- Sunday 15 Dec 2019
ಬಿಎಸ್‌ವೈ ಸರ್ಕಾರಕ್ಕೆ ಅಪಾಯವಿಲ್ಲ
Team Udayavani, Nov 12, 2019, 3:07 AM IST
ಕಲಬುರಗಿ: ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುವುದಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಂತರಿಕ ಕಚ್ಚಾಟ ಹೆಚ್ಚಾಗಿ ಯಡಿಯೂರಪ್ಪ ಸರ್ಕಾರ ಬಿದ್ದರೆ ನನಗೆ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್ ನಾಯಕರ ಕೈಯಲ್ಲಿ ಸರ್ಕಾರದ ಭವಿಷ್ಯವಿದೆ. ಅವರು ಎಲ್ಲಿಯವರೆಗೆ ಬೆಂಬಲ ಕೊಡುತ್ತಾರೋ ಅಲ್ಲಿಯವರೆಗೆ ಅಪಾಯವಿಲ್ಲ. ಆದರೆ, ಬಿಜೆಪಿ ಸರ್ಕಾರಕ್ಕೆ ನಾವಾಗಿಯೇ ಬೆಂಬಲ ಕೊಡುವುದಿಲ್ಲ ಎಂದರು.
ರಾಜ್ಯದಲ್ಲಿ 17 ಸ್ಥಾನಗಳಿಗಾಗಿ ನಡೆಯುವ ಉಪ ಚುನಾವಣೆಯಲ್ಲಿ ನಾವು ಯಾರ ಸಹವಾಸ ಮಾಡಲ್ಲ. ಸಿದ್ದರಾಮಯ್ಯ ಮನೆ ಬಾಗಿಲಿಗೂ ಹೋಗುವುದಿಲ್ಲ. ಯಡಿಯೂರಪ್ಪ ಮನೆ ಬಾಗಿಲಿಗೂ ಹೋಗುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ಶಕ್ತಿ ನಮ್ಮಲ್ಲಿಲ್ಲ ಎಂದರು.
17 ಕ್ಷೇತ್ರಗಳ ಪೈಕಿ ಐದಾರು ಕ್ಷೇತ್ರಗಳಲ್ಲಿ ಹೆಚ್ಚಿನ ಪೈಪೋಟಿ ನೀಡುತ್ತೇವೆ. ಬೆಳಗಾವಿ ವಿಭಾಗದಲ್ಲಿ ಎರಡು ಕಡೆ ಮತ್ತು ಹಳೇ ಮೈಸೂರು ಭಾಗದಲ್ಲಿ ಮೂರ್‍ನಾಲ್ಕು ಕಡೆ ಪ್ರಬಲ ಸ್ಪರ್ಧೆವೊಡ್ಡುತ್ತೇವೆ. ಉಳಿದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಆದರೆ, ಗೆಲುವು-ಸೋಲು ನಮ್ಮ ಕೈಯಲ್ಲಿಲ್ಲ. ಜನರ ಕೈಯಲ್ಲಿದೆ ಎಂದರು. ಉಪ ಚುನಾವಣೆ ನಂತರ ಮಧ್ಯಂತರ ಚುನಾವಣೆ ಬರುವುದಿಲ್ಲ. ಸಿದ್ದರಾಮಯ್ಯ ಭಾಗ್ಯಗಳನ್ನು ಕೊಟ್ಟಿದ್ದೇನೆಂದು ಚುನಾವಣೆ ಎನ್ನುತ್ತಿರಬೇಕು.
ಇಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳೇ ಗೆಲ್ಲುವುದು ಕಷ್ಟವಿದೆ. ನಮ್ಮ ಶಕ್ತಿ ಸಣ್ಣದು. ನಾವು ಪಕ್ಷ ಕಟ್ಟುತ್ತಿದ್ದೇವೆ. ಮೂರು ವರ್ಷದ ನಂತರ ಚುನಾವಣೆ ಬಂದರೆ ಪಕ್ಷವನ್ನು ಅ ಧಿಕಾರಕ್ಕೆ ತರುತ್ತೇನೆ. ಆದರೆ, ಮುಂದಿನ ವರ್ಷವೇ ಬಂದರೆ ಆಗುವುದಿಲ್ಲ ಎಂದರು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಇದ್ದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯವರು ಎಲ್ಲ ಸ್ಥಾನ ಗೆಲುತ್ತೇವೆ ಎನ್ನುತ್ತಿದ್ದಾರೆ. ಆದರೆ, ನನಗೆ ಹಾಗೆ ಹೇಳುವಷ್ಟು ಶಕ್ತಿಯಿಲ್ಲ. ಫಲಿತಾಂಶ ಬಂದ ಮೇಲೆ ಯಾರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂದು ಗೊತಾಗುತ್ತದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದವರು ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಮುಖಂಡರ ಜತೆ ಸಂಪರ್ಕದಲ್ಲಿದ್ದಾರೆ. ಕೆ.ಆರ್. ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಿಗೆ ಮಂಗಳವಾರ ಅಭ್ಯರ್ಥಿಗಳ ಆಯ್ಕೆಯಾಗಲಿದೆ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಹೃದಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆದರು. ಐದು ದಿನಗಳ ಹಿಂದೆ ಸಿದ್ದರಾಮಯ್ಯ...
-
ಬೆಂಗಳೂರು: ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಎರಡೂ ಬದಿ ಹೊಟೇಲ್ ಸೇರಿದಂತೆ ಪ್ರವಾಸಿಗರಿಗೆ ಪೂರಕವಾದ ಸೌಲಭ್ಯ ನಿರ್ಮಿಸಲು ಮುಂದೆ ಬರುವವರಿಗೆ...
-
ಬೆಂಗಳೂರು: ಒಂದೆಡೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದು ಹೊಸ ಬಿಜೆಪಿ ಶಾಸಕರ ಆತಂಕಕ್ಕೆ ಕಾರಣವಾಗಿದ್ದರೆ ಮತ್ತೂಂದೆಡೆ ಉಪ ಮುಖ್ಯ ಮಂತ್ರಿ ಸ್ಥಾನಕ್ಕೆ...
-
ಬೆಂಗಳೂರು: ಮೊಗವೀರ, ಬೆಸ್ತ, ಅಂಬಿಗ, ಗಂಗಾಮತಸ್ತ ಸಹಿತವಾಗಿ 39 ಹೆಸರುಗಳಿಂದ ಗುರುತಿಸುವ ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಸೇರಿಸುವ ಸಂಬಂಧ...
-
ಬೆಂಗಳೂರು: ರಾಜ್ಯದಲ್ಲಿ ಮಹಾಪುರುಷರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಿಸುವ ಬಗ್ಗೆ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ತಜ್ಞರು ಹಾಗೂ ಸಾಹಿತಿಗಳಿಂದ...
ಹೊಸ ಸೇರ್ಪಡೆ
-
ಮೂಲ್ಕಿ: ಇಲ್ಲಿನ ಶಿಮಂತೂರು ಪರಂಕಿಲ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ರಾತ್ರಿ ಮಹಿಳೋರ್ವರನ್ನು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶಾರದಾ...
-
ಬೆಂಗಳೂರು: ಹೃದಯ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಡಿಸ್ಚಾರ್ಜ್ ಆದರು. ಐದು ದಿನಗಳ ಹಿಂದೆ ಸಿದ್ದರಾಮಯ್ಯ...
-
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಸಮೀಪ ಶನಿವಾರ ತಡರಾತ್ರಿ ಖಾಸಗಿ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ...
-
ದಾವಣಗೆರೆ: ನೂತನವಾಗಿ ಮೊಬೈಲ್ ಶೋರೂಂ ಪ್ರಾರಂಭಿಸಿದ ಹಿನ್ನಲೆ, ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡಲು ಮುಂದಾಗಿದ್ದ ಅಂಗಡಿ ಸಿಬಂದಿಗೆ ಬೆಳ್ಳಂಬೆಳಗ್ಗೆಯೇ ಆಘಾತ...
-
ಲಂಡನ್: ಈ ವರ್ಷದ ವಿಶ್ವ ಸುಂದರಿ ಅಂತಿಮ ಸುತ್ತು ಶನಿವಾರ ರಾತ್ರಿ ನಡೆದಿದ್ದು ಅಂತಿಮ ಪ್ರಶಸ್ತಿ ಪ್ರಕಟವಾಗಿದೆ. ಜಮೈಕಾದ ಟೋನಿ ಆನ್ ಸಿಂಗ್ ವಿಶ್ವ ಸುಂದರಿ ಕಿರೀಟ...