ದಿಗಂತ್‌ ಕಂಡ ಬಂಗಾರದ ಕನಸು!


Team Udayavani, May 29, 2020, 4:27 AM IST

digant-banagaa

ಕನ್ನಡ ಚಿತ್ರರಂಗದಲ್ಲಿ ದೂದ್‌ಪೇಡ ಎಂದೇ ಕರೆಸಿಕೊಳ್ಳುವ ಗುಳಿಕೆನ್ನೆ ಹುಡುಗ ದಿಗಂತ್‌ ಕೈಯಲ್ಲಿ ಈಗ ಎರಡು ಮತ್ತೂಂದು ಚಿತ್ರಗಳಿವೆ. ಸದ್ಯಕ್ಕೆ ದಿಗಂತ್‌ ಅಭಿನಯಿಸಿರುವ “ಹುಟ್ಟು ಹಬ್ಬದ ಶುಭಾಶಯಗಳು ‘ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಮೇಲೆ ದಿಗಂತ್‌ ಗೆ ನಿರೀಕ್ಷೆಯೂ ಇದೆ. ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ 2′ ಚಿತ್ರವೂ ಇದೆ. ಈ ಸಿನಿಮಾದಲ್ಲಿ ಗಣೇಶ್‌ ಹಾಗು ಪವನ್‌ಕುಮಾರ್‌ ದಿಗಂತ್‌ನೊಂದಿಗಿದ್ದಾರೆ.

ಹಿಂದೆ “ಗಾಳಿಪಟ’ದಲ್ಲೂ  ಮೋಡಿ ಮಾಡಿದ್ದ ಗಣೇಶ್‌ ಹಾಗು ದಿಗಂತ್‌ ಈಗ “ಗಾಳಿಪಟ 2′ ಚಿತ್ರದಲ್ಲಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗುತ್ತಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದೆ. ಇಷ್ಟರಲ್ಲೇ ಲಾಕ್‌ಡೌನ್‌ ಮುಗಿದ ಬಳಿಕ ಚಿತ್ರಕ್ಕೆ ಚಾಲನೆ ಸಿಗಲಿದೆ. ಇನ್ನು, ಇದೇ ಮೊದಲ ಬಾರಿಗೆ ಕಾಮಿಡಿ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಮಾರಿಗೋಲ್ಡ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡುತ್ತಿದ್ದು, ಆರ್‌.ವಿ.ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ರಘುವರ್ಧನ್‌ ಅವರು  “ಮಾರಿಗೋಲ್ಡ್‌’ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

“ಮಾರಿಗೋಲ್ಡ್‌’ ಅಂದಾಕ್ಷಣ ಎಲ್ಲರಿಗೂ ಬಿಸ್ಕತ್‌ ನೆನಪಾಗಬಹುದು. ಇಲ್ಲಿ ಹೆಸರು ಮಾತ್ರ ಹಾಗೆ ಇಡಲಾಗಿದೆ.  ಚಿತ್ರದೊಳಗಿರುವ ಕಥಾಹಂದರ ಹೊಸತನದೊಂದಿಗೆ ಕೂಡಿದ್ದು, ದಿಗಂತ್‌ಗೆ ಇದೇ ಮೊದಲ ಬಾರಿಗೆ ಒಂದು ವಿಶೇಷ ಪಾತ್ರ ಸೃಷ್ಟಿ ಮಾಡಲಾಗಿದೆ. ದಿಗಂತ್‌ ಕೂಡ ಕಥೆ, ಪಾತ್ರ ಮೆಚ್ಚಿಕೊಂಡು ಚಿತ್ರಕ್ಕಾಗಿ ಸಾಕಷ್ಟು ತಯಾರಿ  ಮಾಡಿಕೊಂಡಿದ್ದಾರೆ. ಹೊಸ ಬಗೆಯ ಕಥೆ, ಪಾತ್ರ ಎದುರು ನೋಡುತ್ತಿದ್ದ ದಿಗಂತ್‌ಗೆ “ಮಾರಿಗೋಲ್ಡ್‌’ ಹೊಸ ರೀತಿಯ ಸಿನಿಮಾ ಆಗಲಿದೆ ಎಂಬುದು ಸಿನಿಮಾ ತಂಡದ ಅಭಿಪ್ರಾಯ.

ಅಂದಹಾಗೆ, ಈಗಾಗಲೇ ಮೊದಲ ಹಂತದ ಚಿತ್ರದ ಚಿತ್ರೀಕರಣ ನಡೆದಿದೆ. ಬೆಂಗಳೂರು, ಚಿತ್ರದುರ್ಗ  ಸುತ್ತಮುತ್ತಲ ಸ್ಥಗಳಲ್ಲಿ ಚಿತ್ರೀಕರಿಸಿರುವ ತಂಡ, ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುವ ಹೊತ್ತಿಗೆ ಕೊರೊನಾ ಸಮಸ್ಯೆ ಎದುರಾಗಿದೆ. ಲಾಕ್‌ಡೌನ್‌ ನಂತರ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಿದತೆ ಮಾಡಿಕೊಂಡಿರುವ ಈ ಚಿತ್ರದಲ್ಲಿ ದಿಗಂತ್‌ಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ “ಟಗರು’ ಕಾಕ್ರೋಚ್‌ ಖ್ಯಾತಿಯ ಸುಧಿ, ಯಶ್‌ಶೆಟ್ಟಿ, ಸಂಪತ್‌ಕುಮಾರ್‌ ಸೇರಿದಂತೆ ಹಲವು ಕಲಾವಿದರು  ನಟಿಸುತ್ತಿದ್ದಾರೆ. ಚಿತ್ರಕ್ಕೆ ವೀರ್‌ ಸಮರ್ಥ್ ಸಂಗೀತ ನೀಡಿದ್ದು, ಎರಡು ಹಾಡುಗಳಿಗೆ ರಾಗ ಸಂಯೋ ಜಿಸಿದ್ದಾರೆ. ಕೆ.ಎಸ್‌.ಚಂದ್ರಶೇಖರ್‌ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ.

ಟಾಪ್ ನ್ಯೂಸ್

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

pranaya raja srinath

ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಎಂಜಿನಿಯರ್‌ ನಿಂದ ಬ್ಯಾಂಕ್‌ ದರೋಡೆ! ಸಾಲ ತೀರಿಸಲು ಕೃತ್ಯವೆಸಗಿ ಪೊಲೀಸರ ಅತಿಥಿಯಾದ!

ಎಂಜಿನಿಯರ್‌ ನಿಂದ ಬ್ಯಾಂಕ್‌ ದರೋಡೆ!

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯ

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್

2covid

ಪರೀಕ್ಷೆ ಮಾಡಿಸದಾಕೆಗೆ ಕೊರೊನಾ ಪಾಸಿಟಿವ್‌!

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.