ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸುಗಮ ಆಡಳಿತಕ್ಕೆ ಪೂರಕವೇ ?

Team Udayavani, Sep 26, 2019, 4:20 PM IST

ಮಣಿಪಾಲ: ಸರಕಾರಗಳು ಬದಲಾದಂತೆ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸುಗಮ ಆಡಳಿತಕ್ಕೆ ಪೂರಕವೇ ? ಎಂಬ ಪ್ರಶ್ನೆಯನ್ನು ‘ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಇಲ್ಲಿವೆ.

ಎ ಆರ್ ಶಿವು ಶಿವು: ಜನಪರ ಮತ್ತು ದಕ್ಷ ಅಧಿಕಾರಿಗಳನ್ನು ಕೆಲಸವಿಲ್ಲದೇ ಕೂರಿಸುವುದು ಮತ್ತು ಅಂತಹ ಜಾಗಕ್ಕೆ ವರ್ಗಾಯಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ.

ರಮೇಶ್ ಬಿ ವಿ: ಆ ದಕ್ಷ ಅಧಿಕಾರಿಗಳು ಪಕ್ಷಾತೀತವಾಗಿ ಕೆಲಸ ಮಾಡಿದರೆ ಈ ವರ್ಗಾವಣೆ ಪರಿಸ್ಥಿತಿ ಬರೋದೇ ಇಲ್ಲ. ಆದರೆ ದುರದೃಷ್ಟವಶಾತ್ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳು ಯಾವುದಾದರೂ ಒಂದು ಪಕ್ಷಕ್ಕೆ ವಿಧೇಯರಾಗಿರುತ್ತಾರೆ. ಹಾಗಾಗಿ ಆಡಳಿತದಲ್ಲಿರುವ ಪಕ್ಷದವರು ತಮಗೆ ವಿಧೇಯರಾಗಿರುವವರನ್ನೇ ಮುಖ್ಯ ಸ್ಥಾನಗಳಲ್ಲಿ ಇರಿಸುತ್ತಾರೆ.

ಸೈಮನ್ ಫೆರ್ನಾಂಡಿಸ್ ; ಯಾರಿಗೆ ಸುಗಮ. ಪ್ರಜೆಗಳಿಗೋ.. ಪ್ರಭುಗಳಿಗೋ ? ತಿಳಿಯದು

ಗಂಗಾಧರ್ ಉಡುಪ ; ದಕ್ಷ ಅಧಿಕಾರಿಗಳನ್ನು ಈ ರಾಜಕಾರಣಿಗಳು ಬಿಡಬೇಕಲ್ಲ, ಕೆಲಸ ಒಳ್ಳೇದು ಮಾಡಿದ್ತೆ, ವಿರೋಧ ಪಕ್ಷದವರು ಬಿಡಲ್ಲ, ಅವರು ಆಡಳಿತ ಪಕ್ಷದವರ ಪರ ಇದ್ದಾರೆ ಅಂತಾರೆ, ಇಲ್ಲಾಂದ್ರೆ ಅವರು ನಾವು ಹೇಳುವ ಹಾಗೆ ಕೇಳಲಿಲ್ಲ ಅಂತ ವಿರೋಧ ಮಾಡುತ್ತಾರೆ

ಪೂರ್ಣಪ್ರಜ್ಞ ಪಿ ಎಸ್ ; ಇದು ನಿಜಕ್ಕೂ ಖೇದಕರ ಸಂಗತಿ, ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಮತ್ತು ಅವರ ವರ್ಗಾವಣೆ ಮೇಲಿನ ಹಿಡಿತ ಯಾವುದೇ ಶಾಸಕ ಅಥವ ಯಾವುದೇ ಪಕ್ಷಕ್ಕೆ ನೀಡಬಾರದು, ಸರ್ವಪಕ್ಷ ದ ಸದಸ್ಯರನ್ನು ಒಳಗೊಂಡ ಒಂದು ವಿಭಾಗದಿಂದ ಈ ಕಾರ್ಯ ನಿರ್ವಹಿಸುವ ಹೊಣೆ ಇರಬೇಕು. ಪಕ್ಷಗಳು ಅಧಿಕಾರದ ಲಾಲಸೆಗಾಗಿ ಇಂತಹ ಪದೇಪದೇ ವರ್ಗಾವಣೆ ಮಾಡಿದರೆ, ಆಡಳಿತಾತ್ಮಕ ವಿಷಯಕ್ಕೂ ಹಾಗೂ ವರ್ಗಾವಣೆಗೆ ಒಳಪಡುವ ದಕ್ಷ ಅಧಿಕಾರಿಗಳ ಮಾನಸಿಕ, ಕೌಟುಂಬಿಕ, ಮುಖ್ಯವಾಗಿ ನೌಕರರ ಮಕ್ಕಳ ಶಿಕ್ಷಣಕ್ಕೆ ಪದೇ- ಪದೇ ಶಾಲೆ ಬದಲಾವಣೆ ಯಂತಹ ತೊಂದರೆ ಉಂಟಾಗುತ್ತದೆ.

ಗಂಗಾಧರ್ ಎಂ ಎಸ್ ಕೆ: ಯಾವ ಅಧಿಕಾರಿಗಳು ಪ್ರಾಮಾಣಿಕರು? ಪ್ರಾಮಾಣಿಕರು ಒಂದೋ ಕೊಲೆಯಾದರು ಇಲ್ಲಾಂದ್ರೆ ಸ್ವಯಂ ನಿವೃತ್ತಿ ಪಡೆದರು. ಇಲ್ಲದಿದ್ರೆ ಕೆಲಸವಿಲ್ಲದೇ ಡಿಪಾರ್ಟ್ಮೆಂಟ್ ಗೆ ವರ್ಗಾವಣೆ ಆಗುತ್ತಾರೆ. ಲೆಕ್ಕದ ಕೆಲವರು ಇದ್ದಾರೆ. ಉಳಿದವರು ಮತ್ತೊಬ್ಬರಿಗೆ ಬಕೆಟ್ ಹಿಡಿಯುವವವರೇ

ವಿನಯ್ ಸಿ ಜಿ: ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರೋದು ಭ್ರಷ್ಟ ಅಧಿಕಾರಿಗಳನ್ನು ರಾಜಕಾರಿಣಿಗಳ ಅವಶ್ಯಕತೆಗೆ ಅನುಸಾರ ಕೆಲಸ ಮಾಡುವವರನ್ನು ರಾಜಕಾರಿಣಿಗಳಿಗೆ ಬೇಕಾದ ಹಾಗೆ ಉಪಯೋಗಿಸೋದಿಕ್ಕೆ ಬ್ರಷ್ಟರನ್ನ ಆ ಜಾಗಕ್ಕೆ ಕೂರಿಸೋದಿಕ್ಕೆ, ಪ್ರಾಮಾಣಿಕ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟೇ ಇದ್ದಾರೆ ಹೊರತು ಎಲ್ಲರೂ ಪ್ರಾಮಾಣಿಕರಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ