ನಾಟಿಂಗ್ಹ್ಯಾಮ್ ಟೆಸ್ಟ್ : 95 ರನ್ ಲೀಡ್ ಗಳಿಸಿದ ಭಾರತ
Team Udayavani, Aug 6, 2021, 11:15 PM IST
ನಾಟಿಂಗ್ಹ್ಯಾಮ್ : ಇಂಗ್ಲೆಂಡ್ ಎದುರಿನ ನಾಟಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಭಾರತ 95 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡಿನ 183 ರನ್ನಿಗೆ ಜವಾಬು ನೀಡಿದ ಭಾರತ, 3ನೇ ದಿನದಾಟದಲ್ಲಿ 278 ರನ್ನಿಗೆ ಆಲೌಟ್ ಆಯಿತು.
ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕೆ.ಎಲ್. ರಾಹುಲ್ 84 ರನ್ ಬಾರಿಸಿದರು. 214 ಎಸೆತಗಳ ಈ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಒಳಗೊಂಡಿತ್ತು. ಆಲ್ರೌಂಡರ್ ರವೀಂದ್ರ ಜಡೇಜ 56 ರನ್ ಕೊಡುಗೆ ಸಲ್ಲಿಸಿದರು (86 ಎಸೆತ, 8 ಬೌಂಡರಿ, 1 ಸಿಕ್ಸರ್). ರಿಷಭ್ ಪಂತ್ (25) ಮತ್ತು ಜಸ್ಪ್ರೀತ್ ಬುಮ್ರಾ (28) ಮಿಂಚಿನ ಆಟವಾಡಿದರು.
ಓಲೀ ರಾಬಿನ್ಸನ್ (85ಕ್ಕೆ 5) ಮತ್ತು ಜೇಮ್ಸ್ ಆ್ಯಂಡರ್ಸನ್ (54ಕ್ಕೆ 4) ಇಂಗ್ಲೆಂಡಿನ ಯಶಸ್ವಿ ಬೌಲರ್ಗಳು.
ಇದನ್ನೂ ಓದಿ : ಜಮ್ಮು – ಕಾಶ್ಮೀರದ ಸರ್ಕಾರಿ ಶಾಲೆಗಳಿಗೆ ಸೇನಾ ಹುತಾತ್ಮರ ಹೆಸರು!