Udayavni Special

ಅರ್ಥ ಅರಿಯದೆ ಅರಚಿದರೇನು ಬಂತು?


Team Udayavani, Jul 8, 2020, 5:04 AM IST

artha-bantu

ಒಬ್ಬ ಸಾಧು ನಿತ್ಯವೂ ಸ್ವಲ್ಪ ಹೊತ್ತು ವನಪ್ರದೇಶದಲ್ಲಿ ಕುಳಿತು ಪಕ್ಷಿಗಳ ಚಿಲಿಪಿಲಿ ನಾದವನ್ನು ಆಲಿಸುತ್ತಲಿದ್ದ. ಒಮ್ಮೆ ಬೇಡನೊಬ್ಬ ಬಲೆ ಹರಡಿ ಹಕ್ಕಿಗಳನ್ನು ಹಿಡಿದೊಯ್ದುದ್ದನ್ನು ನೋಡಿದ. ಆತ ಮರುದಿನವೂ ಬೇಟೆಗೆ ಬರುತ್ತಾನೆ  ಎಂಬುದನ್ನರಿತ ಸಾಧುವು, ಉಳಿದಿರುವ ಹಕ್ಕಿಗಳಿಗಾದರೂ ಅಪಾಯದ ಕುರಿತು ಎಚ್ಚರಿಸೋಣ ಎಂದು ಯೋಚಿಸಿ- “ನಾಳೆಯೂ ಬೇಡ ಬಂದು ಬಲೆ ಹರಡಿ ನಿಮ್ಮನ್ನು ಹಿಡಿಯುತ್ತಾನೆ. ಎಚ್ಚರಿಕೆಯಿಂದಿರಿ’ ಎಂದು ಹಕ್ಕಿಗಳಿಗೆ ಹೇಳಿದ.

ತನ್ನ ಮಾತು ಹಕ್ಕಿಗಳಿಗೆ ಅರ್ಥವಾಗಿದೆ ಎಂದು ಖಚಿತಪಡಿಸಿ  ಕೊಳ್ಳಲು ಅವುಗಳನ್ನು ಕೇಳಿದ- “ನಾನು ಏನು ಹೇಳಿದೆ ಹೇಳಿ?’ ಆಗ ಹಕ್ಕಿಗಳೆಲ್ಲವೂ ಒಕ್ಕೊರಲಿಂದ ನುಡಿದವು- “ಬೇಡ ಬರುತ್ತಾನೆ ಬಲೆ ಹರಡಲು, ಎಚ್ಚರಿಕೆ, ಎಚ್ಚರಿಕೆ…’  ಅದನ್ನು ಕೇಳಿದ ಸಾಧುವು ತೃಪ್ತನಾಗಿ ಹಿಂದಿರುಗಿದ. ಮರುದಿನ ಬೇಡ ಬರುತ್ತಿದ್ದಂತೆಯೇ ಹಕ್ಕಿಗಳು- “ಬೇಡ ಬರುತ್ತಾನೆ ಬಲೆ ಹರಡಲು. ಎಚ್ಚರಿಕೆ, ಎಚ್ಚರಿಕೆ’ ಎಂದು ಕೂಗಿಕೊಂಡವು. ನಿನ್ನೆಯಂತೆಯೇ ಇಂದೂ ಹಕ್ಕಿಗಳು ಸಿಗುತ್ತಾವೆಂಬ ನಿರೀಕ್ಷೆಯಲ್ಲಿದ್ದ ಬೇಡ, ಹಕ್ಕಿಗಳ ಮಾತು ಕೇಳಿ ನಿರಾಶನಾದ.

ಹೇಗೂ ಹಕ್ಕಿಗಳು ಸಿಗುವುದಿಲ್ಲ ಎಂದು ಬಲೆ ಹರಡಿ ಧಾನ್ಯದ ಕಣಗಳನ್ನು ಎರಚಿ, ಅಲ್ಲೇ ವಿಶ್ರಮಿಸಿದ. ಆದರೆ, ನಿದ್ರೆಯಿಂದ ಎಚ್ಚೆತ್ತು ನೋಡಿದವನಿಗೆ ಅಚ್ಚರಿ  ಕಾದಿತ್ತು. ಎಲ್ಲ ಹಕ್ಕಿಗಳೂ ಬಲೆಯ ಮೇಲೆಯೇ ಕುಳಿತು ಕಾಳುಗಳನ್ನು ತಿನ್ನುತ್ತಾ “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತಲಿದ್ದವು! ಬೇಡನು ತಡೆಯಲಾರದ ನಗುವಿನೊಡನೆ ಹಕ್ಕಿಗಳನ್ನು ಹೊತ್ತು ಮನೆಗೆ ತೆರಳಿದ. ಹಕ್ಕಿಗಳು  ಪಾರಾಗಿರುತ್ತವೆಂಬ ನಿಶ್ಚಯ  ದಿಂದ ಬಂದ ಸಾಧುವು ಆ ದೃಶ್ಯವನ್ನು ಕಂಡು ದಂಗಾದ. ಬೇಡನ ಬಲೆಯಲ್ಲಿದ್ದ ಹಕ್ಕಿಗಳು “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತ ಲೇ ಇದ್ದವು. ಮಾತನಾಡಬಲ್ಲ ಹಕ್ಕಿಗಳಿಗೆ ಮಾತನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ  (ಸಂಸ್ಕಾರ)ವಿರಲಿಲ್ಲವಷ್ಟೆ!

ಇದು ಹಿಂದೊಮ್ಮೆ ಎಲ್ಲೋ ಕೇಳಿದ ಕಥೆ  ಯಾದರೂ, ಪ್ರಸ್ತುತ ನಮ್ಮ ಕಥೆಯೂ ಹೌದು. ಜ್ಞಾನಿಗಳು ಹೃದಯ ಗುಹೆಯಲ್ಲಿ ಅನುಭವಿಸಿ ದ ಆತ್ಮದರ್ಶನ, ತತ್ಪರಿಣಾಮ ವಾದ ಪರಮಾ ನಂದವು ಭಾಷಾ  (ಮಂತ್ರ- ಸ್ತೋತ್ರ-  ಸಾಹಿತ್ಯಗಳ) ರೂಪದಲ್ಲಿ ಹೊರ ಹೊಮ್ಮಿವುದುಂಟು. ಶ್ರೀರಂಗ ಮಹಾಗುರುಗಳ ಆಶಯವೆಂದರೆ ಪದಾರ್ಥದ ಅನುಭವದಿಂದ ಪದವೂ, ಭಾವದಿಂದ ಭಾಷೆಯೂ ಹೊರಡುತ್ತ ವೆ. ಕೇಳುವವರಿಗೆ ತಕ್ಕ ಸಂಸ್ಕಾರವಿದ್ದಾಗ ಪದವು- ಪದಾರ್ಥದೆಡೆಗೂ, ಭಾಷೆಯು-  ಭಾವದೆಡೆಗೂ ಒಯ್ಯುತ್ತವೆ.

* ಮೈಥಿಲೀ ರಾಘವನ್‌, ಸಂಸ್ಕೃತ ಚಿಂತಕಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೃಷ್ಣಾ ನದಿಗೆ 1.80 ಲಕ್ಷ ನೀರು; ಲಿಂಗಸೂಗುರಿನ ಶೀಲಹಳ್ಳಿ ಸೇತುವೆ ಮುಳುಗಡೆ

ಕೃಷ್ಣಾ ನದಿಗೆ 1.80 ಲಕ್ಷ ನೀರು; ಲಿಂಗಸೂಗುರಿನ ಶೀಲಹಳ್ಳಿ ಸೇತುವೆ ಮುಳುಗಡೆ

ಸಾಲೂರು ಬೃಹನ್ಮಠ ಉತ್ತರಾಧಿಕಾರಿ ಆಯ್ಕೆಗೆ ಭಕ್ತರ ವಿರೋಧ: ಮಠದ ಮುಂಭಾಗ ಪ್ರತಿಭಟನೆ

ಸಾಲೂರು ಬೃಹನ್ಮಠ ಉತ್ತರಾಧಿಕಾರಿ ಆಯ್ಕೆಗೆ ಭಕ್ತರ ವಿರೋಧ: ಮಠದ ಮುಂಭಾಗ ಪ್ರತಿಭಟನೆ

ಕೋವಿಡ್ 19: ಲಾಕ್ ಡೌನ್ ವೇಳೆ 13 ಪುಸ್ತಕ ಬರೆದ ಮಿಜೋರಾಂ ಗವರ್ನರ್, ಯಾರಿವರು?

ಕೋವಿಡ್ 19: ಲಾಕ್ ಡೌನ್ ವೇಳೆ 13 ಪುಸ್ತಕ ಬರೆದ ಮಿಜೋರಾಂ ಗವರ್ನರ್, ಯಾರಿವರು?

ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಕ್ರಮ: ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಸೂಚನೆ

ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಕ್ರಮ: ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಸೂಚನೆ

waterf-all

ರಾಯಚೂರು: ಮಗನನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಆಗಸ್ಟ್ 10 ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಸುರೇಶ್ ಕುಮಾರ್

ಆಗಸ್ಟ್ 10ರಂದು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಸುರೇಶ್ ಕುಮಾರ್

kerala

ಧಾರಾಕಾರ ಮಳೆ: ಕೇರಳದ ಮುನ್ನಾರ್ ನಲ್ಲಿ ಭೂಕುಸಿತ, 5 ಸಾವು, ಅವಶೇಷಗಳಡಿ 80 ಮಂದಿ ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರಾವಣ ಬಂದರೂ ಸಂಭ್ರಮವಿಲ್ಲ…

ಶ್ರಾವಣ ಬಂದರೂ ಸಂಭ್ರಮವಿಲ್ಲ…

ಸಂಬಳ ಕಡಿಮೆಯಾದರೆ ಸಂತಸವೂ ಕಡಿಮೆ ಆಗಬೇಕೆ?

ಸಂಬಳ ಕಡಿಮೆಯಾದರೆ ಸಂತಸವೂ ಕಡಿಮೆ ಆಗಬೇಕೆ?

ಲಾಕ್‌ಡೌನ್ ಲೋಕ ; ಸ್ವಚ್ಛ ಶೆಲ್ಫ್ ಅಭಿಯಾನ

ಲಾಕ್‌ಡೌನ್ ಲೋಕ ; ಸ್ವಚ್ಛ ಶೆಲ್ಫ್ ಅಭಿಯಾನ

Meditation

ಸ್ಪೀಕಿಂಗ್‌ ಸ್ತ್ರೀ : ಅರ್ಥ, ಕಾಮಗಳು ಧರ್ಮದ ಚೌಕಟ್ಟು ಮೀರದಿರಲಿ…

ವರಮಹಾಲಕ್ಷ್ಮಿಯ ಸ್ಮರಿಸಿ…

ವರಮಹಾಲಕ್ಷ್ಮಿಯ ಸ್ಮರಿಸಿ…

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

ಕುತೂಹಲ ಕೆರಳಿಸಿರುವ ತ್ರಿಕೋನ

ಕುತೂಹಲ ಕೆರಳಿಸಿರುವ ತ್ರಿಕೋನ

ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ

ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ

ಕೃಷಿ ಇಲಾಖೆ ಜಾರಿದಳ ಅಧಿಕಾರಿಗಳ ಭೇಟಿ

ಕೃಷಿ ಇಲಾಖೆ ಜಾರಿದಳ ಅಧಿಕಾರಿಗಳ ಭೇಟಿ

ಒಂದೇ ಒಂದು ಕಂತಿನ ಆಜೀವ ವಿಮೆ

ಒಂದೇ ಒಂದು ಕಂತಿನ ಆಜೀವ ವಿಮೆ

bg-tdy-2

ಪ್ರವಾಹ ನಿಯಂತ್ರಿಸಲು ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.