ಸಂಪುಟದಲ್ಲಿ ಉಳಿದಿರೋದು 16 ಇನ್ಯಾರಿಗಿದೆಯೋ “ಭಾಗ್ಯ’

Team Udayavani, Aug 21, 2019, 3:08 AM IST

ಬೆಂಗಳೂರು: ಬಿಜೆಪಿ ಸರ್ಕಾರದ ಮೊದಲ ಹಂತದ ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ಉಳಿದಿರುವ ಸ್ಥಾನಗಳೆಷ್ಟು, ಅದರಲ್ಲಿ ನಮಗೆ ಸಿಗುವುದೆಷ್ಟು? ಎಂಬ ಹೊಸ ಲೆಕ್ಕಾಚಾರ ಅನರ್ಹತೆಗೊಂಡಿರುವ ಶಾಸಕರಲ್ಲಿ ಪ್ರಾರಂಭವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದ 17 ಶಾಸಕರ ಪೈಕಿ ಹನ್ನೆರಡು ಶಾಸಕರಿಗೆ ಸಚಿವಗಿರಿ ಭರವಸೆ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಪ್ರಸ್ತುತ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳು 16.

ಶಾಸಕರ ಅನರ್ಹತೆ ಪ್ರಕರಣ ನ್ಯಾಯಾ ಲಯದಲ್ಲಿ ಇತ್ಯ ರ್ಥಗೊಂಡರೆ 12 ಮಂದಿಗೆ ಅವಕಾಶ ಕಲ್ಪಿಸಿದರೆ ಉಳಿ ಯುವುದು ನಾಲ್ಕು. ಆದರೆ, ಬಿಜೆಪಿಯಲ್ಲಿ ಎರಡು ಡಜನ್‌ ಆಕಾಂಕ್ಷಿಗಳಿದ್ದು, ಅಲ್ಲೂ ಅತೃಪ್ತ ಶಾಸಕರ ಅಸಮಾಧಾನ ಹೆಚ್ಚಾದರೆ ತಮ್ಮ ಆಸೆಗೆ ಕುತ್ತು ತರಬಹುದಾ ಎಂಬ ಸಣ್ಣ ಆತಂಕವೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು ನಗರ ವಿಚಾರಕ್ಕೆ ಬಂದರೆ ಮೊದಲ ಹಂತದಲ್ಲಿ ನಾಲ್ವರಿಗೆ ಅವಕಾಶ ಕಲ್ಪಿಸಲಾಗಿದ್ದು, ಅನರ್ಹತೆಗೊಂಡಿರುವ ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವ ರಾಜ್‌, ಗೋಪಾಲಯ್ಯ ಸೇರಿ ನಾಲ್ವರು ಸಚಿವಾಕಾಂಕ್ಷಿಗಳಾಗಿದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ಕೊಟ್ಟರೆ ಬೆಂಗಳೂರು ನಗರಕ್ಕೆ ಎಂಟು ಸ್ಥಾನ ಸಿಕ್ಕಂತಾಗುತ್ತದೆ. ಆಗ, ಜಾತಿವಾರು ಪ್ರಾತಿನಿಧ್ಯದಲ್ಲೂ ಏರು-ಪೇರಾಗುವ ಸಾಧ್ಯತೆಯಿದೆ. ಇನ್ನು ಬೆಳಗಾವಿಯಲ್ಲಿ ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ ಎರಡೂ ಮನೆಯ ಸದಸ್ಯರಾಗದಿದ್ದರೂ ಸಚಿವ ಸ್ಥಾನ ಸಿಕ್ಕಿದ್ದು, ಬಹುತೇಕ ಅವರೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಯಿದೆ.

ಇಡೀ ಆಪರೇಷನ್‌ ಕಮಲ ಕಾರ್ಯಾ ಚರಣೆ ರೂವಾರಿ ಗೋಕಾಕ್‌ ಕ್ಷೇತ್ರದ ರಮೇಶ ಜಾರಕಿಹೊಳಿ ಅವರ ವಿಚಾರದಲ್ಲಿ ಅನರ್ಹತೆ ಇತ್ಯರ್ಥಗೊಂಡ ನಂತರ ಅವಕಾಶ ಸಿಗಬಹುದು. ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್‌ ಅವರಿಗೆ ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಎರಡೂ ಮನೆಯ ಸದಸ್ಯರಾಗ ದಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಟ್ಟಿರುವುದು ಜಾರಕಿಹೊಳಿ ಹಾಗೂ ಕತ್ತಿ ಕುಟುಂಬಕ್ಕೆ ಬೇಸರವಾಗಿದೆ ಎಂದು ಹೇಳಲಾಗುತ್ತಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರ ದಿಂದ ಪ್ರತಾಪಗೌಡ ಪಾಟೀಲ್‌, ಹಾವೇರಿ ಜಿಲ್ಲೆ ಹಿರೇಕೆರೂರಿನಿಂದ ಬಿ.ಸಿ.ಪಾಟೀಲ್‌, ರಾಣಿಬೆನ್ನೂರು ಕ್ಷೇತ್ರದಿಂದ ಆರ್‌.ಶಂಕರ್‌, ಮೈಸೂರಿನ ಹುಣಸೂರಿನಿಂದ ಎಚ್‌.ವಿಶ್ವನಾಥ್‌, ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದಿಂದ ಶಿವರಾಮ್‌ ಹೆಬ್ಬಾರ್‌, ಬೆಂಗ ಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಯಿಂದ ಎಂ.ಟಿ.ಬಿ. ನಾಗ ರಾಜ್‌, ಚಿಕ್ಕಬಳ್ಳಾಪುರದಿಂದ ಡಾ.ಕೆ.ಸುಧಾಕರ್‌, ಮಂಡ್ಯದಿಂದ ನಾರಾಯಣ ಗೌಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಇವರ ಭವಿಷ್ಯ ಸುಪ್ರೀಂಕೋರ್ಟ್‌ ತೀರ್ಪಿನ ಮೇಲೆ ನಿಂತಿದೆ. ಈ ಜಿಲ್ಲೆಗಳಲ್ಲಿ ಬಿಜೆಪಿ ಯಿಂದ ಮೊದಲ ಹಂತದಲ್ಲಿ ಯಾರಿಗೂ ಅವಕಾಶ ಕೊಡದಿರುವುದು ಭರವಸೆ ಮೂಡಿಸಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರು ವವರ ಪೈಕಿ ನಾಲ್ಕೈದು ಮಂದಿ ಉಪ ಚುನಾವಣೆಗೆ ಸ್ಪರ್ಧೆ ಮಾಡುವುದು ಅನು ಮಾನ. ತಮ್ಮ ಕುಟುಂಬ ಸದಸ್ಯರನ್ನು ಕಣಕ್ಕಿಳಿ ಸಬಹುದು ಇಲ್ಲವೇ ವಿಧಾನಪರಿಷತ್‌ ಸದಸ್ಯ ಗಿರಿ ಪಡೆದು ಬಿಜೆಪಿಯವರಿಗೆ ಬಿಟ್ಟುಕೊಡ ಬಹುದು ಎಂದು ಹೇಳಲಾಗುತ್ತಿದೆ.

ಬಿಟ್ಟು ಕೊಡ್ತಾರಾ?: ಮತ್ತೂಂದು ಮೂಲದ ಪ್ರಕಾರ ಈಗ ಸಚಿವರಾಗಿರುವವರಲ್ಲಿ ಕೆಲ ವರು ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಪ್ರಕರಣ ಇತ್ಯರ್ಥಗೊಂಡ ನಂತರ ಬೆಂಗ ಳೂರಿನ ಇಬ್ಬರು, ಬೆಳಗಾವಿಯ ಒಬ್ಬರು ಸೇರಿ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮನಗರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಅವಕಾಶ ಸಿಗಲಿದೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿಯೂ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವಾದರೂ ಅವರ ಆಸೆ ಈಡೇರಿಲ್ಲ.

ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಸಿಗುತ್ತಾ?: ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಸ್ವಲ್ಪ ಶಕ್ತಿ ಕಡಿಮೆಯಿದ್ದು, ಆ ಭಾಗದಲ್ಲಿ ಶಾಸಕರು ಇಲ್ಲದಿದ್ದರೂ ಪರಿಷತ್‌ ಸದಸ್ಯರಿಗೆ ಅವಕಾಶ ಕೊಡಬೇಕು. ಆ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂಬ ಒತ್ತಾಯವೂ ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಆದರೆ, ಅನರ್ಹತೆ ಪ್ರಕರಣ ಇತ್ಯರ್ಥಗೊಂಡ ನಂತರ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಹಳೇ ಮೈಸೂರು ಭಾಗಕ್ಕೆ ಮತ್ತಷ್ಟು ಪ್ರಾತಿನಿಧ್ಯ ಸಿಗುತ್ತಾ ಕಾದು ನೋಡಬೇಕಾಗಿದೆ.

* ಎಸ್‌. ಲಕ್ಷ್ಮಿನಾರಾಯಣ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ