“ಆವರಣ’ ನಿಷೇಧಿಸುವ ಭೀತಿ ಕಾಡಿತ್ತು

Team Udayavani, Aug 26, 2019, 3:08 AM IST

ಧಾರವಾಡ: “ಓದುಗರು ಮೆಚ್ಚಿಕೊಂಡ, ಪ್ರಸ್ತುತ 54ಕ್ಕೂ ಹೆಚ್ಚು ಮುದ್ರಣ ಕಂಡ “ಆವರಣ’ ಕಾದಂಬರಿಯನ್ನು ಸರ್ಕಾರ ನಿಷೇಧಿಸುವ ಆತಂಕವಿತ್ತು. ಇದೇ ಕಾರಣಕ್ಕೆ ನಾನು ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದುಕೊಂಡಿದ್ದೆ’ ಎಂದು ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಹೇಳಿದರು. ಧಾರವಾಡದ ಸಹಯೋಗದಲ್ಲಿ ಸೃಜನಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ “ಆವರಣ-50 ಮತ್ತು ಕಥೆ ಕಾದಂಬರಿಗಳ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತಿಹಾಸದ ಹಲವು ಸತ್ಯಗಳನ್ನು ಬೆಳಕಿಗೆ ತಂದ ಕಾರಣದಿಂದಾಗಿ ಸಮಾಜದ ಒಂದು ವರ್ಗದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನನ್ನ ಕಾದಂಬರಿಯನ್ನು ನಿಷೇಧ ಮಾಡುತ್ತಾರೆಂಬ ಆತಂಕವಿತ್ತು. ಸಲ್ಮಾನ್‌ ರಷಿª ಬರೆದ “ಸಟಾನಿಕ್‌ ವರ್ಸಸ್‌’ ಕೃತಿ ಪಾಶ್ಚಾತ್ಯ ದೇಶಗಳಲ್ಲಿ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು ಜನರು ಓದಿದ ನಂತರ ಮುಸ್ಲಿಂ ರಾಷ್ಟ್ರದ ಮುಖಂಡನೊಬ್ಬ ಕೃತಿಯನ್ನು ನಿಷೇಧಿಸಬೇಕೆಂದು ಘೋಷಿಸಿದ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ರಷಿªಯ ಕೃತಿ ನಿಷೇಧಿಸಲಾಯಿತು ಎಂದರು.

“ಮುಸಲ್ಮಾನ ರಾಜರು ಹಿಂದೂ ಧರ್ಮ ಹಾಗೂ ಹಿಂದೂಗಳ ಮೇಲೆ ಮಾಡಿದ ದೌರ್ಜನ್ಯವನ್ನು ಬಿಂಬಿ ಸುವ, ಇತಿಹಾಸದ ಹಲವು ಕಟು ಸತ್ಯಗಳನ್ನು ಒಳಗೊಂಡ ನನ್ನ ಕೃತಿಯನ್ನು ನಿಷೇಧಿಸುವ ಅಳುಕಿತ್ತು. ಮುಂಜಾಗ್ರತಾ ಕ್ರಮವಾಗಿ ವಿಶ್ರಾಂತ ನ್ಯಾಯಮೂರ್ತಿ ರಾಮಾ ಜೋಯಿಸ್‌, ಹಾರ್ನಹಳ್ಳಿ ರಾಮಸ್ವಾಮಿ, ಅಶೋಕ ಹಾರ್ನಹಳ್ಳಿ ಸೇರಿ ಹಲವು ಕಾನೂನು ತಜ್ಞರಿಗೆ ನನ್ನ ಲಿಖೀತ ಪ್ರತಿ ನೀಡಿ ಅವರ ಅಭಿಪ್ರಾಯ ಪಡೆದುಕೊಂಡೆ.

ನಾನು ಕಾದಂಬರಿಗೆ ಓದಿದ ಗ್ರಂಥಗಳ ಪಟ್ಟಿಯೇ ಸಾಕು, ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಅವರು ತಿಳಿಸಿದ್ದರು. ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಂಡಿದ್ದನ್ನು ನನ್ನ ಕಾದಂಬರಿ ಯಲ್ಲಿ ತಿಳಿಸಿದೆ. ಬಹುಶ: ಇದೇ ಕಾರಣಕ್ಕೆ ಕಾದಂಬರಿ ಯನ್ನು ನಿಷೇಧಿಸುವ ಧೈರ್ಯಕ್ಕೆ ಯಾರೂ ಮುಂದಾಗ ಲಿಲ್ಲ. ಇದು ಸರ್ಕಾರದಲ್ಲಿದ್ದವರಿಗೆ ಎಚ್ಚರಿಕೆ ಕೊಟ್ಟಂತಾಯಿತು ಎನಿಸುತ್ತದೆ’ ಎಂದು ಮುಗುಳ್ನಗೆ ಬೀರಿದರು.

ಬದಲಾವಣೆಗೆ ಇಸ್ಲಾಂ ಒಪ್ಪಲ್ಲ: “ನಾನು ನನ್ನ ಕೃತಿಯಲ್ಲಿ ಸತ್ಯವನ್ನು ಹೇಳಲು ಯತ್ನಿಸಿದ್ದೇನೆ. ನನ್ನ ಅಧ್ಯಯನದಲ್ಲಿ ಪ್ರಾಪ್ತವಾಗಿದ್ದನ್ನು ಹೇಳಿ ದ್ದು, ಉಳಿದದ್ದನ್ನು ಓದುಗರಿಗೆ ಬಿಟ್ಟಿದ್ದೇನೆ. ಹಿಂದೂ ಹಾಗೂ ಕ್ರಿಶ್ಚಿಯನ್‌ ಧರ್ಮಗಳು ಮಾರ್ಪಾಡಾಗುತ್ತ ಬಂದಿವೆ. ಆದರೆ, ಇಸ್ಲಾಂ ಧರ್ಮ ಹಾಗೇ ಉಳಿದಿದೆ. ಅದು ಬದಲಾವ ಣೆಗೆ ಒಪ್ಪುವುದಿಲ್ಲ. ಹಿಂದೂ ಧರ್ಮದ ರೀತಿ, ನೀತಿಯನ್ನು ವಿರೋಧಿಸುವ ಚಾರ್ವಾಕರಿ ದ್ದರು. ಅವರಿಗೂ ಮನ್ನಣೆ ನೀಡಲಾಗಿತ್ತು. ಕ್ರಿಶ್ಚಿಯನ್‌ ಧರ್ಮದ ಕೆಲವು ರೀತಿಗಳನ್ನು ವಿರೋಧಿಸಿದವರು ಪ್ರಾಟೆಸ್ಟೆಂಟ್‌ಗಳಾದರು.

ಅವರು ಚರ್ಚ್‌ನ ಪಾದ್ರಿಯ ನಿರಂಕುಶ ಪ್ರಭುತ್ವವನ್ನು ವಿರೋಧಿಸಿದ್ದರು. ಆದರೆ, ಇಸ್ಲಾಂ ಧರ್ಮದಲ್ಲಿ ಧರ್ಮದ ಕುರಿತು ಪ್ರಶ್ನಿಸಲು ಅವಕಾಶವಿಲ್ಲ. ಇಸ್ಲಾಂ ವಿರುದ್ಧ ಬಂದ ಕೃತಿಗಳು ಅತಿ ಕಡಿಮೆ’ ಎಂದರು. ನಮ್ಮ ಹಲವು ಇತಿಹಾಸಕಾರರು ಮೊಘಲರ ದಾಳಿಯನ್ನು, ಮತಾಂತರವನ್ನು ಮರೆಮಾಚಲು ದೊಡ್ಡ ಷಡ್ಯಂತ್ರ ನಡೆಸಿದರು. ಇತಿಹಾಸದ ಕೃತಿಗಳಲ್ಲಿ ಸುಳ್ಳನ್ನು ವೈಭವಿಕರಿಸಿದರು. ಇದನ್ನೇ ಸತ್ಯ ಎಂಬಂತೆ ಬಿಂಬಿಸಿದರು. ಒಂದು ಧರ್ಮ ಗ್ರಂಥವನ್ನು ಓದದೇ ಆ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ ಬಹುತೇಕ ಮಠಾಧೀಶರು ಕುರಾನ್‌ ಗ್ರಂಥವನ್ನೇ ಓದಿಲ್ಲ. ಆದರೂ, ಎಲ್ಲ ಧರ್ಮಗಳ ಉದ್ದೇಶ ಒಂದೇ ಎಂದು ವಾದ ಮಾಡುತ್ತಾರೆ. ದಯಾನಂದ ಸರಸ್ವತಿ ಕುರಾನ್‌ ಓದಿ ಅದನ್ನು ವಿಶ್ಲೇಷಿಸಿದರು.

ಅದರಲ್ಲಿನ ತಪ್ಪುಗಳನ್ನು ಎತ್ತಿ ತೋರಿದ್ದರಿಂದ ಅವರಿಗೆ ವಿಷ ಹಾಕಿ ಕೊಲ್ಲಲಾಯಿತು. ಎಲ್ಲ ಧರ್ಮಗಳ ಉದ್ದೇಶ ಒಂದೇ ಆಗಿರುವುದಿಲ್ಲ. ಎಲ್ಲರನ್ನೂ ಸಲಹುವ, ಎಲ್ಲವನ್ನೂ ಒಪ್ಪಿಕೊಳ್ಳುವ, ಸರ್ವ ಜನರ ಹಿತ ಬಯಸುವ ಧರ್ಮದ ಉದ್ದೇಶ ಹಾಗೂ ಮತಾಂತರವನ್ನು ಪ್ರೇರೇಪಿಸುವ, ತಮ್ಮ ಧರ್ಮದವರಷ್ಟೇ ಬದುಕಬೇಕೆಂದು ಹೇಳುವ ಧರ್ಮದ ಉದ್ದೇಶ ಒಂದೇ ಆಗಿರಲು ಸಾಧ್ಯವಿಲ್ಲ. ಬ್ರಿಟಿಷರು ವ್ಯವಸ್ಥಿತವಾಗಿ ಹಿಂದೂಗಳು ಹಾಗೂ ಮುಸಲ್ಮಾನರನ್ನು ಒಡೆದು ಪಾಕಿಸ್ತಾನ ಪ್ರತ್ಯೇಕ ದೇಶವಾಗುವಂತೆ ಮಾಡಿದರು. ಮುಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಒಡೆದಾಳುವ ತಂತ್ರ ಮುಂದುವರಿಸಿತು ಎಂದರು.

ಕಾದಂಬರಿ ಬರೆದ ಮೇಲೆ ಮರೆತು ಬಿಡುತ್ತೇನೆ!: ಒಂದು ಕಾದಂಬರಿ ಬರೆದ ಮೇಲೆ ಅದನ್ನು ಸಂಪೂರ್ಣವಾಗಿ ಮರೆತು ಬಿಡುತ್ತೇನೆ. “ಆವರಣ’ ಕಾದಂಬರಿ ಬರೆದ ನಂತರ ನಾನು ಮೂರು ಕಾದಂಬರಿ ಬರೆದೆ. 12 ವರ್ಷಗಳ ಹಿಂದೆ ಬರೆದ ಕಾದಂಬರಿ ಬಗ್ಗೆ ಈಗ ಏನೂ ಮಾತನಾಡಲಾಗುವುದಿಲ್ಲ. ಒಬ್ಬ ಸಂಗೀತಗಾರ ಒಂದು ರಾಗವನ್ನು ಪ್ರಸ್ತುತಪಡಿಸುವಾಗ ಅದರಲ್ಲಿ ತಲ್ಲೀನವಾಗುತ್ತಾನೆ. ಅದು ಮುಗಿದು ಮತ್ತೂಂದು ರಾಗವನ್ನು ಹಾಡುವಾಗ ಹಳೇ ರಾಗದ ಗುಂಗಿನಲ್ಲೇ ಇದ್ದರೆ, ಸಮ್ಮಿಳಿತಗೊಂಡರೆ ತಾಳ, ಶ್ರುತಿ ಹೊಂದುವುದಿಲ್ಲ. ರಾಗಕ್ಕೆ ನ್ಯಾಯ ಒದಗಿಸಲೂ ಆಗುವುದಿಲ್ಲ. ಕಾದಂಬರಿಕಾರನ ಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಲ್ಲ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

ನನಗೆ ಹಿತವಚನ ಬರೆಯಲು ಬರಲ್ಲ: ನಾನು ಒಬ್ಬ ಕಾದಂಬರಿಕಾರ. ನಾನು ಬರೆಯುವುದೆಲ್ಲವನ್ನೂ ಕಾದಂಬರಿಯಲ್ಲಿಯೇ ಬರೆಯುತ್ತೇನೆ. ಗಹನ ಅರ್ಥ ಬರುವ ಮಾತನ್ನು ಕಾದಂಬರಿಯಲ್ಲಿ ಮಾತ್ರ ಹೇಳಲು ಸಾಧ್ಯ. ಸೃಜನಶೀಲ ಕಲ್ಪನೆಯಲ್ಲಿ ಪಾತ್ರಗಳು, ಸನ್ನಿವೇಶ ಇದ್ದಾಗ ಮಾತ್ರ ಗಂಭೀರವಾದ ತೂಕದ ಮಾತು ಬರುತ್ತದೆ. ಅಟೋಗ್ರಾಫ್‌ನಲ್ಲಿ ಹಿತವಚನ ಬರೆ ಯುವಂತೆ ಕೇಳಿದರೆ ನನಗೇನೂ ಬರೆಯಲಾಗುವುದಿಲ್ಲ ಎಂದರು.

ರಾಹುಲ್‌ ವಿರೋಧಿಸಲೇಬೇಕು: ಜಮ್ಮು -ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಿದ್ದನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರೋಧ ಮಾಡದಿದ್ದರೆ ತಮ್ಮ ಮುತ್ತಜ್ಜ ಜವಾಹರಲಾಲ್‌ ನೆಹರು ಮಾಡಿದ ಮಹಾಪ್ರಮಾದವನ್ನು ಒಪ್ಪಿಕೊಂ ಡಂತಾಗುತ್ತಿತ್ತು. ಇದೇ ಕಾಂಗ್ರೆಸ್‌ ಸಂಸ್ಕೃತಿ ಎಂದು ಭೈರಪ್ಪ ನುಡಿದರು.

ನಾನು ನನ್ನ ಕೃತಿಯಲ್ಲಿ ಸತ್ಯವನ್ನು ಹೇಳಲು ಯತ್ನಿಸಿದ್ದೇನೆ. ನನ್ನ ಅಧ್ಯಯನದಲ್ಲಿ ಪ್ರಾಪ್ತವಾಗಿದ್ದನ್ನು ಹೇಳಿದ್ದು, ಉಳಿದಿದ್ದನ್ನು ಓದುಗರಿಗೆ ಬಿಟ್ಟಿದ್ದೇನೆ. ಹಿಂದೂ ಹಾಗೂ ಕ್ರಿಶ್ಚಿಯನ್‌ ಧರ್ಮಗಳು ಮಾರ್ಪಾಡಾಗುತ್ತ ಬಂದಿವೆ. ಆದರೆ, ಇಸ್ಲಾಂ ಧರ್ಮ ಹಾಗೇ ಉಳಿದಿದೆ. ಅದು ಬದಲಾವಣೆಗೆ ಒಪ್ಪುವುದಿಲ್ಲ.
-ಎಸ್‌.ಎಲ್‌.ಭೈರಪ್ಪ, ಸಾಹಿತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ