ಕಂಪನಿ ಚಿನ್ಹೆಗಳ ಹಿಂದಿನ ಅರ್ಥ
Team Udayavani, Jun 8, 2020, 5:08 AM IST
ಆ್ಯಪಲ್ ಸಂಸ್ಥೆಯ ಲೋಗೊ ಪಡೆದಿರುವ ಪ್ರಖ್ಯಾತಿಯ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವೇ ಇಲ್ಲ. ಬೇರೆ ಸಂಸ್ಥೆಯ ಉತ್ಪನ್ನಗಳ ಮೇಲೂ ಆ್ಯಪಲ್ ಸಂಸ್ಥೆಯ ಲೋಗೋ ಸ್ಟಿಕ್ಕರ್ ಅಂಟಿಸುವ ಮಟ್ಟಿಗೆ, ಅದು ಜನಪ್ರಿಯತೆ ಪಡೆದಿದೆ. ಆ್ಯಪಲ್ ಸಂಸ್ಥೆಯ ಲೋಗೋ, ಗುರುತ್ವಾಕರ್ಷಣೆ ಯನ್ನು ಪತ್ತೆ ಹಚ್ಚಿದ ವಿಜ್ಞಾನಿ ಐಸಾಕ್ ನ್ಯೂಟನ್ ಗೌರವಾರ್ಥ ರೂಪಿಸಲಾಗಿದೆ ಎನ್ನುವ ಕಥೆ ಇಂಟರ್ನೆಟ್ನಲ್ಲಿ ಗಿರಕಿ ಹೊಡೆಯುತ್ತಿತ್ತು. ಇನ್ನು ಕೆಲವರು, ಆ ಲೋಗೋ ಬೈಬಲ್ನಲ್ಲಿ ಬರುವ ದೈವಿಕ ಹಣ್ಣನ್ನು ಸೂಚಿಸುತ್ತದೆ ಎಂದೂ ತಿಳಿದಿದ್ದರು. ಅದರೆ ತಾನು ಆ್ಯಪಲ್ ಹಣ್ಣನ್ನು ಏಕೆ ಲೋಗೊ ಆಗಿ ಆರಿಸಿಕೊಂಡೆ ಎಂಬುದು, ಅದನ್ನು ರೂಪಿಸಿದ ಡಿಸೈನರ್ಗೆà ಮರೆತುಹೋಗಿದೆಯಂತೆ.
ಅಮೇಜಾನ್ ಇ- ಕಾಮರ್ಸ್ ಸಂಸ್ಥೆಯ ಲೋಗೊ ಬಹಳ ಸರಳವಾಗಿರುವಂತೆ ಕಾಣುತ್ತದೆ. ಅಮೇಜಾನ್ ಹೆಸರು ಮತ್ತು ಒಂದು ಬಾಣದ ಚಿನ್ಹೆ. ಗಮನಿಸಿದ್ದೀರಾ? ಬಾಣದ ಗುರುತು, ಎ ಇಂದ ಝೆಡ್ ಅನ್ನು ಪಾಯಿಂಟ್ ಮಾಡುತ್ತಿದೆ. ಅಂದರೆ, ಎ ಟು ಝೆಡ್ ಎಲ್ಲವೂ ಇಲ್ಲಿ ದೊರೆಯುತ್ತದೆ ಎನ್ನುವುದು ಅದರ ಹಿಂದಿನ ಅರ್ಥ.