ಇನ್ನೂ ಸಿಗದ ಬೆಳಕು! ಸಾವಿರಾರು ಮನೆ ವಂಚಿತ; ಅವಧಿ ವಿಸ್ತರಣೆಗೆ ಬೇಡಿಕೆ
ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ 100 ದಿನಗಳ ಕಾಲಮಿತಿ ವಿಧಿಸಿದ್ದರು.
Team Udayavani, Jan 12, 2022, 10:15 AM IST
ಕೋಟ: ರಾಜ್ಯದಲ್ಲಿ ವಿದ್ಯುತ್ ಸಂಪರ್ಕರಹಿತ ಮನೆಗಳ ಮಾಹಿತಿ ಸಂಗ್ರಹಿಸಿ ಆದ್ಯತೆಯ ಮೇರೆಗೆ ಸಂಪರ್ಕ ಕಲ್ಪಿಸುವ “ಬೆಳಕು’ ಯೋಜನೆಯ ಅವಧಿ ಮುಗಿದಿದೆ. ಆದರೆ ಸಾವಿರಾರು ವಿದ್ಯುತ್ ರಹಿತ ಕುಟುಂಬಗಳಿದ್ದು, ಇನ್ನೂ ಗುರುತಿಸಲಾಗಿಲ್ಲ. ಯೋಜನೆಯ ಅವಧಿ ವಿಸ್ತರಿಸಿ ಬಡ ಕುಟುಂಬಗಳಿಗೆ ನೆರವಾಗಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.
ಸುನಿಲ್ ಕುಮಾರ್ ಅವರು 2021ರ ಆ. 11ರಂದು ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡ ತತ್‌ಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ವಿದ್ಯುತ್ ಸಂಪರ್ಕ ವಿಲ್ಲದ ಮನೆಗಳ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದರು. ಈ ಹಿಂದೆ ಜಾರಿಯಲ್ಲಿದ್ದ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಮತ್ತು ಸೌಭಾಗ್ಯ ಯೋಜನೆಯ ಅವಧಿ ಮುಕ್ತಾಯಗೊಂಡದ್ದರಿಂದ ಹೊಸದಾಗಿ “ಬೆಳಕು’ ಎನ್ನುವ ಯೋಜನೆ ರೂಪಿಸಿದ್ದರು.ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ 100 ದಿನಗಳ ಕಾಲಮಿತಿ ವಿಧಿಸಿದ್ದರು.
1.2 0 ಲಕ್ಷ ಮನೆಗಳಿಗೆ ವಿದ್ಯುತ್
ಸುಮಾರು 155.25 ಕೋಟಿ ರೂ. ವೆಚ್ಚದಲ್ಲಿ 1.2 0 ಲಕ್ಷ ಮನೆಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಸ್ಥಳೀಯಾಡಳಿತದ ಮಾಹಿತಿ ಕೊರತೆ, ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಸಾವಿರಾರು ವಿದ್ಯುತ್ ರಹಿತ ಕುಟುಂಬಗಳನ್ನು ಗುರುತಿಸದ ಕಾರಣ ಅವರೆಲ್ಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ದಾಖಲೆ ರಹಿತರಿಗೆ ಅನುಕೂಲ
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಹಿಂದೆ ಸ್ಥಳೀಯಾಡಳಿತದಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಕಡ್ಡಾಯವಾಗಿತ್ತು. ಆದರೆ ದಾಖಲೆ ಸಮಸ್ಯೆ ಮುಂತಾದ ಕಾರಣಗಳಿಂದ ಸ್ಥಳೀಯಾಡಳಿತಗಳು ಎನ್‌ಒಸಿ ನೀಡದಿರುವುದರಿಂದ ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಯೋಜನೆಯಡಿ ಪಡಿತರ ಚೀಟಿ, ಆಧಾರ್, ಮತದಾರರ ಗುರುತಿನ ಚೀಟಿ, ಗ್ರಾ.ಪಂ. ಒದಗಿಸುವ ಮಾಹಿತಿ ಪರಿಗಣಿಸಲು ಅವಕಾಶ ಕಲ್ಪಿಸಿದ್ದರಿಂದ ದಾಖಲೆಗಳ ಸಮಸ್ಯೆ ಇರುವವರಿಗೂ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಾಗಿದೆ. ಪ್ರಸ್ತುತ ಈ ಯೋಜನೆ ಡಿಸೆಂಬರ್ ಮೊದಲ ವಾರದಲ್ಲೇ ಅಂತ್ಯಗೊಂಡಿದೆ.
ಬೆಳಕು ಯೋಜನೆಯನ್ನು ವಿಸ್ತರಿಸುವಂತೆ ಎಲ್ಲ ಶಾಸಕರು, ಜನಪ್ರತಿನಿಧಿಗಳಿಂದ ಬೇಡಿಕೆ ಇದೆ. ಆದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಬೇಕಾಗಿರುವುದ ರಿಂದ ದೀರ್ಘ ಕಾಲಾವಕಾಶ ನೀಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯಾಡಳಿತಗಳಿಂದ ಇನ್ನೊಮ್ಮೆ ಕೊನೆಯ ಹಂತದ ಪಟ್ಟಿ ಪಡೆದು ವಿದ್ಯುತ್ ರಹಿತರಿಗೆ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಸುನಿಲ್ ಕುಮಾರ್, ಇಂಧನ ಖಾತೆ ಸಚಿವ
- ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್
13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್
ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?
ಹೊಸ ಸೇರ್ಪಡೆ
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಚಂಡೀಗಢದಲ್ಲಿ ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿ ಯುವಕರು!
ಪಾಕ್ನ ಎಲ್ಲೆಲ್ಲೂ ಪೇಪರ್ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ
ವಾರಕ್ಕೆ ನಾಲ್ಕು ದಿನ ಕೆಲಸ: ಜು. 1ರಿಂದ ಜಾರಿ! ದಿನದ ಸೇವಾವಧಿ 12 ಗಂಟೆಗೆ ವಿಸ್ತರಣೆ
ಬ್ರಿಟನ್ ಪ್ರಧಾನಿ ಬೋರಿಸ್ಗೆ ಮತ್ತೆ ಹಿನ್ನಡೆ: ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಸೋಲು