ಹೊಸ ಯೋಚನೆ, ಯೋಜನೆಗಳಿಗೆ ರಹದಾರಿ “ಮರೆವು’


Team Udayavani, Jul 10, 2021, 6:30 AM IST

ಹೊಸ ಯೋಚನೆ, ಯೋಜನೆಗಳಿಗೆ ರಹದಾರಿ “ಮರೆವು’

ಪ್ರತಿಯೊಂದು ಕೆಲಸದಲ್ಲಿಯೂ ಅಡೆ – ತಡೆಗಳು, ಹಿನ್ನಡೆ-ಮುನ್ನಡೆಗಳು ಸಹಜ. ಜೀವನದ ಪಥದಲ್ಲಿ ಸಿಹಿ-ಕಹಿ ಘಟನೆಗಳನ್ನು ದಾಟಿಯೇ ಸಾಗುವ ಅನಿವಾರ್ಯ ಇದ್ದೇ ಇರುತ್ತದೆ. ಇವೆ ಲ್ಲವನ್ನು ಮೆಟ್ಟಿ ನಿಂತು ಸಾಗಿದಾಗ ಮಾತ್ರ ನಾವು ನಮ್ಮ ಜೀವನವನ್ನು ರೂಪಿಸಿ ಕೊಳ್ಳಲು ಸಾಧ್ಯ. ಇಲ್ಲಿ “ಮರೆವು’ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ನಮ್ಮೊಳಗಿನ ಚಂಚಲತೆಯ ಮನಃಸ್ಥಿತಿಗೆ ಹಲವು ಸಾಧಕರ ಜೀವನದ ಯಶೋಗಾಥೆಗಳು ಮಾರ್ಗ ದರ್ಶಕ ದೀವಿಗೆಗಳಾಗಬಲ್ಲವು.
ಸರ್‌ ಐಸಾಕ್‌ ನ್ಯೂಟನ್‌ ಎಂಬ ಜಗತø ಸಿದ್ಧ ವಿಜ್ಞಾನಿಯು ವೈಜ್ಞಾನಿಕ ರಂಗದಲ್ಲಿ ಸರ್ವಮಾನ್ಯರಾದವರು. ಅಂತೆಯೇ ಅವರ ಸ್ವಭಾವ ಕೂಡ ಅನುಕರಣೀಯ. ಬಹಳ ಸೂಕ್ಷ್ಮ ಸ್ವಭಾವ ಅವರದ್ದು. ನಿಧಾನಿ, ಸಮಾಧಾನಿಯಾದ ಅವರಿಂದ ಕೋಪ ಬಲು ದೂರ. ತಾನಾಯಿತು, ತನ್ನ ಅಧ್ಯಯನದ ಕೋಣೆಯಾಯಿತು. ತನ್ನ ಪ್ರಮೇಯಗಳ ಪುನರಾವರ್ತಿತ ವಿಶ್ಲೇಷಣೆಯಾಯಿತು.

ಇಷ್ಟೇ ಅವರ ಕೆಲಸ. ಆದರೆ ಅವರಿಗೊಂದು ಮಿತ್ರ ನಿದ್ದ. ಅದೇ “ಡೈಮಂಡ್‌’ ಎಂಬ ಪುಟ್ಟ ನಾಯಿ. ಅದು ಅವರ ಕಾಲಿನ ಬಳಿಯೇ ಮಲಗಿ ರುತ್ತಿತ್ತು. ನಿರ್ದಿಷ್ಟ ಸಮಯದಲ್ಲಿ ತನ್ನ ಊಟಕ್ಕೋ ಯಜಮಾನನ ಮಾತಿಗೋ ಸ್ಪಂದಿಸಿ, ಹೊರಹೋಗುತ್ತಿತ್ತು.
ಒಮ್ಮೆ ಒಂದು ಕೆಲಸದಲ್ಲಿ ಮಗ್ನನಾಗಿದ್ದ ನ್ಯೂಟನ್‌, ನಡುವೆ ಹೊರಹೋದರು. ಲೇಖನಿ, ಇಂಕ್‌ ಬಾಟಲ್‌, ಕಾಗದಗಳೆ ಲ್ಲವೂ ಮೇಜಿನ ಮೇಲೆಯೇ ಇದ್ದವು. ಸಮೀಪದಲ್ಲಿ ಒಂದು ಕ್ಯಾಂಡಲ್‌ ಕೂಡ ಉರಿಯುತ್ತಿತ್ತು. ಅತ್ತ ಡೈಮಂಡ್‌ ಕೂಡ ಯಜಮಾನನ ಬರುವಿಕೆಗಾಗಿ ಕಾಯು ತ್ತಿತ್ತು. ಅಷ್ಟರಲ್ಲಿ ಪುಟ್ಟ ಇಲಿಯೊಂದು ಮೇಜಿನತ್ತ ಹೋಯಿತು. ಆಗ ಡೈಮಂಡ್‌, ಇಲಿಯ ಮೇಲೆ ಹಾರಿತು. ಉರಿಯುತ್ತಿದ್ದ ಕ್ಯಾಂಡಲ್‌, ಪೇಪರ್‌ನ ಮೇಲೆ ಬಿದ್ದು, ಅಲ್ಲಿದ್ದ ಕಾಗದಗಳೆಲ್ಲ ಸುಟ್ಟು ಬೂದಿಯಾದವು.

ನ್ಯೂಟನ್‌ ಮರಳಿ ಬಂದರು. ತನ್ನ ಕೋಣೆ, ಮೇಜಿನ ದೃಶ್ಯ ಕಂಡವರಿಗೆ ಎಲ್ಲವೂ ಅರಿವಾಯಿತು. ಅವರ ಅಮೂಲ್ಯ ಸಂಶೋಧನೆ, ಅಧ್ಯಯನದ ಕೆಲವು ತಿಂಗಳುಗಳಿಂದ ಶ್ರಮವಹಿಸಿ ಬರೆದ ಪ್ರಬಂಧ ಸುಟ್ಟು ಬೂದಿಯಾ ಗಿತ್ತು. ತನ್ನ ಶ್ರಮ ವ್ಯರ್ಥವಾದುದನ್ನು ಕಂಡು ದುಃಖೀತರಾದರು. ಆದರೆ ಕೋಪ ಗೊಳ್ಳಲಿಲ್ಲ! ಶಾಂತಚಿತ್ತದಿಂದ ಡೈಮಂಡ್‌ ನನ್ನು ಕರೆದು, “ನೋಡು ಡೈಮಂಡ್‌, ನಿನ್ನ ಚೇಷ್ಟೆಯ ಅರಿವು ನಿನಗಿಲ್ಲ’ ಎಂದರು. ಮೇಜಿನ ಮೇಲಿದ್ದ ಬೂದಿಯನ್ನು ತಾವೇ ಒರೆಸಿ, ಘಟನೆಯನ್ನು ಮರೆತು ಮತ್ತೆ ಬರೆಯಲು ಪುನರಾರಂಭಿಸಿದರು.

ನ್ಯೂಟನ್‌ರ ಈ ಸಮಾಧಾನ ಚಿತ್ತ ಮತ್ತು ನಡೆದ ಕೆಟ್ಟ ಘಟನೆಗಳ ಬಗ್ಗೆ ಮತ್ತೆ ಮತ್ತೆ ಚಿಂತಿಸದೆ, ಅಲ್ಲಿಯೇ ಮರೆತು ಬಿಡುವ ಸ್ವಭಾವವನ್ನು ನಾವೂ ಕೂಡ ಅನುಸರಿಸಿದರೆ ಅದೆಷ್ಟೋ ಸಮಸ್ಯೆಗಳಿಂದ ದೂರವಿರಬಹುದಲ್ಲವೇ? ಶ್ರದ್ಧೆಯಿಂದ ಕರ್ತವ್ಯದಲ್ಲಿ ಯಶಸ್ಸನ್ನು ಕೂಡ ಕಾಣ ಬಹುದಲ್ಲವೇ? ನಮ್ಮ ಜೀವನದಲ್ಲಿ ತಿಳಿದೋ, ತಿಳಿಯದೆಯೋ ಅನೇಕ ಕಹಿ ಘಟನೆಗಳು ನಡೆದು ಹೋಗುತ್ತವೆ. ಆ ಘಟನೆಗಳಿಗೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಬೇಕಿದೆ. “ಮರೆವು’ ದೇವರು ಕೊಟ್ಟ “ಅಮೂಲ್ಯವಾದ ವರ’ ಎಂದು ಭಾವಿಸಿ, ನಡೆದ ಕಹಿ ಘಟನೆಗಳನ್ನು ಮರೆತುಬಿಡಬೇಕು. ಕೆಟ್ಟ ಘಟನೆ, ಅದಕ್ಕೆ ಕಾರಣರಾದವರ ಬಗ್ಗೆ ಪ್ರತೀಕಾರ, ಕೋಪ ಬೆಳೆಸುತ್ತಾ ಹೋದರೆ ನಮ್ಮ ಸಮಯವೂ ವ್ಯರ್ಥ ಮತ್ತು ನಮಗೆ ಹೊಸ ಯೋಚನೆ, ಜೀವನೋತ್ಸಾಹವು ಮೂಡುವುದೇ ಇಲ್ಲ. “ಮರೆವು’ ಎಂಬ ದಿವೌÂಷಧವು ನಮ್ಮ ಮನವನ್ನು ಹೊಸ ಯೋಚನೆಗಳಿಗೆ ತೆರೆದಿಡುತ್ತದೆ. ಜೀವನದ ಹಾದಿಯಲ್ಲಿ ಭರವಸೆಯ ಬೆಳಕನ್ನು ಬೀರುತ್ತದೆ.

ಕೆಡುಕುಗಳ ಮಧ್ಯದಲ್ಲಿ ಒಳಿತನ್ನು ಗುರುತಿಸಬೇಕು. ಕೆಟ್ಟದ್ದನ್ನು ಮರೆತು, ಕನಸುಗಳ ಮೊಳೆತು, ಸಾಧಿಸುವ ಚೈತನ್ಯ ದಲ್ಲಿ ಕಲೆತು, ಸುಖ ದುಃಖಗಳೊಂದಿಗೆ ಬೆರೆತು, ಬಾಳ ಪಯಣದಲ್ಲಿ ಯಶಸ್ಸಿನ ಶಿಖರವನ್ನು ತಲುಪಬೇಕಿದೆ.

- ಭಾರತಿ ಎ., ಕೊಪ್ಪ

ಟಾಪ್ ನ್ಯೂಸ್

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ಆಘಾತ: ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ಹೆಲಿಕಾಪ್ಟರ್ ದುರಂತ: ಸಾವಿನ ಸಂಖ್ಯೆ 13ಕ್ಕೇರಿಕೆ; DNA ಪರೀಕ್ಷೆ ಮೂಲಕ ದೇಹಗಳ ಗುರುತು ಪತ್ತೆ

ಹೆಲಿಕಾಪ್ಟರ್ ದುರಂತ: ಸಾವಿನ ಸಂಖ್ಯೆ 13ಕ್ಕೇರಿಕೆ; DNA ಪರೀಕ್ಷೆ ಮೂಲಕ ದೇಹಗಳ ಗುರುತು ಪತ್ತೆ

ಹೂಡಿಕೆದಾರರಿಗೆ ಲಾಭ: 1 ಸಾವಿರಕ್ಕೂ ಅಧಿಕ ಅಂಕ ಜಿಗಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

ಹೂಡಿಕೆದಾರರಿಗೆ ಲಾಭ: 1 ಸಾವಿರಕ್ಕೂ ಅಧಿಕ ಅಂಕ ಜಿಗಿತ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

ಜಗತ್ತಿನ 57 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನ 57 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ

ವಿಜಯ್ ಹಜಾರೆ ಟ್ರೋಪಿಯಲ್ಲಿ ಶುಭಾರಂಭ: 236 ರನ್ ಅಂತರದಿಂದ ಗೆದ್ದ ಕರ್ನಾಟಕ ತಂಡ

ವಿಜಯ್ ಹಜಾರೆ ಟ್ರೋಪಿಯಲ್ಲಿ ಶುಭಾರಂಭ: 236 ರನ್ ಅಂತರದಿಂದ ಗೆದ್ದ ಕರ್ನಾಟಕ ತಂಡ

111-dfds

2015 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಪಾರಾಗಿದ್ದ ಬಿಪಿನ್ ರಾವತ್

Untitled-1

ಕಾರವಾರ : ಡಿಎಆರ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

ಮಾರ್ಗ ಸುಗಮವಾದರೆ ಗುರಿ ಸಾಧನೆ ಸುಲಭ

ಎಲ್ಲರ ಕಲ್ಯಾಣಕ್ಕಾಗಿ ಅರಳುವ ಬದುಕು

ಎಲ್ಲರ ಕಲ್ಯಾಣಕ್ಕಾಗಿ ಅರಳುವ ಬದುಕು

ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ

ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ

ನೆಲದ ಜತೆಗೆ  ಸಮರಸದ ಬದುಕು

ನೆಲದ ಜತೆಗೆ  ಸಮರಸದ ಬದುಕು

ಕೆಡುಕೆನಿಸಿದ ಕ್ರೋಧವನ್ನು ತ್ಯಜಿಸಿದರೆ ಒಡಕು ಮೂಡದು

ಕೆಡುಕೆನಿಸಿದ ಕ್ರೋಧವನ್ನು ತ್ಯಜಿಸಿದರೆ ಒಡಕು ಮೂಡದು

MUST WATCH

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

udayavani youtube

ಎಚ್ಚರ… : ಮಸೀದಿಗಲ್ಲಿ ರಸ್ತೆಯಲ್ಲೊಂದು ಮಕ್ಕಳ ಪ್ರಾಣ ತೆಗೆಯುವ ಗುಂಡಿ

ಹೊಸ ಸೇರ್ಪಡೆ

ಮುಂದೆ ಬನ್ನಿ..ಇನ್ನಾದರೂ ಲಸಿಕೆ ಪಡೆಯಲು ಮುಂದೆ ಬನ್ನಿ

ಮುಂದೆ ಬನ್ನಿ..ಇನ್ನಾದರೂ ಲಸಿಕೆ ಪಡೆಯಲು ಮುಂದೆ ಬನ್ನಿ

ಶಿಗ್ಗಾವಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ

ಶಿಗ್ಗಾವಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ಆಘಾತ: ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

ವೈದ್ಯ ವೃತ್ತಿಯಲ್ಲಿ ಅತಿಯಾದ ವ್ಯಾಪಾರಿ ಮನೋಭಾವ; ಜಗದ್ಗುರು ಶಿವಾನಂದ ಸ್ವಾಮಿ

ವೈದ್ಯ ವೃತ್ತಿಯಲ್ಲಿ ಅತಿಯಾದ ವ್ಯಾಪಾರಿ ಮನೋಭಾವ; ಜಗದ್ಗುರು ಶಿವಾನಂದ ಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.