ಉಪ ಚುನಾವಣೆ ಏಕಾಂಗಿ ಸ್ಪರ್ಧೆ: ದಿನೇಶ್‌


Team Udayavani, Sep 21, 2019, 8:45 PM IST

dinesh-gundurao

ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಈ ಮೂಲಕ ಜೆಡಿಎಸ್‌ ಜತೆಗಿನ ಒಂದೂವರೆ ವರ್ಷದ ಮೈತ್ರಿಗೆ ಕಾಂಗ್ರೆಸ್‌ ಸಹ ಅಧಿಕೃತವಾಗಿ ತಿಲಾಂಜಲಿ ನೀಡಿದೆ.

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪ ಚುನಾವಣೆಗೆ ನಾವು ಸನ್ನದ್ಧವಾಗಿದ್ದು, ಕೇಂದ್ರ ಚುನಾವಣ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ನಾವು ಈಗಾಗಲೇ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ಸಿದ್ಧತೆ ಕುರಿತು ಎರಡು ಬಾರಿ ಸಭೆ ಮಾಡಿದ್ದೇವೆ. ಹೊಸಕೋಟೆಯಲ್ಲಿ ಸಮಾವೇಶ ಮಾಡುವ ಮೂಲಕ ಚುನಾವಣ ರಣಕಹಳೆ ಊದಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದೆ.
ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಸ್ಪರ್ಧೆ ಇದೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಹೀಗಾಗಿ ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಹೇಳಿದರು.

ಕಳೆದ ಒಂದೂವರೆ ವರ್ಷದಿಂದ ಬಿಜೆಪಿಯವರು ಮೈತ್ರಿ ಸರಕಾರವನ್ನು ಉರುಳಿಸಿ, ಈಗ ಬಹುಮತ ಇಲ್ಲದಿದ್ದರೂ ಸರಕಾರ ರಚನೆ ಮಾಡಿ¨ªಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಏನೇನು ಆಮಿಷ ಒಡ್ಡಿ ಸರಕಾರ ರಚನೆ ಮಾಡಿ¨ªಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸೋಮವಾರ ಅನರ್ಹತೆಯ ಪ್ರಕರಣ ವಿಚಾರಣೆಗೆ ಬರಲಿದೆ. ಕಾಂಗ್ರೆಸ್‌ ಕೂಡ ಕೇವಿಯೆಟ್‌ ಹಾಕಿರುವುದರಿಂದ ಸ್ಪೀಕರ್‌ ತೀರ್ಮಾನ ಸರಿಯಾಗಿದೆ ಎಂದು ನಾವು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ.

ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯ ಆಧಾರದಲ್ಲಿ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟವಾಗಲಿದೆ. ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಭ್ರಷ್ಟಾಚಾರ ಮಾಡಿ ರಾಜೀನಾಮೆ ಸಲ್ಲಿಸಿರುವ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲು ಕಾನೂನು ಮತ್ತು ಜನತಾ ನ್ಯಾಯಾಲಯದಲ್ಲಿ ಸೋಲಾಗಬೇಕು. ಆಗ ಮಾತ್ರ ಈ ರೀತಿಯ ಪಕ್ಷಾಂತರಿಗಳಿಗೆ ಒಂದು ಪಾಠವಾಗುತ್ತದೆ ಎಂದು ಹೇಳಿದರು.

ಈಗಾಗಲೇ ಚುನಾವಣ ಆಯೋಗ ಅನರ್ಹರಿಗೆ ಈ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ ಎಂದು ಹೇಳಿದೆ. ಇನ್ನು ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಅನರ್ಹ ಶಾಸಕರ ಗೆಲುವನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಆ ಕ್ಷೇತ್ರಗಳಿಗೆ ಯಾವಾಗ ಚುನಾವಣೆ ನಡೆಯುತ್ತದೆಯೋ ದೇವರೇ ಬಲ್ಲ. ಅವರನ್ನು ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.

ಈಗಾಗಲೇ ಪಕ್ಷದ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡದಿರುವುದರಿಂದ ಸೆ.24 ರಂದು ಬೆಳಗಾವಿಯಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದೇವೆ. ಬಿಜೆಪಿ ಸಂಸದರು ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ ಹಣ ಅಗತ್ಯವಿಲ್ಲ ಎಂದು ಹೇಳಿ¨ªಾರೆ. ಅವರ ಮಾತು ಕೇಳಿದರೆ ಕೇಂದ್ರ ಸರಕಾರ ದಿವಾಳಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಇವೆಲ್ಲವನ್ನು ನಾವು ಜನರ ಮುಂದೆ ಇಡುತ್ತೇವೆ ಎಂದು ಹೇಳಿದರು. ಆದರೆ ಸೆ. 26 ರಂದು ನಡೆಯುವ ಸರ್ವ ಸದಸ್ಯರ ಸಭೆ ಮುಂದೂಡಲಾಗಿದೆ ಎಂದು ಹೇಳಿದರು.

ಪರಮೇಶ್ವರ್‌ ನಿರ್ಲಕ್ಷ್ಯ ಇಲ್ಲ
ಇದೇ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್‌ ಅವರನ್ನು ಪಕ್ಷ ನಿರ್ಲಕ್ಷ್ಯ ಮಾಡಿಲ್ಲ. ಶಾಸಕಾಂಗ ಸಭೆ ನಡೆಯುವ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಅವರು ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ತೆರಳಿದ್ದರಿಂದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೊಸಕೋಟೆಯಲ್ಲಿ ನಡೆದ ಸಮಾವೇಶಕ್ಕೂ ಪರಮೇಶ್ವರ್‌ ಅವರಿಗೆ ಆಹ್ವಾನ ನೀಡಲಾಗಿತ್ತು. ಅವರು ಪೂರ್ವ ನಿಗದಿತ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು ಎಂದು ಸಮರ್ಥಿಸಿಕೊಂಡರು.

ಆಯೋಗಕ್ಕೆ ದೂರು
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅನರ್ಹ ಶಾಸಕರ ಜತೆ ಅಡ್ವೋಕೇಟ್‌ ಜನರಲ್ ಅವರನ್ನು ಕರೆದುಕೊಂಡು ಸಭೆ ಮಾಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ಅವರು ಅಡ್ವೊಕೇಟ್‌ ಜನರಲ್‌ ಅವರನ್ನು ಕರೆದುಕೊಂಡು ಅನರ್ಹರ ಜತೆಗೆ ಸಭೆ ಮಾಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ದೂರಿದ್ದಾರೆ.

ಅನರ್ಹ ಶಾಸಕರು ರಾಜೀನಾಮೆ ನೀಡಲು ಬಿಜೆಪಿಯ ಕೈವಾಡ ಇದೆ ಎನ್ನುವುದೇ ನಮ್ಮ ಪ್ರಮುಖ ಆರೋಪವಾಗಿತ್ತು. ಈಗ ನಮ್ಮ ವಾದಕ್ಕೆ ಬಲ ಬಂದಂತಾಗಿದೆ. ಯಡಿಯೂರಪ್ಪ ಅನರ್ಹರ ಜತೆ ಸಭೆ ಮಾಡಿರುವುದನ್ನೂ ನ್ಯಾಯಾಲಯದ ಮುಂದಿಡುತ್ತೇವೆ. ಅಲ್ಲದೇ ಚುನಾವಣ ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಹೇಳಿದರು.

ಇದರ ಜತೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಂಡಿರುವ ಸಭೆಯನ್ನು ವಿಧಾನಸೌಧದಲ್ಲಿ ನಡೆಸಿರುವುದು ಕೂಡ ಕಾನೂನು ಬಾಹಿರವಾಗಿದ್ದು, ಈ ಬಗ್ಗೆಯೂ ಚುನಾವಣ ಆಯೋಗಕ್ಕೆ ದೂರು ನೀಡಲಾಗುವುದು. ಚುನಾವಣ ಆಯೋಗ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ಆರಗ ಜ್ಞಾನೇಂದ್ರ

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಸಿಎಂ ನಿರ್ದೇಶನ: ಆರಗ ಜ್ಞಾನೇಂದ್ರ

ಟ್ವಿಟರ್‌ನಲ್ಲಿ ಫಾಲೋವರ್‌ ಸಂಖ್ಯೆ ಹೆಚ್ಚದಂತೆ ಕೇಂದ್ರದಿಂದ ತಡೆ: ರಾಹುಲ್ ಗಾಂಧಿ

ಟ್ವಿಟರ್‌ನಲ್ಲಿ ಫಾಲೋವರ್‌ ಸಂಖ್ಯೆ ಹೆಚ್ಚದಂತೆ ಕೇಂದ್ರದಿಂದ ತಡೆ: ರಾಹುಲ್ ಗಾಂಧಿ

1-rwerw

ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರಗ ಜ್ಞಾನೇಂದ್ರ

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಸಿಎಂ ನಿರ್ದೇಶನ: ಆರಗ ಜ್ಞಾನೇಂದ್ರ

vidhana-soudha

ಪೊಲೀಸರ ಮೇಲೆ ಶಾಸಕರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ

araga

ಸ್ಫೋಟ ಆರೋಪಿಗೆ ರಾಜಾತಿಥ್ಯ : ವರದಿಗೆ ಗೃಹ ಇಲಾಖೆ ಸೂಚನೆ

1-ffsdf

ಸಿಎಂಗೆ ಬಿಜೆಪಿ‌ ಅಭಿನಂದನೆ : ಪಕ್ಷ-ಸರಕಾರದ ನಡುವಿನ ಅಂತರ ತಗ್ಗಿಸಲು ಕ್ರಮ

vವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣವಚನ

ವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣವಚನ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

15kasapa

ಕಸಾಪಕ್ಕೆ ವಾಹನ ನೀಡಲು ಕ್ರಮ: ಮುರುಗೇಶ ನಿರಾಣಿ

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

14bus

ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಕ್ಕೆ ತೇಲ್ಕೂರ್‌ಗೆ ಒತ್ತಾಯ

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.