ಅಂತೂ ಬದುಕುಳಿಯಿತು ವಿಶ್ವದ ಅತಿ ಕಡಿಮೆ ತೂಕದ ಶಿಶು!
Team Udayavani, Aug 9, 2021, 11:15 PM IST
ಸಾಂದರ್ಭಿಕ ಚಿತ್ರ..
ಸಿಂಗಾಪುರ: 13 ತಿಂಗಳ ಹಿಂದೆ ಜನಿಸಿದ್ದ ವಿಶ್ವದ ಅತಿ ಕಡಿಮೆ ತೂಕದ ಶಿಶು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಕ್ವೆಕ್ ಯು ಕ್ಸುಯಾನ್ ಹೆಸರಿನ ಮಗು ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಜೂನ್ 9ರಂದು ಜನಿಸಿತ್ತು. ಆ ವೇಳೆ ಮಗು ಕೇವಲ 212 ಗ್ರಾಂ ಅಂದರೆ ಒಂದು ಆ್ಯಪಲ್ ನಷ್ಟು ತೂಕವಿದ್ದು, ಇಡೀ ವಿಶ್ವದಲ್ಲೆ ದಾಖಲೆ ಬರೆದಿತ್ತು.
ಕ್ವೆಕ್ ತಾಯಿ 7 ತಿಂಗಳ ಗರ್ಭಿಣಿ (25 ವಾರಗಳು) ಆಗಿದ್ದಾಗಲೇ ಮಗು ಜನಿಸಿತ್ತು. ಹೆರಿಗೆಯಾದ ತಕ್ಷಣವೇ ಮಗುವನ್ನು ಐಸಿಯುಗೆ ದಾಖಲಿ ಸಲಾಗಿದ್ದು, ಅಲ್ಲಿಂದ ಬರೋಬ್ಬರಿ 13 ತಿಂಗಳುಗಳ ಕಾಲ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೇವಲ 24 ಸೆಂ.ಮೀ ಉದ್ದವಿದ್ದ ಮಗುವಿನ ಚರ್ಮಕ್ಕೆ ಬ್ಯಾಂಡೆಡ್ ಹಾಕುವುದರಿಂದ ಹಿಡಿದು, ಡೈಪರ್ ಹಾಕುವವರೆಗೆ ಎಲ್ಲವೂ ಒಂದು ಸಾಹಸವಾಗಿತ್ತು ಎನ್ನುತ್ತಾರೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿ. ಇದೀಗ ಮಗು 6.3 ಕೆಜಿ ತೂಕವಾಗಿದೆ.
ಇದನ್ನೂ ಓದಿ:ಖಾದ್ಯ ತೈಲ ಕ್ಷೇತ್ರದಲ್ಲೂ ದೇಶ ಸ್ವಾವಲಂಬಿಯಾಗಬೇಕು : ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ
ಆಕೆಯ ಪೋಷಕರಿಗೆ ಕೆಲ ವೈದ್ಯಕೀಯ ಸಲಕರಣೆಗಳ ಬಳಕೆಯ ಬಗ್ಗೆ ತರಬೇತಿ ನೀಡಲಾಗಿದ್ದು, ಮನೆಯಲ್ಲಿ ಚಿಕಿತ್ಸೆ ಮುಂದುವರಿಸುವುದಾಗಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ