ಮೂವರು ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಕೋವಿಡ್
Team Udayavani, Dec 12, 2021, 10:48 PM IST
ಕರಾಚಿ: ಪಾಕಿಸ್ಥಾನಕ್ಕೆ ಆಗಮಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮೂವರು ಆಟಗಾರರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ರವಿವಾರ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಸಿಇಒ ಜಾನಿ ಗ್ರೇವ್ ಇದನ್ನು ಸ್ಪಷ್ಟಪಡಿಸಿದ್ದಾರೆ.
ವೇಗಿ ಶೆಲ್ಡನ್ ಕಾಟ್ರೆಲ್, ಆಲ್‌ರೌಂಡರ್ ರೋಸ್ಟನ್ ಚೇಸ್ ಹಾಗೂ ಬ್ಯಾಟ್ಸ್‌ಮನ್ ಕೈಲ್ ಮೇಯರ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಜತೆಗೆ ತಂಡದ ಓರ್ವ ಸಿಬಂದಿಗೂ ಸೋಂಕು ಇರುವುದು ದೃಢಪಟ್ಟಿದೆ.
ಇವರೆಲ್ಲರನ್ನೂ ಹತ್ತು ದಿನಗಳ ಕಾಲ ಐಸೊಲೇಶನ್‌ಗೆ ಒಳಪಡಿಸಲಾಗಿದ್ದು, ಹೊಟೇಲ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಪರಿಷತ್ ಪ್ರತಿಪಕ್ಷ ಸ್ಥಾನದ ಮೇಲೆ ಸಿಎಂ ಇಬ್ರಾಹಿಂ ಕಣ್ಣು
ವೆಸ್ಟ್ ಇಂಡೀಸ್ ತಂಡದಲ್ಲಿ ಹೆಚ್ಚುವರಿ ಆಟಗಾರರಿರುವ ಕಾರಣ ಸರಣಿಗೆ ಆತಂಕ ಎದುರಾಗುವ ಸಾಧ್ಯತೆ ಕಡಿಮೆ. ಮೊದಲ ಟಿ20 ಪಂದ್ಯ ಸೋಮವಾರ ಸಂಜೆ ನಡೆಯಲಿದೆ.