
ಉಡುಪಿ ಜಿಲ್ಲೆ: ಹಿಜಾಬ್‌ಗಾಗಿ ಪರೀಕ್ಷೆ ತೊರೆದ 40 ವಿದ್ಯಾರ್ಥಿನಿಯರು!
Team Udayavani, Mar 30, 2022, 7:23 AM IST

ಸಾಂದರ್ಭಿಕ ಚಿತ್ರ.
ಕುಂದಾಪುರ/ಉಡುಪಿ: ಪ್ರಥಮ ಪಿಯುಸಿ ಪರೀಕ್ಷೆ ಮಂಗಳವಾರ ಆರಂಭಗೊಂಡಿದ್ದು, ಉಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಹಿಜಾಬ್ ಧರಿಸದೇ ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟುಹಿಡಿದಿರುವ ಉಡುಪಿ ಜಿಲ್ಲೆಯ 40 ವಿದ್ಯಾರ್ಥಿನಿಯರು ಗೈರುಹಾಜರಾಗಿದ್ದಾರೆ.
ಕುಂದಾಪುರದಲ್ಲಿ 24, ಬೈಂದೂರಿನಲ್ಲಿ 14 ಮತ್ತು ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿಲ್ಲ.
ಉಡುಪಿಯ ವಿದ್ಯಾರ್ಥಿನಿ ಯರು ಈ ಹಿಂದೆ ನಡೆದ ಪ್ರಾಯೋಗಿಕ ಪರೀಕ್ಷೆಗೂ ಹಾಜರಾಗಿರಲಿಲ್ಲ.
ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಒಟ್ಟು 14 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 6 ಮಂದಿ ಹಾಜರಾಗಿ, 8 ಮಂದಿ ಗೈರಾಗಿದ್ದಾರೆ. ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರಲ್ಲಿ 13 ಮಂದಿ ಹಾಜರಾಗಿದ್ದಾರೆ.
ಗೈರಾಗಿರುವ 15 ಮಂದಿಯಲ್ಲಿ 9 ವಿದ್ಯಾರ್ಥಿನಿ ಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು, ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿದರು. ನಿರಾಕರಿಸಿದ ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದ ಕೆಲವರು “ಪ್ರವೇಶಾವ ಕಾಶ ನೀಡಿ, ಇಲ್ಲವೇ ಶಾಲಾ ಶುಲ್ಕ ವಾಪಸು ನೀಡಿ’ ಎಂದು ಆಗ್ರಹಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಐವರಲ್ಲಿ ನಾಲ್ವರು ಹಾಜರಾಗಿ ಓರ್ವ ವಿದ್ಯಾರ್ಥಿನಿಗೈರಾಗಿದ್ದಾರೆ. ಬಸ್ರೂರು ಶಾರದಾ ಕಾಲೇಜು ಹಾಗೂ ಗಂಗೊಳ್ಳಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿನಿಯರಲ್ಲಿ ಇಬ್ಬರು ಹಾಜರಾಗಿ 6 ಮಂದಿ ಗೈರಾಗಿ ದ್ದಾರೆ. ಬೈಂದೂರು ಸರಕಾರಿ ಪ.ಪೂ. ಕಾಲೇಜಿನ 10 ವಿದ್ಯಾರ್ಥಿನಿಯರಲ್ಲಿ ಇಬ್ಬರು ಹಾಜರಾಗಿ 8 ಮಂದಿ ಗೈರಾಗಿದ್ದಾರೆ. ಸಮವಸ್ತ್ರದೊಂದಿಗೆ ಹಿಜಾಬ್‌ಗ ಅವಕಾಶ ಇರುವ ಕೆಲವು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಹಾಜರಾಗಿದ್ದಾರೆ.
ಪ್ರಥಮ ಪಿಯುಸಿ ಪರೀಕ್ಷೆ: 700 ವಿದ್ಯಾರ್ಥಿಗಳು ಗೈರು
ಉಡುಪಿ: ಜಿಲ್ಲೆಯಲ್ಲಿ ಮಂಗಳ ವಾರ ನಡೆದ ಪ್ರಥಮ ಪಿಯುಸಿ ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದ 14,943 ವಿದ್ಯಾರ್ಥಿ ಗಳಲ್ಲಿ 14,243 ಮಂದಿ ಹಾಜರಾಗಿದ್ದಾರೆ. 700 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಅನುದಾನಿತ ಕಾಲೇಜುಗಳಿಂದ 3,716 ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿದ್ದು, 3,678 ವಿದ್ಯಾರ್ಥಿಗಳು ಹಾಜ ರಾಗಿದ್ದಾರೆ. 38 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಅನು ದಾನ ರಹಿತ ಕಾಲೇಜಿನಿಂದ 6,489 ವಿದ್ಯಾರ್ಥಿ ಗಳು ನೋಂದಾ ಯಿಸಿ ಕೊಂಡಿದ್ದು, 6,186 ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ. 303 ಮಂದಿ ಗೈರು ಹಾಜ ರಾಗಿ ದ್ದಾರೆ. ಸರಕಾರಿ ಕಾಲೇಜುಗಳಿಂದ 4,738 ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿದ್ದು, 4,379 ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ. 359 ಮಂದಿ ಗೈರು ಹಾಜರಾಗಿದ್ದಾರೆ.
ಉಪ್ಪಿನಂಗಡಿ: ಗೊಂದಲವಿಲ್ಲದೆ
ಶಾಂತಿಯುತವಾಗಿ ನಡೆದ ಪರೀಕ್ಷೆ
ಉಪ್ಪಿನಂಗಡಿ: ಹಿಜಾಬ್ ಕಾರಣಕ್ಕೆ ಸುದ್ದಿಯಾಗಿದ್ದ ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪ್ರಾರಂಭಗೊಂಡ ಪ್ರಥಮ ಪಿಯುಸಿ ಪರೀಕ್ಷೆಯು ಗೊಂದಲವಿಲ್ಲದೆ ನಡೆಯಿತು.
ಅರ್ಥಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದಲ್ಲಿ ಪರೀಕ್ಷೆ ನಡೆದಿದ್ದು, ಹಾಜರಾಗಬೇಕಾಗಿದ್ದ 601 ವಿದ್ಯಾರ್ಥಿಗಳ ಪೈಕಿ 30 ಮಂದಿ ಗೈರು ಹಾಜರಾಗಿದ್ದರು. ಹಾಜರಾದ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರೂ ಸಮವಸ್ತ್ರ ನಿಯಮ ಪಾಲನೆ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಭಾಷಾ ದ್ವೇಷ ತಡೆಯುವುದು ಅಗತ್ಯ: ವೈದೇಹಿ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್