Udayavni Special

ಬದುಕು ಬದಲಾಗಿದೆ, ನಾವೂ ಬದಲಾಗೋಣ; ಮನೆ ಬಾಗಿಲಿಗೆ ಅಂಚೆ ವ್ಯವಹಾರ: ಏನು? ಹೇಗೆ?


Team Udayavani, Jun 2, 2020, 5:47 AM IST

ಮನೆ ಬಾಗಿಲಿಗೆ ಅಂಚೆ ವ್ಯವಹಾರ: ಏನು? ಹೇಗೆ?

ಇಡೀ ದೇಶದ ಮೂಲೆ ಮೂಲೆಯ ಪರಿಚಯ ಹೊಂದಿರುವ ಖ್ಯಾತಿ ಹೊಂದಿರುವ ಅಂಚೆ ಇಲಾಖೆ ಒಂದೊಮ್ಮೆ ಪತ್ರ ಬಟವಾಡೆ, ಮನಿಆರ್ಡರ್‌ ಮತ್ತು ಕೆಲವೊಂದು ಸರಕಾರದ ಸಹಾಯಧನ ವಿತರಣೆ ಮಾತ್ರ ಮಾಡುತ್ತಿತ್ತು. ಆದರೆ ಈಗ ಅಂಚೆ ಇಲಾಖೆ ಆಮೂಲಾಗ್ರವಾಗಿ ಬದಲಾವಣೆಯಾಗಿದೆ. ವಿಮೆಯಿಂದ ಹಿಡಿದು ಒಂದು ಬ್ಯಾಂಕ್‌ ನಡೆಸುವ ಹೆಚ್ಚಿನ ಕೆಲಸ ಕಾರ್ಯಗಳನ್ನು ನಿಮ್ಮ ಮನೆ ಬಾಗಿಲಿನಲ್ಲಿಯೇ ನಡೆಸಿಕೊಡುವ ತಾಂತ್ರಿಕತೆಯನ್ನು ಹೊಂದಿದೆ. ನೀವು ಯಾವುದೇ ಬ್ಯಾಂಕ್‌ ಖಾತೆಯಲ್ಲಿ ಹಣ ಹೊಂದಿದ್ದರೂ ನಿಮ್ಮ ಮನೆ ಬಾಗಿಲಿಗೆ ಬರುವ ಅಂಚೆಯಣ್ಣ ಅದರಿಂದ ಹಣ ತೆಗೆದುಕೊಡುತ್ತಾನೆ. ಇದಲ್ಲದೆ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ಮೂಲ ಸೌಕರ್ಯಗಳೆಲ್ಲದರ ಪಾವತಿಯನ್ನು ಅಂಚೆಯಣ್ಣನ ಮೂಲಕ ನಡೆಸಬಹುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯ ಕಾಲ ಘಟ್ಟದಲ್ಲಿ ಮನೆಯಲ್ಲಿಯೇ ಇದ್ದು ಇದನ್ನೆಲ್ಲ ನಿರ್ವಹಿಸಲು ಸಾಧ್ಯವಿದೆ. ತಾಂತ್ರಿಕತೆಯ ಅರಿವಿಲ್ಲದಿದ್ದರೆ ಅದನ್ನೂ ಅಂಚೆಯಣ್ಣನೇ ನಿಮಗೆ ಕಲಿಸುತ್ತಾನೆ.

ಅಂಚೆ ಇಲಾಖೆ ಇಂದು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಪರ್ಯಾಯವಾಗಿ ಬೆಳೆದಿದೆ. ಮಾತ್ರವಲ್ಲದೆ ಗ್ರಾಮೀಣ ಭಾರತದ ಮೂಲೆ ಮೂಲೆಯಲ್ಲಿಯೂ ಸೇವೆ ನೀಡುವ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರಿಗೆ ಮನೆ ಬಾಗಿಲಿನಲ್ಲಿಯೇ ಸೇವೆ ನೀಡುತ್ತಿದೆ. ನೀವು ಇಲ್ಲಿ ಯಾವ ರೀತಿ ವ್ಯವಹರಿಸಬಹುದು. ಇಲ್ಲಿದೆ ಮಾಹಿತಿ.

ಅಂಚೆ ಕಚೇರಿ ಜಾರಿಗೆ ತಂದ “ಅಂಚೆ ಮಿತ್ರ’ ವೆಬ್‌ ಅಪ್ಲಿಕೇಷನ್‌ (https://karnatakapost.gov.in/AncheMitra) ಮೂಲಕ ಜನರು ಅಗತ್ಯ ಸೇವೆಗಳ ವಿನಂತಿ ಕಳುಹಿಸಿದರೆ ಪೋಸ್ಟ್‌ಮನ್‌ ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆಗಳನ್ನು ಒದಗಿಸುತ್ತಾರೆ.

ಅಂಗವಿಕಲ, ವಿಧವಾ, ವೃದ್ಧಾಪ್ಯವೇತನ, ನರೇಗ ಯೋಜನೆಯ ಹಣವನ್ನು ಅಂಚೆ ಕಚೇರಿ ಆರಂಭಿಸಿರುವ ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಕಕಆ) ಖಾತೆ ಮೂಲಕ ಪಡೆಯಲು ಬಯಸಿದರೆ ಹಣ ಡ್ರಾ ಮಾಡಿ ಫ‌ಲಾನುಭವಿಗಳ ಮನೆಗೆ ನಗದು ರೂಪದಲ್ಲಿ ಪೋಸ್ಟ್‌ಮನ್‌ ತಲುಪಿಸುತ್ತಾರೆ.

ವಿದ್ಯುತ್‌ ಬಿಲ್‌, ಎಲ್‌ಐಸಿ ಕಂತು ಪಾವತಿ, ಆರ್‌ಡಿ ಖಾತೆಯ ಹಣ ಕಟ್ಟಲು ಸಹಿತ ವಿವಿಧ ರೀತಿಯ ಹಣ ಪಾವತಿಗಳನ್ನು ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಖಾತೆ ತೆರೆಯುವುದರಿಂದ ಮನೆಯಲ್ಲೇ ಕುಳಿತು ಮೊಬೈಲ್‌ ಮೂಲಕ ಸುಲಭವಾಗಿ ನಡೆಸಬಹುದಾಗಿದೆ. “ಅಂಚೆ ಮಿತ್ರ’ದಲ್ಲಿ ಮಾಹಿತಿ ಇದೆ.

ಮನೆಯಿಂದಲೇ ಔಷಧ ಸಹಿತ ಇನ್ನಿತರ ವಸ್ತುಗಳನ್ನು ಪಾರ್ಸೆಲ್‌ ಕಳುಹಿಸಬಹುದು. ಅಲ್ಲದೆ ತಮ್ಮ ಸೇವಾ ವಿನಂತಿಯ ಸ್ಥಿತಿಯನ್ನು ಕೂಡ ಆ ವೆಬ್‌ ಅಪ್ಲಿಕೇಷನ್‌ ಮೂಲಕ ಪರಿಶೀಲಿಸಬಹುದು. ಅಂಚೆಮಿತ್ರ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸಲಹೆ ನೀಡುತ್ತದೆ.

ಇಷ್ಟೆಲ್ಲದರ ಹೊರತಾಗಿಯೂ ಅಂಚೆ ಕಚೇರಿಗೆ ಹೋಗುವುದು ಅನಿವಾರ್ಯವಾದರೆ ಮಾಸ್ಕ್ ಧರಿಸಿ ಹೋಗಿ. ಅಲ್ಲಿ ಸರದಿ ಪ್ರಕಾರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಹಾಗೇ ಕೌಂಟರ್‌ಗಳ ಬಳಿ ಒಂದು ಮೀಟರ್‌ ಅಂತರ ಕಾಯ್ದುಕೊಂಡು ವ್ಯವಹರ ನಡೆಸುವುದಕ್ಕೆ ಅವಕಾಶವಿರುವುದು.

ಶೀತ, ಜ್ವರ, ಉಸಿರಾಟದ ತೊಂದರೆ ಇರುವವರಿಗೆ ಅಂಚೆ ಕಚೇರಿಗೆ ಪ್ರವೇಶಾವಕಾಶ ಇರುವುದಿಲ್ಲ. ಕಚೇರಿಯ, ಬಾಗಿಲು, ರಾಡ್‌, ಗೋಡೆ, ಕೌಂಟರ್‌ಗಳ ಗ್ಲಾಸ್‌, ಇತ್ಯಾದಿಗಳನ್ನು ಮುಟ್ಟಬೇಡಿ. ನಿಮ್ಮದೆ ಪೆನ್‌ ಕೊಂಡೊಯ್ಯಿರಿ.

ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ.
9148594259

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

bhojegwod

ವಿಧಾನ ಪರಿಷತ್ ಸದಸ್ಯ ಎಚ್.ಎಲ್ ಭೋಜೆಗೌಡರಿಗೆ ಕೋವಿಡ್-19 ಸೊಂಕು ದೃಢ

dog

ಬಾಕಿ ಸಂಬಳ ಕೇಳಲು ಹೋದ ಯುವತಿಯ ಮೇಲೆ ನಾಯಿ ಛೂ ಬಿಟ್ಟ ಪಾರ್ಲರ್ ಮಾಲಕಿ: ನಂತರ ಆಗಿದ್ದೇನು ?

ಕೊವಾಕ್ಸಿನ್‌ ಪ್ರಯೋಗ ಶೀಘ್ರವೇ ಪ್ರಾರಂಭ : 2 ಹಂತಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ನೀಡಿಕೆ

ಕೊವಾಕ್ಸಿನ್‌ ಪ್ರಯೋಗ ಶೀಘ್ರವೇ ಪ್ರಾರಂಭ : 2 ಹಂತಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ನೀಡಿಕೆ

ಕೇರಳ ಸಿಎಂ ಕಚೇರಿಗೆ ಮೆತ್ತಿದ ಚಿನ್ನದ ಕಳಂಕ

ಕೇರಳ ಸಿಎಂ ಕಚೇರಿಗೆ ಮೆತ್ತಿದ ಚಿನ್ನದ ಕಳಂಕ

amar-dubey

ರೌಡಿಶೀಟರ್ ವಿಕಾಸ್ ದುಬೆಯ ಆಪ್ತ ಸಹಾಯಕನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಪೊಲೀಸರು

ಉದಯವಾಣಿ ರಿಯಾಲಿಟಿ ಚೆಕ್‌: ಕರಾವಳಿ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ವಸನ್ನದ್ಧ ಸ್ಥಿತಿ

ಉದಯವಾಣಿ ರಿಯಾಲಿಟಿ ಚೆಕ್‌: ಕರಾವಳಿ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ವಸನ್ನದ್ಧ

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

ಚೀನ ಮೇಲೆ ಹದ್ದಿನ ಕಣ್ಣು ; ಲಡಾಖ್‌ನಲ್ಲಿ ರಾತ್ರಿಯಿಡೀ ಗರ್ಜಿಸುತ್ತಿರುವ ವಾಯುಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಜನಪ್ರಿಯತೆಗೆ ಕಾರಣಗಳೇನು?

ಮೋದಿ ಜನಪ್ರಿಯತೆಗೆ ಕಾರಣಗಳೇನು?

V-S-Acharya

ರಾಜಕಾರಣದ ಮರ್ಯಾದಾ ಪುರುಷೋತ್ತಮ

ಚಿಂತೆ ಬೇಡ, ಚಿಂತನೆ ಮಾಡೋಣ

ಚಿಂತೆ ಬೇಡ, ಚಿಂತನೆ ಮಾಡೋಣ

ಇಂದು ವೈದ್ಯರ ದಿನ : ನಿಯಮಗಳನ್ನು ಪಾಲಿಸೋಣ ವೈದ್ಯರನ್ನು ಗೌರವಿಸೋಣ

ಇಂದು ವೈದ್ಯರ ದಿನ : ನಿಯಮಗಳನ್ನು ಪಾಲಿಸೋಣ ವೈದ್ಯರನ್ನು ಗೌರವಿಸೋಣ

ಇಂದು ವೈದ್ಯರ ದಿನ : ಬಂದಿಯಾಗಿಸಿದೆಯೇ ಕೋವಿಡ್ 19?

ಇಂದು ವೈದ್ಯರ ದಿನ : ಬಂದಿಯಾಗಿಸಿದೆಯೇ ಕೋವಿಡ್ 19?

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

bhojegwod

ವಿಧಾನ ಪರಿಷತ್ ಸದಸ್ಯ ಎಚ್.ಎಲ್ ಭೋಜೆಗೌಡರಿಗೆ ಕೋವಿಡ್-19 ಸೊಂಕು ದೃಢ

ಕೆಂಭಾವಿಯಲ್ಲಿ ಉಪ ತಹಶೀಲ್ದಾರ್‌ಗೆ ಮನವಿ

ಕೆಂಭಾವಿಯಲ್ಲಿ ಉಪ ತಹಶೀಲ್ದಾರ್‌ಗೆ ಮನವಿ

dog

ಬಾಕಿ ಸಂಬಳ ಕೇಳಲು ಹೋದ ಯುವತಿಯ ಮೇಲೆ ನಾಯಿ ಛೂ ಬಿಟ್ಟ ಪಾರ್ಲರ್ ಮಾಲಕಿ: ನಂತರ ಆಗಿದ್ದೇನು ?

ಮೂಲ ಸೌಕರ್ಯ ಒದಗಿಸಲು ಪ್ರಯತ್ನ: ಮುದ್ನಾಳ

ಮೂಲ ಸೌಕರ್ಯ ಒದಗಿಸಲು ಪ್ರಯತ್ನ: ಮುದ್ನಾಳ

10ಲಕ್ಷ ಜನಸಂಖ್ಯೆಗೆ 505 ಸಾವು

10ಲಕ್ಷ ಜನಸಂಖ್ಯೆಗೆ 505 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.