ಹುಟ್ಟು ಸಾಯುವುದಕ್ಕಲ್ಲ , ಸಾಧಿಸುವುದಕ್ಕೆ


Team Udayavani, Mar 25, 2021, 6:10 AM IST

ಹುಟ್ಟು ಸಾಯುವುದಕ್ಕಲ್ಲ , ಸಾಧಿಸುವುದಕ್ಕೆ

ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟುತ್ತಲೇ ಮಾನವ ಜೀವಿ ಜಗತ್ತಿನ ಎಲ್ಲ ಕಷ್ಟ-ನಷ್ಟ ಗಳಿಗೆ ಸ್ಪಂದಿಸ‌ಬೇಕಾದ ಅನಿವಾರ್ಯತೆ. ಯಾರೂ ಹುಟ್ಟುವಾಗ ಯಾರನ್ನೂ ಕೇಳಿ ಹುಟ್ಟಿರುವುದಿಲ್ಲ. ಹುಟ್ಟಿದ ಮಗುವಿಗೆ ಜಗತ್ತಿನ ನೋವು-ನಲಿವುಗಳು ಏನೆಂದು ತಿಳಿದಿರುವುದಿಲ್ಲ. ಹುಟ್ಟಿದ ತಪ್ಪಿಗೆ ಬದುಕಲೇ ಬೇಕು ತಾನೇ?

ವ್ಯಕಿಯೊಬ್ಬ ಹುಟ್ಟಲು ಇರುವ ಅವಕಾಶಗಳೆಷ್ಟು? ಎನ್ನುವ ಪ್ರಶ್ನೆಗೆ ಇರುವ ಉತ್ತರ ಒಂದೇ ಒಂದು ತಾನೇ? ಹಾಗಾಗಿ ನಮಗೆ ಆ ಭಗವಂತ ಕಲ್ಪಿಸಿದ ಒಂದು ಸುಂದರ ಅವಕಾಶವನ್ನು ಸಸೂತ್ರವಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

“ಜೀನಾ ಹೈ ತೋ ಖುಷೀ ಸೆ ಜೀನಾ ಹೈ’ ಎನ್ನುವ ಹಿಂದಿ ಕವಿಯೊಬ್ಬರ ಮಾತಿನಂತೆ ಬದುಕೆಂಬ ಬಾನಿನಲ್ಲಿ ಬೆಳಗುತ್ತಿರುವ ನಕ್ಷತ್ರದಂತೆ ಸುಂದರ‌ ಬಾಳುವೆ ನಮ್ಮ ದಾಗಬೇಕು. ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಬದಲಾವಣೆ ಅನಿವಾರ್ಯ. ಆದರೆ ಬದುಕನ್ನೇ ಬದಲಾಯಿಸಲು ಹೊರಟಿರುವ ಈಗಿನ ಯುವಜನಾಂಗಕ್ಕೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ.

ಇವರಿಗೆಲ್ಲ ಬದುಕು ಬರಡಾಗಿ ಪರಿಣಮಿಸಿದ್ದಾದರೂ ಹೇಗೆ? ಅವ ರನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು? ಎನ್ನುವ ಕುರಿತು ಸ್ಪಷ್ಟ ಉತ್ತರ ಕೊಡುವುದು ಕಷ್ಟವಾದರೂ ಮೇಲ್ನೋಟಕ್ಕೆ ಹೇಳುವುದಾದರೆ ಇವರೆಲ್ಲ ಬದುಕನ್ನು ಸವಾಲಾಗಿ ಸ್ವೀಕರಿಸದೇ ಸಮಸ್ಯೆಯಾಗಿ ಸ್ವೀಕರಿಸಿದ್ದು.

ಅರಳುವ ಹೂವುಗಳೇ ಇತ್ತಕಡೆ ಗಮನ ಕೊಡಿ -ಸಮಸ್ಯೆಗಳು ಎದು ರಾದಾಗ ಕೂಡಲೇ ಪರ್ವತವೇ ತಲೆಗೆರಗಿದಂತೆ ಅಳುತ್ತಾ ಕೂರದೇ, ಸಮಸ್ಯೆಯ ಮೂಲ ಮತ್ತು ಅದಕ್ಕಿರುವ ಪರಿಹಾರದ ಕುರಿತು ಯೋಚಿಸಬೇಕು. ಅದಕ್ಕೆ ಹೇಳುವುದು “ಅಳು ಸಮಸ್ಯೆಗೆ ಪರಿಹಾರ ಅಲ್ಲ’ ಎಂದು. ನಮಗೆ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿದರೆ ಪರಿಹಾರ ನೀಡಬಲ್ಲ ಅಥವಾ ತಾತ್ಕಾಲಿಕ ಸಮಾಧಾನವ‌ನ್ನಾದರೂ ಹೇಳುವ ನಮ್ಮ ಹತ್ತಿರದವರು ಎನ್ನಿಸುವವರಲ್ಲಿ, ಹೇಳಿ ಕೊಳ್ಳುವ ಕೆಲಸವಾದರೂ ಆಗಬೇಕು.

ಒಳ್ಳೆಯದು ಮತ್ತು ಕೆಟ್ಟದನ್ನು ಸಮಾನವಾಗಿ ಸ್ವೀಕರಿಸಲು ಕಷ್ಟವಾದರೂ ಎರಡನ್ನೂ ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗಬೇಕು. ಆತ್ಮವಿಶ್ವಾಸ ಬೇಕು ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಈ ಕೆಲಸವನ್ನು ನಾನು ಹೀಗೆ ಮಾಡಬಲ್ಲೆ ಎನ್ನುವ ಛಲವಿರಲಿ. ಆದರೆ ಇದು ಹೀಗೆಯೇ ಆಗಬೇಕು ಎನ್ನುವ ಹಠಮಾರಿತನ ಸಲ್ಲದು. ಏಕೆಂದರೆ ನಾವೆಣಿಸಿದಂತೆ ಎಲ್ಲವೂ ಆಗುವುದಿಲ್ಲ ತಾನೇ? ಜೀವನವೆಂಬ ತಿರುಗು ಚಕ್ರದಲ್ಲಿ ಒಮ್ಮೆ ಮೇಲ್ಭಾಗದಲ್ಲಿರುವ ಭಾಗ, ಮತ್ತೂಮ್ಮೆ ಕೆಳಗೆ ಇಳಿಯಲೇ ಬೇಕು. ಇದು ಪ್ರಕೃತಿ ಸಹಜ ಎನ್ನುವುದನ್ನು ತಿಳಿದರೆ ಬದುಕು ಬರಡಾಗಲು ಖಂಡಿತಾ ಸಾಧ್ಯವಿಲ್ಲ. “ಆಗುವುದು ಎಲ್ಲ ಒಳ್ಳೆಯದಕ್ಕೆ’ ಎಂದು ಭಾವಿಸಿ ಮುನ್ನಡೆಯಬೇಕು.

ತನ್ನನ್ನು ತಾನು ಅತಿಯಾಗಿ ಪ್ರೀತಿಸುವವನಿಗೆ ಪ್ರೇಮಪತ್ರ ಬರೆಯುವ ಪ್ರಮೇಯವೇ ಬರುವುದಿಲ್ಲವಂತೆ. ಮೊದಲಿಗೆ ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿತರೆ ಬದುಕನ್ನು ಪ್ರೀತಿಸುವುದು ತನ್ನಿಂದ ತಾನೇ ಬರುತ್ತದೆ ಎನ್ನುವುದರಲ್ಲಿ ಸಂಶಯ ವಿಲ್ಲ. ಆದುದರಿಂದ ನಾವು ಬದು ಕಿಯೂ ಸತ್ತಂತೆ ಇರುವುದಕ್ಕಿಂತ ಜೀವನದ ಅಲ್ಪಾವಧಿಯಲ್ಲಿ ಸಾಧನೆಯತ್ತ ಮುನ್ನಡೆದು ಬದುಕುವಂಥವರಾಗಬೇಕು. “ಹುಟ್ಟು ಕೇವಲ ಸಾಯುವುದಕ್ಕಲ್ಲ , ಸಾಧಿಸುವುದಕ್ಕೆ’ ಎನ್ನುವುದನ್ನು ತಿಳಿದು ಉನ್ನತವಾದ ಚಿಂತನೆಗಳೊಂದಿಗೆ ಉತ್ತಮವಾದ ಗುರಿ ಹೊಂದಿ ಉತ್ತರೋತ್ತರ ಶ್ರೇಯಸ್ಸಿಗೆ ಇಂದೇ ಅಡಿ ಇಡೋಣ.

- ವಾಣಿಶ್ರೀ ಅಮ್ಮುಂಜೆ, ಉಡುಪಿ

ಟಾಪ್ ನ್ಯೂಸ್

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.