ಎಸ್‌ಎಸ್‌ಎಲ್‌ಸಿ ಅಂಕವೊಂದೇ ಅಂತಿಮವಲ್ಲ


Team Udayavani, Feb 9, 2020, 6:54 AM IST

sslc

ಇಡೀ ವರ್ಷ ಶಿಕ್ಷಣದ ಇತರ ಮುಖ್ಯ ವಿಷಯಗಳ ಬಗ್ಗೆ ಮಾತನಾಡದೇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಬಗ್ಗೆ ಮಾತ್ರ ಮಾತನಾಡುವುದಕ್ಕೆ ಏನೆನ್ನಬೇಕು? ಇದು ಮಕ್ಕಳಿಗೆ ಯಾವ ರೀತಿಯ ಭಯ ಹುಟ್ಟಿಸುತ್ತದೆ ಎಂದು ಯಾರಿಗಾದರೂ ಅರಿವಿದೆಯೇ?

ಎಸ್‌ಎಸ್‌ಎಲ್‌ಸಿ… ಎಸ್‌ಎಸ್‌ಎಲ್‌ಸಿ… ಎನ್ನುತ್ತಾ ಅದೇನೋ ಅದ್ಭುತ ಭಯಂಕರ ಎಂಬಂತೆ ಗಾಬರಿ ಹುಟ್ಟಿಸುವ ರೀತಿಯಲ್ಲಿ ಮಾತನಾಡುವುದು, ಸಭೆಗಳನ್ನು ನಡೆಸುವುದು, ಕರೆಕೊಡುವುದು (ಶಿಕ್ಷಕರ ಸಭೆ ಬೇರೆಯೇ) ಇತ್ಯಾದಿಗಳು ಅತಿಯಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಅತ್ಯಂತ ಪ್ರಮುಖವಾದದ್ದು, ವಿದ್ಯಾರ್ಥಿಯ ಬದುಕನ್ನು ಬದಲಾಯಿಸುವ ಘಟ್ಟ, ಆತನ ಜೀವನದ ಮಹತ್ವದ ಹಂತ ಎಂದೆಲ್ಲಾ ಹೇಳುತ್ತಾ ಪ್ರಸ್ತುತದ ಶೈಕ್ಷಣಿಕ ಪರಿಸ್ಥಿತಿಗಳ ಹಾಗೂ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಬಗ್ಗೆ ಮಾತನ್ನು ಆಡದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ನೂರು ಶೇಕಡಾ ಫ‌ಲಿತಾಂಶ ತರಬೇಕು, ಅತಿ ಹೆಚ್ಚು ಫ‌ಲಿತಾಂಶ ತಂದು ತಾಲೂಕಿಗೆ, ಜಿಲ್ಲೆಗೆ, ರಾಜ್ಯಕ್ಕೆ ಫ‌ಸ್ಟ್‌ ಬರಬೇಕು (ತಾಲೂಕುವಾರು, ಜಿಲ್ಲಾವಾರು ಬೇರೆಯೇ ಇದೆ). ಆ ಮೂಲಕ ಹೆಮ್ಮೆಯ ಸಾಧನೆ ಮಾಡಬೇಕು, ಹೆಸರು ತರಬೇಕು ಎಂದು ಹೇಳುವುದು ಮತ್ತು ಇಡೀ ವರ್ಷ ಶಿಕ್ಷಣದ ಇತರ ಮುಖ್ಯ ವಿಷಯಗಳ ಬಗ್ಗೆ ಮಾತನಾಡದೇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಬಗ್ಗೆ ಮಾತ್ರ ಮಾತನಾಡುವುದಕ್ಕೆ ಏನೆನ್ನಬೇಕು? ಇದು ಕಲಿಕೆಯ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ಯಾವ ರೀತಿಯ ಭಯ ಹುಟ್ಟಿಸುತ್ತದೆ, ಒತ್ತಡವನ್ನು ಸೃಷ್ಟಿಸುತ್ತದೆಯೆಂಬ (ಶಿಕ್ಷಕರಿಗೂ ಸೇರಿ) ಬಗ್ಗೆ ಯಾರಿಗಾದರೂ ಅರಿವಿದೆಯೇ? ಆಯಾ ತರಗತಿಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೇಗಿದೆಯೆಂಬುದನ್ನು ಯಾರಾದರೂ ಗಮನಿಸಿದ್ದಾರೆಯೇ? ಕಲಿಕಾ ಪ್ರಗತಿಯಲ್ಲಿ, ಗುಣಮಟ್ಟದ ಕಲಿಕೆಯಲ್ಲಿ ಎಲ್ಲಾ ತರಗತಿಗಳೂ ಮುಖ್ಯವಲ್ಲವೇ? ಒಂದನೇ ತರಗತಿಯಿಂದಲೇ ಕಲಿಕೆಯ ಬಗ್ಗೆ, ಗುಣಮಟ್ಟದ ಕಲಿಕೆಯ ಬಗ್ಗೆ ಮಹತ್ವ ಕೊಡಬೇಡವೇ? ಕಲಿಕಾ ಹಂತದಲ್ಲಿ ಹತ್ತನೇ ತರಗತಿ, ಒಂಬತ್ತನೇ ತರಗತಿ, ಒಂದನೇ ತರಗತಿ ಎಂಬ ಭೇದ ಇದೆಯೇ? ಮೇಲ್‌ ಹಂತದ ತರಗತಿಗಳಿಗಿಂತಲೂ ಪ್ರಾಥಮಿಕ ಹಂತದ ತರಗತಿಗಳೇ ಮುಖ್ಯ ಎಂದು ಅನಿಸುವುದಿಲ್ಲವೇ?

ಹತ್ತನೇ ತರಗತಿಯಲ್ಲಿ ಹೆಚ್ಚು ಫ‌ಲಿತಾಂಶ ಬೇಡ ಎನ್ನುವವರಾರು? ಆದರೆ ಅಂಕಾಧಾರಿತ ಫ‌ಲಿತಾಂಶವನ್ನೇ ಗುಣಾತ್ಮಕ ಫ‌ಲಿತಾಂಶ, ಅಂಕವನ್ನೇ ವಿದ್ಯಾರ್ಥಿಯ ಕಲಿಕಾ ಪ್ರಗತಿ, ಹೆಚ್ಚು ಫ‌ಲಿತಾಂಶ ಪಡೆದ ಶಾಲೆಯೇ ಅತ್ಯುತ್ತಮ ಶಾಲೆ ಹಾಗೂ ಅಂತಹ ಶಾಲೆಗಳಲ್ಲಿ ನಡೆಯುವ ಕಲಿಕಾ ಪ್ರಕ್ರಿಯೆಗಳೇ ಪರಿಣಾಮಕಾರಿ ಮತ್ತು ಮಾದರಿ ಎಂದು ಬಿಂಬಿಸುವುದು ಹಾಗೂ ಅದನ್ನೇ ಮಾನಿಸುವುದು ಶೈಕ್ಷಣಿಕ ಮೌಲ್ಯಕ್ಕೆ ಅಪಚಾರ. ಹತ್ತನೇ ತರಗತಿಯಲ್ಲಿ ತೊಂಬತ್ತು ಶೇಕಡಾಕ್ಕಿಂತ ಅಧಿಕ ಫ‌ಲಿತಾಂಶ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಫೇಲಾಗುವುದು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಾಗೂ ಪ್ರಕ್ರಿಯೆಗಳಲ್ಲಿ ನಲ್ವತ್ತು ಶೇಕಡಾ ಅಂಕ ಪಡೆದ ವಿದ್ಯಾರ್ಥಿಗಳಿಗಿಂತಲೂ ಕಳಪೆ ಪ್ರದರ್ಶನ ಮಾಡುವವರ ಸಾಲು ಬೆಳೆಯುತ್ತಿರುವುದನ್ನು ನೋಡಿದ್ದೇವೆ. ಅಂಕದಲ್ಲಿ ಫೇಲಾಗುವ, ಕಲಿಕೆಯಲ್ಲಿ ಹಿಂದೆ ಉಳಿಯುವ ಬಹುತೇಕ ವಿದ್ಯಾರ್ಥಿಗಳನ್ನು ಗಮನಿಸಿದಾಗ ಒಂದು ಸತ್ಯ

ಗೋಚರವಾಗುತ್ತದೆ, ಅದೇನೆಂದರೆ: ಅವರ್ಯಾರೂ ಗುಣನಡತೆಗಳಲ್ಲಿ, ಜೀವನ ಕೌಶಲಗಳಲ್ಲಿ, ಮೂಲಭೂತ ಅವಶ್ಯಕತೆಗಳ ಕ್ಷೇತ್ರಗಳಲ್ಲಿ ಹೊಂದಿರುವ ದುಡಿಯುವ ಸಾಮರ್ಥ್ಯಗಳಲ್ಲಿ ಹಿಂದುಳಿದಿರುವವರಲ್ಲ (ಪ್ರತಿಭಾ ಸಂಪನ್ನರೇ ಆಗಿರುತ್ತಾರೆ) ಎನ್ನುವುದು. ದುರಂತವೇನೆಂದರೆ ಸಮಾಜದ ಆಧಾರ ಸ್ತಂಭವಾಗುವ, ನಿಜವಾದ ಕಲಿಕೆಯ ಮೌಲ್ಯಗಳನ್ನು ರೂಢಿಸಿಕೊಂಡಿರುವ ತುಂಬಾ ಮಕ್ಕಳು ಅಂಕಾಧಾರಿತವಾಗಿರುವ ಇಂದಿನ ಫ‌ಲಿತಾಂಶಗಳಲ್ಲಿ ಫೇಲು ಎಂದು ಹಣೆಪಟ್ಟಿ ಹಚ್ಚಿಕೊಳ್ಳಬೇಕಾಗಿರುವುದು.

ಕೆಳಹಂತದ ತರಗತಿಯಿಂದಲೆ ಕಲಿಕಾ ಸಮಸ್ಯೆಗಳುಳ್ಳ, ತಡೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮೇಲಿನ ತರಗತಿಗೆ ಬಂದಾಗ ಅವರು ಹೇಗೆ ಆ ತರಗತಿಯಲ್ಲಿ (ಅಂದರೆ ಅಂಕದಲ್ಲಿ ಓದು, ಬರಹ, ಲೆಕ್ಕದಲ್ಲಿ) ಉತ್ತಮ ನಿರ್ವಹಣೆ ತೋರಲು ಅಥವಾ ತಲುಪಲು ಸಾಧ್ಯ? ಪ್ರಾಥಮಿಕ ಹಂತದಿಂದಲೇ ಕೆಲವು ಪಾಠಗಳಲ್ಲಿ ಕೆಲವರು ಹುಷಾರಾಗಿರುತ್ತಾರೆ. ಕೆಲವರಿಗೆ ಕೆಲವು ಪಾಠಗಳು ಬೇಡವೆಂದೂ ಇರಬಹುದು. ಅಂತವರೆಲ್ಲ ಪ್ರೌಢ ತರಗತಿಗೆ (ಹೈಸ್ಕೂಲ್‌ಗೆ) ಬಂದಾಗ ಬದಲಾವಣೆಗೂ ಒಳಗಾಗುತ್ತಾರೆ. ಪ್ರಾಥಮಿಕ ಶಾಲೆಗಳಲ್ಲಿ ಕಷ್ಟವೆನಿಸಿದ ಬೇಡ ಎನ್ನುವ ಪಠ್ಯ ವಿಷಯಗಳು ಪ್ರೌಡಶಾಲಾ ತರಗತಿಯಲ್ಲಿ ಸುಲಭ ಹಾಗೂ ಬೇಕು ಎಂದೂ ಆಗಬಹುದು.

ಸಮಸ್ಯೆಯೇನೆಂದರೆ ಅಂಕಾಧಾರಿತ ಫ‌ಲಿತಾಂಶದ ಲೆಕ್ಕಚಾರದಲ್ಲಿ ಹೇಳುವುದಾದರೆ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲಿ ಒಂದೋ ಎರಡೋ ಪಠ್ಯ ವಿಷಯಗಳು ಬೇಡವಾಗಿರಬಹುದು. ಹತ್ತನೇ ತರಗತಿಯ ಅನಂತರದ ಕಲಿಕಾ ಹಂತದಲ್ಲೂ ಅವರಿಗೆ ಅಂತಹ ಪಠ್ಯವಿಷಯ ಬೇಡ.

ಅದಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳ ಮಟ್ಟಕ್ಕಿಂತ ಹಾಗೂ ಬದುಕಿಗೆ ಅನ್ವಯವಾಗದ, ಎಂದೂ ಉಪಯೋಗಕ್ಕೂ ಬಾರದ ಉನ್ನತ ತರಗತಿಯ ವ್ಯಾಸಂಗದಲ್ಲಿ ಇರಬೇಕಾದ ಎಷ್ಟೋ ಪಠ್ಯ ವಿಷಯಗಳು ಕೆಳಹಂತದ ತರಗತಿಗಳ ಪಠ್ಯದಲ್ಲೂ ಇವೆ. ಇಂತಹ ವಿಷಯಗಳ ಕಾಠಿಣ‌Âದ ಮತ್ತು ಪುನಾರಾವರ್ತನೆಗಳ ಮಾಹಿತಿಗಳ ಭಾರದ ಪಾಠ ಪುಸ್ತಕವೂ ಕಲಿಕೆಯಲ್ಲಿ ಹಿಂದುಳಿಯುವುದಕ್ಕೆ ಕಾರಣವಾಗಿರುವುದು ನಮ್ಮ ವಿದ್ಯಾರ್ಥಿಗಳ ದೌರ್ಭಾಗ್ಯ.

ಇದನ್ನೆಲ್ಲ ಮೀರಿ ಹತ್ತನೇ ತರಗತಿಯೆಂಬ “ವೆÂತರಣಿ’ ಹೊಳೆಯನ್ನು ದಾಟಬೇಕು ನಮ್ಮ ವಿದ್ಯಾರ್ಥಿಗಳು. ಇಂತಹ ಸ್ಥಿತಿಗತಿಯ ಶೈಕ್ಷಣಿಕ ವಾಸ್ತವದ ಸನ್ನಿವೇಶದಲ್ಲಿ ಪಾಸು-ಫೇಲು ಎಂಬ ಫ‌ಲಿತಾಂಶ ವ್ಯವಸ್ಥೆಯೇ ಅಪ್ರಸ್ತುತ ಬದುಕಿನಲ್ಲಿ ಪಾಸಾಗುತ್ತಾನೆ. ಸವಾಲನ್ನು ಎದುರಿಸುವ ಎದೆಗಾರಿಕೆ ಹೊಂದಿರುತ್ತಾನೆ. ಗುಣನಡತೆಗಳಲ್ಲಿ ಉನ್ನತ ಶ್ರೇಣಿ ಯಲ್ಲಿರುತ್ತಾನೆ, ಶ್ರಮ ಸಮರ್ಥ್ಯದಲ್ಲಿ ಅನುಭವ ಹೊಂದಿರುತ್ತಾನೆ, ಜೀವನಾವಶ್ಯಕ ಕ್ಷೇತ್ರಗಳಲ್ಲಿ ಕೌಶಲಗಳನ್ನೂ ಹೊಂದಿರುತ್ತಾನೆ.

ನಮ್ಮ ಶಾಲೆಗಳಲ್ಲಿರುವ ಇಂತಹ ವಿದ್ಯಾರ್ಥಿಗಳು ಅಂಕಾಧಾರಿತ ಫ‌ಲಿತಾಂಶ ತಂದುಕೊಡಲಾರದೆ ಅಪ್ರಸ್ತುತವಾಗುವುದು, ಫೇಲೆಂದು ಹಣೆಪಟ್ಟಿ ಸಿಕ್ಕಿಸಿಕೊಳ್ಳುವುದು ಅತ್ಯಂತ ಅಮಾನವೀಯ, ಅಸಂಗತ, ಅವೈಜ್ಞಾನಿಕ. ಈ ರೀತಿಯ ಶೈಕ್ಷಣಿಕ ಪರಿಸ್ಥಿತಿಯ ಹತ್ತನೇ ತರಗತಿಯಲ್ಲಿ ಅಂಕವನ್ನೇ ಪ್ರಧಾನವಾಗಿಟ್ಟುಕೊಂಡು ನಡೆಯುವ ಶಾಲಾ ಚಟುವಟಿಕೆಗಳು, ಸಭೆಗಳು, ಉಚಿತ ಸಲಹೆಗಳು ಒಟ್ಟು ಶೈಕ್ಷಣಿಕ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡವನ್ನು ಹುಟ್ಟುಹಾಕುತ್ತದೆ. ಇವತ್ತು ಮೊದಲು ಮಾಡಬೇಕಾದ್ದು ಒಂದನೇ ತರಗತಿಯಿಂದಲೇ ಕಲಿಕಾ ಮಟ್ಟವನ್ನು ಸುಧಾರಿಸುವ ಕೆಲಸ. ಪ್ರತಿ ತರಗತಿಯಲ್ಲಿ ಮಕ್ಕಳು ಕನಿಷ್ಠ ಕಲಿಕಾ ಮಟ್ಟವನ್ನು ತಲುಪುವ ಹಾಗಿರುವ ಬೋಧನಾ ವ್ಯವಸ್ಥೆ ಮತ್ತು ಶೈಕ್ಷಣಿಕ ವಾತಾವರಣ ಕಲ್ಪಿಸುವುದು. ಎಲ್ಲೂ ಯಾವ ತರಗತಿಯಲ್ಲೂ ಅಂಕದ, ಪಾಸು-ಫೈಲಿನ ಸುದ್ದಿಯೇ ಇರಬಾರದು.

ಆಯಾ ತರಗತಿಯನ್ನು ಪೂರೈಸುವಾಗ ಪ್ರತಿ ವಿದ್ಯಾರ್ಥಿಯೂ ಕನಿಷ್ಠ ಕಲಿಕಾ ಹಂತವನ್ನು ತಲುಪುವ ಮತ್ತು ಗುಣಾತ್ಮಕವಾದ ವರ್ತನೆಗಳನ್ನು ರೂಢಿಸಿಕೊಳ್ಳುವ ಹಾಗಾಗಬೇಕು. ಒಟ್ಟಾಗಿ ಓರ್ವ ವಿದ್ಯಾರ್ಥಿ ಬದುಕಿನ ಸಂದರ್ಭಗಳಲ್ಲಿ ಜೀವನ ಕೌಶಲ ಮತ್ತು ಮಾನವೀಯ ಮೌಲ್ಯಗಳಲ್ಲಿ, ನಾಗರಿಕ ಪ್ರಜ್ಞೆಗಳಲ್ಲಿ ಎಷ್ಟು ಗುಣಾಂಕ ಹೊಂದಿರುತ್ತಾನೆ ಎಂಬುದೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆತ್ಯಂತಿಕ ಸಂಗತಿಯಾಗಬೇಕು.

ಈ ಬಗ್ಗೆ ಏನನ್ನೂ ಮಾತನಾಡದೆ, ಯೋಚಿಸದೆ ಕೇವಲ ಹತ್ತನೇ ತರಗತಿಯ ಅಂಕದ ಬಗ್ಗೆಯೇ ಮಾತನಾಡುವುದು ಸಾಧುವಲ್ಲ. ಎಲ್ಲರೂ ಶಿಕ್ಷಣ ವ್ಯವಸ್ಥೆಯ ವಾಸ್ತವವನ್ನು ಅರಿತು ಮಾತನಾಡಬೇಕು. ನಿಜವಾದ ಶಿಕ್ಷಣದ ವ್ಯವಸ್ಥೆಯ ಬಗ್ಗೆಯೂ ಮಾತನಾಡಬೇಕು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಪರ್ಧೆಗಳು, ಬೋಧನೆ-ಬೋಧನಾ ಚಟುವಟಿಕೆಗಳು, ತರಗತಿ ನಿರ್ವಹಣೆ (ಪ್ರಕ್ರಿಯಾಧಾರಿತ ಕಲಿಕೆ), ಸಹಪಠ್ಯ ಚಟುವಟಿಕೆಗಳು, ಮಕ್ಕಳ ಕಲಿಕಾ ಸಾಮರ್ಥ್ಯ- ಕನಿಷ್ಠ ಕಲಿಕಾ ಮಟ್ಟ, ಶಾಲೆಗಳ ಮೂಲಭೂತ ಅವಶ್ಯಕತೆಗಳು, ತರಗತಿಗೋರ್ವ ಶಿಕ್ಷಕರ ನೇಮಕಾತಿ, ಭಾಷೆ-ಭಾಷಾ ಕಲಿಕೆ, ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ನಡುವಿನ ತಾರತಮ್ಯ ನೀತಿಗಳು (ಶಿಕ್ಷಕರ ಸಮಸ್ಯೆಗಳು ಬೇರೆಯೇ ಇದೆ) ಇತ್ಯಾದಿಗಳ ಬಗ್ಗೆಯೂ ಸ್ವಲ್ಪ ಮಾತಾಡಿ.

– ರಾಮಕೃಷ್ಣ ಭಟ್‌ ಚೊಕ್ಕಾಡಿ ಬೆಳಾಲು

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.