ಟೆನಿಸ್: ಪ್ರಶಸ್ತಿ ಸುತ್ತಿಗೇರಿದ ಬೋಪಣ್ಣ-ರಾಮ್‌ಕುಮಾರ್
Team Udayavani, Jan 8, 2022, 11:55 PM IST
ಅಡಿಲೇಡ್: ಇದೇ ಮೊದಲ ಬಾರಿ ಎಟಿಪಿ ಟೂರ್ನಿಯಲ್ಲಿ ಜತೆಯಾಗಿ ಕಣಕ್ಕಿಳಿದಿರುವ ರೋಹನ್ ಬೋಪಣ್ಣ-ರಾಮ್‌ಕುಮಾರ್ ರಾಮನಾಥನ್ “ಅಡಿಲೇಡ್ ಇಂಟರ್‌ನ್ಯಾಶನಲ್ ಟೆನಿಸ್ ಪಂದ್ಯಾವಳಿ’ಯಲ್ಲಿ ಫೈನಲ್ ಪ್ರವೇಶಿ ಸಿದ್ದಾರೆ.
ಶನಿವಾರ ನಡೆದ ಡಬಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಯಾವುದೇ ಶ್ರೇಯಾಂಕ ಹೊಂದಿಲ್ಲದ ಭಾರತೀಯ ಜೋಡಿ 6-2, 6-4 ಅಂತರದಿಂದ ಬೋಸ್ನಿಯಾದ 4ನೇ ಶ್ರೇಯಾಂಕದ ಟಾಮಿಸ್ಲಾವ್ ಬ್ರಿಕ್-ಸ್ಯಾಂಟಿಯಾಗೊ ಗೊಂಜಾಲೆಝ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾಯಿತು.
ಪ್ರಶಸ್ತಿ ಸುತ್ತಿನಲ್ಲಿ ಬೋಪಣ್ಣ-ರಾಮ್‌ಕುಮಾರ್ ಅವರಿಗೆ ಅಗ್ರ ಶ್ರೇಯಾಂಕದ ಇವಾನ್ ಡೊಡಿಗ್ (ಕ್ರೊವೇಶಿಯ) ಮತ್ತು ಬ್ರಝಿಲ್‌ನ ಮಾರ್ಸೆಲೊ ಮೆಲೊ ಸವಾಲು ಎದುರಾಗಲಿದೆ. ಬೋಪಣ್ಣ ಮತ್ತು ಡೊಡಿಗ್ ಹಲವು ಬಾರಿ ಜತೆಯಾಗಿ ಆಡಿರುವುದರಿಂದ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಕಳೆದ ಯುಎಸ್ ಓಪ ನ್ ನಲ್ಲಿ ಇವರಿಬ್ಬರು ಮೂರನೇ ಸುತ್ತಿನಲ್ಲಿ ಸೋಲನುಭವಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ
ಕಪಿಲ್ದೇವ್ ಸಾರಥ್ಯದ ವಿಶ್ವಕಪ್ ಗೆಲುವಿಗೆ 39ರ ಸಂಭ್ರಮ
ರಣಜಿ ಟ್ರೋಫಿ ಫೈನಲ್: ಇನ್ನಿಂಗ್ಸ್ ಮುನ್ನಡೆಯ ಗಡಿಯಲ್ಲಿ ಮಧ್ಯಪ್ರದೇಶ
ಅಭ್ಯಾಸ ಪಂದ್ಯ: ಚೇತೇಶ್ವರ್ ಪೂಜಾರ ವಿಫಲ, ರಿಷಭ್ ಪಂತ್ ಯಶಸ್ವಿ
ವಿಂಬಲ್ಡನ್-2022: ಸೆರೆನಾ ವಿಲಿಯಮ್ಸ್ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್