹಿಸಿಕೊಡಬೇಕು. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳ ಪೂರೈಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ಶ್ರೀಶೈಲ ಸೂಳಿಕೇರಿ ಒತ್ತಾಯಿಸಿದರು.

ಸ್ಥಳೀಯ ತಾಪಂ ಸಭಾ ಭವನದಲ್ಲಿ, ತಾಪಂ ಅಧ್ಯಕ್ಷ ರಾಮಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 24ನೇ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವ ಮೂಲಕ ಆಹಾರ ಸಾಮಗ್ರಿ ಸರಬರಾಜಿನಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಈ ಹಿಂದಿನ ತಾಪಂ ಸಾಮಾನ್ಯ ಸಭೆಯಲ್ಲಿಯೇ ಈ ಕುರಿತಾಗಿ ಸೂಚನೆ ನೀಡುವುದರೊಂದಿಗೆ ಠರಾವು ಕೂಡ ಪಾಸ್‌ ಮಾಡಲಾಗಿದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ ಸೂಳಿಕೇರಿಯವರ ಆರೋಪಕ್ಕೆ ಕೆಲ ಸದಸ್ಯರೂ ಕೂಡ ಧ್ವನಿಯಾದರು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಶೀಘ್ರ ಕ್ರಮ ಕೈಗೊಳ್ಳುವ ಸಿಡಿಪಿಒ ಭರವಸೆ ನೀಡಿದರು.

ಗಿರಿಸಾಗರ ಗ್ರಾಮದ ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಹಣ ಮಂಜೂರಾಗಿ ವರ್ಷಗಳು ಗತಿಸಿದರೂ ಕೂಡ ಕಟ್ಟಡ ಕಾಮಗಾರಿ ಆರಂಭಿಸಿಲ್ಲ. ಕಾಮಗಾರಿ ಟೆಂಡರ್‌ ಕೂಡ ಕರೆದಿಲ್ಲ. ಅಧಿಕಾರಿಗಳ ನಿರ್ಲಕ್ಷಕ್ಕೆ ನಾಚಿಕೆಯಾಗಬೇಕೆಂದು ತಾಪಂ ಸದಸ್ಯೆ ಗಂಗೂಬಾಯಿ ಯರನಾಳ ಹರಿಹಾಯ್ದರು.

ಗರ್ಭಿಣಿ ಬಾಣಂತಿಯರಿಗೆ, ಮಕ್ಕಳಿಗೆ ಲಾಕ್‌ಡೌನ್‌ ವೇಳೆ ಮತ್ತು ಪ್ರಸ್ತುತ ಆಹಾರ ಸಾಮಗ್ರಿ ವಿತರಿಸಿದ ಕುರಿತು ಮಾಹಿತಿ ನೀಡಿ. ಆಹಾರ ಸಾಮಗ್ರಿ ವಿತರಣೆಯಲ್ಲೂ ಗೋಲ್‌ಮಾಲ್‌ ನಡೆದಿರುವ ಶಂಕೆಯಿದೆ. ಅಂಗನವಾಡಿಯಿಂದ ಮೊಟ್ಟೆ ಕೂಡ ವಿತರಿಸಿಲ್ಲ ಎಂದು ಸದಸ್ಯೆ ರೂಪಾ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರು ಸಿಡಿಪಿಒ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆ ತೆಗೆದುಕೊಂಡರು. ಸಭೆಯ ಎಲ್ಲ ಪ್ರಶ್ನೆಗಳಿಗೂ ಸಿಡಿಪಿಒ ಸೂಕ್ತ ಕ್ರಮದ ಭರವಸೆ ನೀಡಿದರು. ಗಿರಿಸಾಗರ ಗ್ರಾಮದ ಬೀರೇಶ್ವರ ದೇವಸ್ಥಾನದ ಹತ್ತಿರದ ಇಕ್ಕಟ್ಟಾದ ರಸ್ತೆಯಲ್ಲಿನ ಟಿಸಿಯಿಂದಾಗಿ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಒಂದು ಕುರಿ ಸತ್ತಿದೆ, ಎಮ್ಮೆಗೆ ಶಾಕ್‌ ತಗುಲಿದೆ. ಮೇವು ತುಂಬಿದ ಟ್ರ್ಯಾಕ್ಟರ್‌ಗೆ ಬೆಂಕಿ ತಗುಲಿದ್ದರೂ ಟಿಸಿ ಸ್ಥಳಾಂತರ ಮಾಡಲು ಹೆಸ್ಕಾಂ ಮುಂದಾಗುತ್ತಿಲ್ಲ. ಈ ಕುರಿತು ಗಮನ ಸೆಳೆದರೂ ನಿರ್ಲಕ್ಷ್ಯ ತಾಳುತ್ತಿದ್ದಾರೆ ಕೂಡಲೇ ಟಿಸಿ ಸ್ಥಳಾಂತರಿಸಬೇಕೆಂದು ಜಿಪಂ ಸದಸ್ಯ ಹನುಮಂತ ಕಾಖಂಡಕಿ ಸೂಚಿಸಿದರು.

ಬಿಸನಾಳ ಎಸ್‌ಟಿ ಕಾಲೋನಿಗೆ ವಿದ್ಯುತ್‌ ಕಂಬ ಅಳವಡಿಸಿ, ವಿದ್ಯುತ್‌ ಸರಬರಾಜು ನೀಡುವಂತೆ ತಾಪಂ ಸದಸ್ಯೆ ರೇಖಾ ಕಟ್ಟೆಪ್ಪನವರ ಸೂಚಿಸಿದರು. ತಾಪಂ ಉಪಾಧ್ಯಕ್ಷೆ ಸುನಂದಾ ಪವಾರ, ತಾಪಂ ಇಒ ಎಂ.ಕೆ.ತೊದಲಬಾಗಿ, ತಹಶೀಲ್ದಾರ್‌ ಭೀಮಪ್ಪ ಅಜೂರ ಇದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

RBI

RBI ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕೋವಿಡ್ ಸೋಂಕು ದೃಢ

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

mumbai

ಮುಂಬೈ – ರಾಜಸ್ಥಾನ್ ಕಾಳಗ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲಾರ್ಡ್ ಬಳಗ

RCB

ಗಾಯಕ್ವಾಡ್ ಮನಮೋಹಕ ಅರ್ಧಶತಕ: ಚೆನ್ನೈ ಎದುರು ಮುಗ್ಗರಿಸಿದ ಆರ್ ಸಿಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

ಕೋವಿಡ್ ಎಚ್ಚರಿಕೆ ಮಧ್ಯೆ ಹೇಮಗುಡ್ಡದಲ್ಲಿ ದಸರಾ ಆಯುಧ ಪೂಜೆ

ಕೋವಿಡ್ ಎಚ್ಚರಿಕೆ ಮಧ್ಯೆ ಹೇಮಗುಡ್ಡದಲ್ಲಿ ದಸರಾ ಆಯುಧ ಪೂಜೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

News-tdt-01

ಧಮ್ ಇದ್ದರೆ ಪ್ರಧಾನಿ ಮೋದಿ ಮುಂದೆ ಕೂತು ರಾಜ್ಯಕ್ಕೆ ಪರಿಹಾರ ತರಲಿ:  ಸಿದ್ದರಾಮಯ್ಯ ಸವಾಲು

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

Mumbai-tdy-1

ಧಾರ್ಮಿಕ ಆಚರಣೆಗಳಿಗೂ ಆದ್ಯತೆ: ಸಂತೋಷ್‌ ಶೆಟ್ಟಿ

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

RBI

RBI ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕೋವಿಡ್ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.