ಟಿಪ್ಪು ಜಯಂತಿ ಸಂದರ್ಭ ಟಿಪ್ಪು ವಿವಾದ ರಾಜಕೀಯ ಸ್ವರೂಪ ಪಡೆದುಕೊಳ್ಳುವುದೇಕೆ ?

Team Udayavani, Oct 31, 2019, 5:05 PM IST

ಮಣಿಪಾಲ : ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ನಿಲುವನ್ನು ತೋರಿಸುತ್ತಿದ್ದು ಪ್ರತೀ ವರ್ಷ ಟಿಪ್ಪು ಜಯಂತಿ ವಿಚಾರವಾಗಿ ವಿವಾದ ರಾಜಕೀಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಈ ಹಿನ್ನಲೆಯಲ್ಲಿ “ಪ್ರತೀ ವರ್ಷ ಟಿಪ್ಪು ಜಯಂತಿ ಸಂದರ್ಭದಲ್ಲೇ ಟಿಪ್ಪು ವಿವಾದ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವ ಕುರಿತಾಗಿ ನಿಮ್ಮ ಅಭಿಪ್ರಾಯ ?” ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿತ್ತು. ಇದರಲ್ಲಿ ಆಯ್ದ ಅಭಿಪ್ರಾಯಗಳು ಇಂತಿವೆ.

ಅನ್ನಪೂರ್ಣ ವೆಂಕಟ್ : ಇತಿಹಾಸ ಎಂದರೆ ಗತಿಸಿ ಹೋದ ವಿಷಯಗಳು. ರಾಜನ ಅಳ್ವಿಕೆ ರಾಜನ ಯುದ್ಧದ ಸೋಲು ಗೆಲುವು. ಇತಿಹಾಸದ ವಿದ್ಯಾರ್ಥಿಗಳು ಇತಿಹಾಸವನ್ನು ಇದ್ದ ಹಾಗೆ ಓದಲಿ.

ಶೇಖರ್ ನಾಯ್ಕ್ : ಟಿಪ್ಪು ದೇಶಭಕ್ತ, ಆ ಕಾಲದ ಸಮಯ ಸನ್ನಿವೇಶ ಹೀಗೆ ಮಾಡಿದ್ದವು, ಆತನ ಹೆಸರು ಇಡೀ ವಿಶ್ವದಾದ್ಯಂತ ಅಜರಾಮರ, ಆತನ ಯುದ್ಧಗಳು ಬ್ರಿಟಿಷರ ವಿರುದ್ಧವೇ ಹೊರತು ಇನ್ಯಾರ ವಿರುದ್ದವೂ ಅಲ್ಲ, ನಾವೆಲ್ಲ ಆತನನ್ನು ವೀರ ಶೂರ ಪರಾಕ್ರಮಿ ಎಂದು ಓದಿದ್ದೇವೆ, ಹಾಗೆಯೇ ಯಾರೆಲ್ಲಾ ಟಿಪ್ಪುವಿನ ವಿರೋಧಿಗಳಿದ್ದಿರಾ ಅವರೆಲ್ಲಾ ಓದಿರುವವರೇ, ಆದರೂ ಟಿಪ್ಪು ಬೇಡ ಅನ್ನೋರು ಇತಿಹಾಸವೇ ಬೇಡ ಎನ್ನುವಿರಾ, ಇತಿಹಾಸವನ್ನು ಯಾರಿಂದ ಓದಲು ಸಾಧ್ಯವಿಲ್ಲವೋ ಅವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ, ಮುಂದೊಂದು ದಿನ ನಮ್ ದೇಶದ ಅಖಂಡ ಸಂವಿಧಾನ ಬೇಡ ಎಂದರೆ ಆಗೇನು ಮಾಡೋದು, ದೇಶದ ಪ್ರತಿಯೊಬ್ಬ ಪ್ರಜೆಗಳ ಸಲಹೆ ಪಡೆದು ತೀರ್ಮಾನಿಸಲಿ, ಅದನ್ನು ಬಿಟ್ಟು ತಾವು ಹೇಳಿದ್ದೆ ಕಾನೂನು ತಾವು ಮಾಡಿದ್ದೆ ಕಾನೂನು ಎಂದರೆ ಇದು ಕೋಮುವಾದಕ್ಕೆ ಎಡೆಮಾಡಿದಂತಾಗುತ್ತದೆ

ವಿನೋದ್ ಕುಮಾರ್ ಸಿ ಎಂ : ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಟಿಪ್ಪುವನ್ನು ಮಧ್ಯೆ ಎಳೆದು ತರುತ್ತಿದ್ದಾರೆ ಅಷ್ಟೆ.ಜನರ ಸಮಸ್ಯೆಗಳ ಬಗ್ಗೆ ಗಮನಕೊಡುವುದನ್ನು ಬಿಟ್ಟು ನಮ್ಮ ಜನಪ್ರತಿನಿದಿಗಳು ಬೇಡದೆ ಇರುವ ವಿಷಯಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ.

ಸತೀಶ್ ಕುಮಾರ್ : ಯಡಿಯೂರಪ್ಪ ಟಿಪ್ಪುವಿನ ಇತಿಹಾಸವನ್ನು ಎಲ್ಲೆಲ್ಲಿಂದ ತೆಗೆದು ಹಾಕುತ್ತೀರಿ? ಕರ್ನಾಟಕದ ಪಠ್ಯದಿಂದಲೇ? ತೆಗೆದುಹಾಕಿ. ಅದರಿಂದ ದೊಡ್ದ ವ್ಯತ್ಯಾಸ ಯಾರಿಗೂ ಆಗೋಲ್ಲ. ಟಿಪ್ಪು ಕಟ್ಟಿದ, ಜೀರ್ಣೋದ್ಧಾರ ಮಾಡಿದ ದೇವಸ್ಥಾನಗಳನ್ನೂ ಕೆಡವಿ ಹಾಕುವಿರಾ? ಟಿಪ್ಪು ಕಟ್ಟಿದ ಅರಮನೆಗಳನ್ನೂ ನೆಲಸಮ ಮಾಡುವಿರಾ? ನಾಸಾದಲ್ಲಿರುವ ಟಿಪ್ಪುವಿನ ಚಿತ್ರವನ್ನು ತೆಗೆಯುವಿರಾ? ದೆಹಲಿ ವಿಧಾನಸಭೆಯಿಂದಲೂ ಟಿಪ್ಪುವಿನ ಚಿತ್ರವನ್ನು ತೆಗೆಯುವಿರಾ? ಟಿಪ್ಪುವಿನ ಕಟ್ಟರ್ ವಿರೋಧಿಗಳಾಗಿದ್ದ ಬ್ರಿಟೀಷರ ನಾಡಿನಲ್ಲೇ ಇರುವ ಬ್ರಿಟೀಷ್ ಮ್ಯೂಸಿಯಂನಿಂದ ಟಿಪ್ಪುವಿನ ದಾಖಲೆಗಳನ್ನೂ ಅಳಸಿ ಹಾಕುವಿರಾ? ಸ್ಕಾಟ್ಲೆಂಡಿನ ಮ್ಯೂಸಿಯಂನಲ್ಲಿರುವ ಟಿಪ್ಪುವಿನ ಚಿತ್ರವನ್ನು ತೆಗೆಯುವಿರಾ? ಟಿಪ್ಪು ಅಭಿವೃದ್ಧಿಪಡಿಸಿ ವಿಶ್ವದಲಿಲ್ ಪ್ರಪ್ರಥಮ ಬಾರಿ ಉಪಯೋಗಿಸಿದ ಪ್ರಪಂಚದ ಮೊಟ್ಟಮೊದಲ ಯುದ್ದ ರಾಕೆಟ್‍ಗಳನ್ನು ಲಂಡನಿನ Royal Artillery Museumನಿಂದ ತೆಗೆದು ಹಾಕುವಿರಾ? ಟಿಪ್ಪುವಿಗಾಗಿ ಫ್ರೆಂಚ್ ಇಂಜಿನಿಯರ್’ಗಳು ಅಭಿವೃದ್ಧಿಪಡಿಸಿ, ಸದ್ಯಕ್ಕೆ ಲಂಡನ್ನಿನ Victoria and Albert ಮ್ಯೂಸಿಯಂನಲ್ಲಿರುವ ಟಿಪ್ಪು ಹುಲಿಯನ್ನೂ ತೆಗೆದು ಹಾಕುವಿರಾ? ಬ್ರಿಟೀಷರೊಡನೆ ಟಿಪ್ಪು ಹಾಗೂ ಆತನ ತಂದೆ ಹೈದರಾಲಿ ಮಾಡಿದ ನಾಲ್ಕು ಆಂಗ್ಲೋ-ಇಂಡಿಯನ್ ಯುದ್ದಗಳನ್ನು ಸಾವರ್ಕರ್ ಹಾಗೂ ಬ್ರಿಟೀಷರು ಮಾಡಿದ್ದರೆಂದು ಸೇರಿಸುವಿರಾ?
ಇನ್ನು ಪ್ರತೀದಿನಾ ಸಂಜೆ 8.00 — 8.15ರ ನಡುವೆ ಕೊಲ್ಲೂರಿನ ಶ್ರೀಮೂಕಾಂಬಿಕ ದೇವಸ್ಥಾನದಲ್ಲಿ ಟಿಪ್ಪುವಿನ ಹೆಸರಿನಲ್ಲಿ ಕಳೆದ ಇನ್ನೂರೈವತ್ತು ವರುಷಗಳಿಂದ ನಡೆಯುತ್ತಿರುವ ಸಲಾಮ್ ಆರತಿಯನ್ನೂ ನಿಲ್ಲಿಸುವಿರಾ? ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಸಂವಿಧಾನದ ಮೂಲ ಪ್ರತಿಯ ಪುಟ ಸಂಖ್ಯೆ 144, ಅಧ್ಯಾಯ 16ರಲ್ಲಿ ಝಾನ್ಸೀ ರಾಣಿ ಲಕ್ಷ್ಮೀಬಾಯಿ ಜೊತೆ ಚಿತ್ರದ ಬಲಬದಿಯಲ್ಲಿರುವ ಟಿಪ್ಪುವಿನ ಚಿತ್ರವನ್ನು ಅಳಿಸಿ ಹಾಕುವಿರಾ ಇಲ್ಲಾ ಸಂವಿಧಾನದ ಪುಟ ಸಂಖ್ಯೆ 144ಯನ್ನೇ ಹರಿದು ಹಾಕುವಿರಾ?

ರಾಜೇಶ್ ಅಂಚನ್ ಎಂ ಬಿ : ಖಂಡಿತಾ ಇದನ್ನು ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಸೃಷ್ಟಿ ಮಾಡಿದ್ದು. ಹಿಂದೆ ಯಾವತ್ತು ಟಿಪ್ಪು ಜಯಂತಿ ಆಚರಿಸಿಲ್ಲ.ಅಲ್ಪಸಂಖ್ಯಾತರ ವಿಪರೀತ ಓಲೈಕೆಗಾಗಿ ಕಾಂಗ್ರೆಸ್ ನೈಜ ಇತಿಹಾಸವನ್ನೇ ತಿರುಚಿದೆ..ಟಿಪ್ಪು ಯಾವ ಕೋನದಲ್ಲೂ ಸ್ವಾತಂತ್ರ್ಯ ಹೋರಾಟಗಾರರಲ್ಲ…ತನ್ನ ಸಂಸ್ಥಾನ ಉಳಿಸಿಕೊಳ್ಳಲು ಹೋರಾಡಿದ ಒಬ್ಬ ರಾಜ.ಇವತ್ತು ಭಾರತದ ನೈಜ ಇತಿಹಾಸವೇ ಇವತ್ತು ಮರೆಯಾಗಿದೆ… ಯಾರದೋ ಓಲೈಕೆಗಾಗಿ ಯಾರ್ಯಾರನ್ನೋ ವಿಜೃಂಭಿಸಲಾಗಿದೆ…ಈ ನಿಟ್ಟಿನಲ್ಲಿ ಪ್ರಸ್ತುತ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ…

ದಯಾನಂದ ಕೊಯಿಲಾ : ಟಿಪ್ಪು.. ಬ್ರಿಟಿಷ್ ರ ವಿರುದ್ಧ ಯಾಕೆ ಹೋರಾಡಿದ…?ತನ್ನ ಅಸ್ತಿತ್ವ ದ ಉಳಿವಿಗಾಗಿ ತನ್ನ ಸಾಮ್ರಾಜ್ಯ ದ ಉಳಿವಿಗಾಗಿ ರಾಜಾಡಳಿತದಲ್ಲಿ ಇದು ಸಾಮಾನ್ಯ ಹೋರಾಡುವುದು ಸಾಯುವುದು…ಅತನ..ಸಾಮ್ರಾಜ್ಯ.. ಉಳಿಯುತ್ತಿದ್ದರೆ…ಮುಂದೆ..ಭಾರತ ಗಣರಾಜ್ಯದ ಪರಿಕ್ರಮ ದಲ್ಲಿ ನೆಹರೂ ಗೆ ಮತ್ತೊಂದು ಸವಾಲಾಗುತ್ತಿತ್ತು ಅದು ಇಂದಿನ ಪೆದ್ದು ಕಾಂಗ್ರೆಸ್ ಗರು ಆಲೋಚಿಸುತ್ತಿಲ್ಲ….ಅವನನ್ನು ಸ್ವಾತಂತ್ರ್ಯ ಹೋರಾಟಗಾರ ಅಂತಾರೆ……..

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ