ತುಳುನಾಡಿನ ಪುರಾತತ್ವ ಇತಿಹಾಸದ ಪಿತಾಮಹ ಡಾ| ಗುರುರಾಜ ಭಟ್‌

Team Udayavani, Feb 28, 2021, 6:10 AM IST

ತುಳುನಾಡಿನ ಪುರಾತತ್ವ ಇತಿಹಾಸದ ಪಿತಾಮಹ ಡಾ| ಗುರುರಾಜ ಭಟ್‌

ಎರಡು ಸಾವಿರಕ್ಕೂ ಅಧಿಕ ದೇವಸ್ಥಾನಗಳು, ಸ್ಮಾರಕ ಗಳಿಗೆ ಭೇಟಿ, ಛಾಯಾಚಿತ್ರ ಗಳೊಂದಿಗೆ ದಾಖಲಾತಿ, ಸುಮಾರು 15,000 ತಾಮ್ರ ಮತ್ತು ಶಿಲಾ ಶಾಸನಗಳ ಪರಿಶೀಲನೆ ಮತ್ತು ಅಧ್ಯಯನ, ಸಾವಿರಕ್ಕೂ ಮೇಲ್ಪಟ್ಟು ದೇವತಾ ವಿಗ್ರಹಗಳ ಐತಿಹಾಸಿಕ ಅಸ್ತಿತ್ವದ ಅಧ್ಯಯನ, ನಿರಂತರ ಪ್ರವಾಸ, ಕೆಲವೊಮ್ಮೆ ಬೈಸಿಕಲ್‌, ಅದೆಷ್ಟೋ ಕಡೆಗೆ ಕಾಲ್ನಡಿಗೆಯಿಂದಲೇ ಪ್ರಯಾಣ! ಕೆರೆ, ಸರೋವರದಲ್ಲಿ ಸ್ನಾನ ಮಾಡಿ ತಾಸುಗಟ್ಟಲೆ ಒದ್ದೆ ಮಡಿ ಬಟ್ಟೆಯಲ್ಲೇ ವಿಗ್ರಹಗಳ ಅಧ್ಯಯನ. ಇದು ಡಾ| ಪಾದೂರು ಗುರುರಾಜ ಭಟ್‌ ಅವರು ತುಳುವ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನ ಮತ್ತು ದಾಖಲೆಗೆ ಪಟ್ಟ ಪರಿಶ್ರಮದ ಒಂದು ಚಿತ್ರಣ.
ಡಾ| ಗುರುರಾಜ ಭಟ್ಟರ ಮೊದಲ ಪುಸ್ತಕ “ಆಂಟಿಕ್ವಿಟೀಸ್‌ ಆಫ್ ಸೌತ್‌ಕೆನರಾ’ 1969 ರಲ್ಲಿ ಪ್ರಕಟವಾಯಿತು. 1975 ರಲ್ಲಿ ಅವರ ಮ್ಯಾಗ್ನಂ ಒಪೆಸ್‌ ಎಂದು ಪರಿಗಣಿಸಲ್ಪಡುವ “ಸ್ಟಡೀಸ್‌ ಇನ್‌ ತುಳುವ ಹಿಸ್ಟರಿ ಆಂಡ್‌ ಕಲ್ಚರ್‌’ ಪ್ರಕಾಶನಗೊಂಡಿತು.

ತುಳುನಾಡಿನ ಸುಮಾರು 2,000 ವರ್ಷಗಳ ಇತಿಹಾಸವನ್ನು ಕಟ್ಟಿಕೊಟ್ಟ ಮೇರು ಕೃತಿ. ಡಾ| ಭಟ್ಟರು ಗುರುವಾಗಿ, ಬೋಧಕನಾಗಿ ಇತಿಹಾಸ ವಿಷಯದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಿದವರು. ಓರ್ವ ವ್ಯಕ್ತಿಯಾಗಿ ಶ್ರಮಜೀವಿ, ಸುಸಂಸ್ಕೃತ ಸಮಾಜಕ್ಕೆ ಭೂಷಣಪ್ರಾಯರು. ಸಂಶೋಧನೆ ನೆಲೆಯಲ್ಲಿ ಅವರೋರ್ವ ಸಾಮಾಜಿಕ ಚರಿತ್ರೆಗಾರ.

ಸಾಧಾರ ಸಿದ್ಧಾಂತ!
“ರಾಷ್ಟ್ರದ ರಾಜಕೀಯದಲ್ಲಿ ಸ್ಥಿತ್ಯಂತರಗಳಾದಾಗ ವಾಸ್ತವ ಇತಿಹಾಸವು ಬದಲಾಗಿ, ಬದಲಾದದ್ದೇ ಇತಿಹಾಸವಾಗುತ್ತದೆ ಎಂಬುದೇ ಇತಿಹಾಸದ ಬಹುದೊಡ್ಡ ವ್ಯಂಗ್ಯ’ ಎಂದಿದ್ದರು.

ಜಿಲ್ಲೆಯಲ್ಲಿನ ಹಿಂದೂ ದೇವಾಲಯ, ಅಲ್ಲಿ ದೊರಕಿದ ಶಾಸನ, ಸ್ಮಾರಕದ ಅವಶೇಷಗಳನ್ನು ಪರೀಕ್ಷಿಸಿ, ಇದು ಒಂದು ಜಿನ ದೇವಾಲಯ, ಭೈರವ ರಾಜನ ಆಳ್ವಿಕೆಯಲ್ಲಿ ಕಟ್ಟಿದ್ದು, ರಾಜಕೀಯ ಮೇಲಾಟಗಳು ನಡೆದಾಗ ಅದು ಹಿಂದೂ ದೇವಾಲಯವಾಗಿದ್ದಿರಬಹುದು ಎಂಬ ಅವರ ಹೇಳಿಕೆಗೆ ಆಕ್ರೋಶ ಉಂಟಾಗಿತ್ತು. ಅವೆಲ್ಲವನ್ನೂ ಗಂಭೀರವಾಗಿ ಪರಿಗಣಿಸದ ಭಟ್ಟರು ತಮ್ಮದು ಸಾಧಾರ ಪ್ರತಿಪಾದನೆ ಎಂದು ಹೇಳುತ್ತಾ ಮೌನಿಯಾಗುತ್ತಿದ್ದರು!

ತುಳು ಅಪ್ಪೆನ ಮೋಕೆದ ಮಗೆ!
ಜಿಲ್ಲೆಯ ಯಾವ ದೇವಸ್ಥಾನಗಳಿಗೆ ಹೋದರೂ ಗುರುರಾಜ ಭಟ್ಟರ ನೆನಪು ಹಸುರು. ಭಟ್ಟರು ಇಲ್ಲಿಗೆ ಬಂದಿದ್ದರು ಎನ್ನುತ್ತಾರೆ ಅಲ್ಲಿನ ಜನ. ಅವರು ತುಳು ಅಪ್ಪೆಯನ್ನು ತುಳು ಜೋಕುಲೆಗೆ ಪರಿಚಯಿಸಿದ ತುಳು ಅಪ್ಪೆನ ಮೋಕೆದ ಮಗೆ! ಅವರ ಅವಿರತ ಸಂಶೋಧನೆಯ ಫ‌ಲವಾಗಿ ಇಂದು ನಮ್ಮ ಕೆನರಾ ಜಿಲ್ಲೆಗಳ ಚಾರಿತ್ರಿಕ, ಸಾಂಸ್ಕೃತಿಕ, ಧಾರ್ಮಿಕ ಇತಿಹಾಸದ ಪರಿಚಯವಾಗಿದೆ. ಚರಿತ್ರೆ ಸಾಯುವುದಿಲ್ಲ ಅಂತೆಯೇ ಚರಿತ್ರೆಕಾರನೂ. . . ಎಂಬ ಮಾತಿನಂತೆ ಗುರುರಾಜ ಭಟ್ಟರು ಚಿರಂಜೀವಿ. ಅವರು ಅಮರ, ಅವರ ಕೃತಿಗಳೂ ಅಮರ.

– ಜಲಂಚಾರು ರಘುಪತಿ ತಂತ್ರಿ

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.