ಆಸೀಸ್‌ ಕಿರಿಯರ ವಿಶ್ವಕಪ್‌ ತಂಡದಲ್ಲಿ ತಮಿಳುನಾಡಿನ ಎನ್‌. ರಾಧಾಕೃಷ್ಣನ್‌

ಎರಡೂ ಕೈಯಲ್ಲಿ ಬೌಲಿಂಗ್‌ ನಡೆಸುವ ವಿಶಿಷ್ಟ ಪ್ರತಿಭೆ!

Team Udayavani, Dec 18, 2021, 6:20 AM IST

ಆಸೀಸ್‌ ಕಿರಿಯರ ವಿಶ್ವಕಪ್‌ ತಂಡದಲ್ಲಿ ತಮಿಳುನಾಡಿನ ಎನ್‌. ರಾಧಾಕೃಷ್ಣನ್‌

ಸಿಡ್ನಿ: ತಮಿಳುನಾಡು ಮೂಲದ 18 ವರ್ಷದ ಕ್ರಿಕೆಟಿಗ ನಿವೇತನ್‌ ರಾಧಾಕೃಷ್ಣನ್‌ 2022ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಗಾಗಿ ಆಸ್ಟ್ರೇಲಿಯ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಎರಡೂ ಕೈಗಳಲ್ಲಿ ಸ್ಪಿನ್‌ ಬೌಲಿಂಗ್‌ ನಡೆಸುವುದು ಇವರ ವೈಶಿಷ್ಟ್ಯ!

ನಿವೇತನ್‌ ರಾಧಕೃಷ್ಣನ್‌ ಇದಕ್ಕೂ ಮುನ್ನ ತಮಿಳುನಾಡು ಕ್ರಿಕೆಟ್‌ ಅಸೋಸಿಯೇಷನ್‌ ಟೂರ್ನಿಗಳಲ್ಲಿ, ತಮಿಳುನಾಡು ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡಿದ್ದರು. 2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ನೆಟ್‌ ಬೌಲರ್‌ ಆಗಿಯೂ ಕಾಣಿಸಿಕೊಂಡಿದ್ದರು.ಟ್ಯಾಸ್ಮೇನಿಯಾದಲ್ಲಿ ಇವರ ವಾಸ.

ಬಲಗೈ ಹಾಗೂ ಎಡಗೈನಲ್ಲಿ ಆಫ್ ಸ್ಪಿನ್‌ ಮಾಡಬಲ್ಲ (ಆ್ಯಂಬಿಡೆಕ್ಸ್‌ಟ್ರಸ್‌ ಫಿಂಗರ್‌ ಸ್ಪಿನ್ನರ್‌) ಪ್ರಾವೀಣ್ಯತೆ ಹೊಂದಿರುವ ಕಾರಣ ರಾಧಕೃಷ್ಣನ್‌ ಆಸ್ಟ್ರೇಲಿಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಬ್ಯಾಟ್ಸ್‌ಮನ್‌ಗೆ ತಕ್ಕಂತೆ ಎಡಗೈ ಹಾಗೂ ಬಲಗೈಯಲ್ಲಿ ಬೌಲಿಂಗ್‌ ಮಾಡುವ ಆಯ್ಕೆಯನ್ನು ಅವರು ಹೊಂದಿದ್ದಾರೆ. ಭಾರತೀಯ ಯುವ ಸ್ಪಿನ್ನರ್‌ ಪ್ರತಿಭೆಯನ್ನು ಗುರುತಿಸಿದ “ಕ್ರಿಕೆಟ್‌ ಆಸ್ಟ್ರೇಲಿಯ’ ಅಂಡರ್‌-19 ವಿಶ್ವಕಪ್‌ ಟೂರ್ನಿಗೆ ತಮ್ಮ ತಂಡದಲ್ಲಿ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ:ಟಿ20ಯಲ್ಲಿ ದಾಖಲೆ ಬರೆದ ಪಾಕಿಸ್ಥಾನದ ಆರಂಭಿಕ ಆಟಗಾರ ಮೊಹಮ್ಮದ್‌ ರಿಜ್ವಾನ್‌

ಪ್ರಯತ್ನ ಫ‌ಲಿಸಿತು
ಎರಡೂ ಕೈಗಳಿಂದ ಸ್ಪಿನ್‌ ಮಾಡುವ ಕೌಶಲದ ಬಗ್ಗೆ ಪ್ರತಿಕ್ರಿಯಿಸಿದ ರಾಧಕೃಷ್ಣನ್‌, “ಟಿವಿಯಲ್ಲಿ ನೋಡಿದ ಹಾಗೆ, ಚೆನ್ನೈ ಲೀಗ್‌ ಟೂರ್ನಿಗಳಲ್ಲಿ ಕಂಡಂತೆ ಎರಡೂ ಕೈಗಳಿಂದ ಬೌಲ್‌ ಮಾಡುವವರು ಯಾರೂ ನನ್ನ ಗಮನಕ್ಕೆ ಬಂದಿರಲಿಲ್ಲ. ಇಂಥ ಬೌಲರ್‌ಗಳ ಬಗ್ಗೆ ನಾನು ಕೇಳಿಯೂ ಇರಲಿಲ್ಲ. ಹೀಗಾಗಿ ನಾನೇ ಏಕೆ ಈ ರೀತಿ ಬೌಲಿಂಗ್‌ ಮಾಡಬಾರದು ಎಂದು ಅಂದುಕೊಂಡಿದ್ದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದೆ. ಇದು ಯಶಸ್ವಿಯಾಯಿತು’ ಎಂದಿದ್ದಾರೆ.

ವೈಫ‌ಲ್ಯದ ಭಯವಿಲ್ಲ
“ವೈಫ‌ಲ್ಯದ ಬಗ್ಗೆ ನನಗೆ ಭಯ ಇಲ್ಲ. ನನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವವನಲ್ಲ. ಈ ರೀತಿಯ ನಿಯಂತ್ರಣಗಳಿಗೆ ಒಳಗಾದರೆ ಸಾಧನೆ ಮಾಡಲು ಸಾಧ್ಯವೇ?’ ಎಂದು ಅವರ ದಿಟ್ಟ ಪ್ರಶ್ನೆ.

2019ರಲ್ಲಿಯೇ ಆಸ್ಟ್ರೇಲಿಯದ ಅಂಡರ್‌-16 ತಂಡದಲ್ಲಿ ಸ್ಥಾನ ಪಡೆದಿದ್ದ ರಾಧಾಕೃಷ್ಣನ್‌ ಪಾಕಿಸ್ಥಾನ ವಿರುದ್ಧ ಆಡಿದ್ದರು. 5 ಪಂದ್ಯಗಳ ಸರಣಿಯಲ್ಲಿ 172 ರನ್‌ ಹಾಗೂ 8 ವಿಕೆಟ್‌ ಉರುಳಿಸಿ ಎಲ್ಲರ ಗಮನ ಸೆಳೆದಿದ್ದರು.

ಟಾಪ್ ನ್ಯೂಸ್

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ

ರಸ್ತೆಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ: ಸಚಿವ ಅಂಗಾರ

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹ

ಸಂಶಯ ಹುಟ್ಟು ಹಾಕಿರುವ ಯುವಜೋಡಿ ಸಾವು;  ಕಾರಿನ ಹಿಂಬದಿ ಸೀಟ್‌ನಲ್ಲಿತ್ತು ಮೃತದೇಹ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾ ಸೂಪರ್‌ ಬ್ಯಾಟಿಂಗ್‌

ವನಿತಾ ಟಿ20 ಚಾಲೆಂಜರ್‌ ಸರಣಿ: ಸೂಪರ್‌ ನೋವಾಗೆ ಸೂಪರ್‌ ಗೆಲುವು

ವನಿತೆಯರ 100 ಮೀ. ಹರ್ಡಲ್‌: ಜ್ಯೋತಿ ರಾಷ್ಟ್ರೀಯ ದಾಖಲೆ

ವನಿತೆಯರ 100 ಮೀ. ಹರ್ಡಲ್‌: ಜ್ಯೋತಿ ರಾಷ್ಟ್ರೀಯ ದಾಖಲೆ

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ನವೋಮಿ ಒಸಾಕಾ ಪತನ

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌: ನವೋಮಿ ಒಸಾಕಾ ಪತನ

1-asdsad

ಏಷ್ಯಾಕಪ್ ಹಾಕಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಡ್ರಾ

1-ffff

ಫ್ರಾನ್ಸ್ ನಲ್ಲಿ ಚಿನ್ನ ಗೆದ್ದ ಪ್ರೇರಣಾಗೆ ಶಿರಸಿಯಲ್ಲಿ ನಾಗರಿಕ ಸಮ್ಮಾನ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಎಸೆಸೆಲ್ಸಿ, ಪಿಯುಸಿ ಅನಂತರ ಅಗಾಧ ಅವಕಾಶ ಕುರಿತು “ಉದಯವಾಣಿ’ಯಿಂದ ಕಾರ್ಯಕ್ರಮ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

ಘಾಟಿ ಪ್ರದೇಶ ಪರಿಶೀಲಿಸಿ: ಸಚಿವ ಸುನಿಲ್‌ ಕುಮಾರ್‌ ನಿರ್ದೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.