ಉಡುಪಿ ಜಿಲ್ಲೆ :ಸಾವಿರ ದಾಟಿದ ಮಾದರಿ ಸಂಗ್ರಹ
Team Udayavani, Apr 24, 2020, 5:45 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಿಲ್ಲೆಯಲ್ಲಿ ಗುರುವಾರ 14 ಜನರ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಮಾದರಿಗಳ ಸಂಗ್ರಹ ಸಾವಿರ ಸಂಖ್ಯೆಯನ್ನು ದಾಟಿದೆ.
ಗುರುವಾರ ಬಂದ ಎಲ್ಲ 26 ವರದಿ ನೆಗೆಟಿವ್ ಆಗಿವೆ. ಇದುವರೆಗೆ 1,007 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 98 ಮಾದರಿಗಳ ವರದಿ ಬರಬೇಕಾಗಿದೆ.
ಗುರುವಾರ 62 ಮಂದಿ ಹೆಸರು ನೋಂದಣಿ ಮಾಡಿಸಿದ್ದಾರೆ. 46 ಮಂದಿ 14 ದಿನಗಳ ನಿಗಾವಣೆ ಮುಗಿಸಿದ್ದು 709 ಮಂದಿ ನಿಗಾವಣೆಯಲ್ಲಿದ್ದಾರೆ. ಆರು ಜನರು ಆಸ್ಪತ್ರೆ ಕ್ವಾರಂಟೈನ್ಗೆ ಸೇರಿದ್ದು 32 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. 7 ಮಂದಿ ಆಸ್ಪತ್ರೆ ಐಸೊಲೇಶನ್ ವಾರ್ಡ್ಗೆ ಸೇರಿದ್ದು ಒಂಬತ್ತು ಮಂದಿ ಬಿಡುಗಡೆಗೊಂಡಿದ್ದಾರೆ. 50 ಮಂದಿ ವಾರ್ಡ್ನಲ್ಲಿದ್ದಾರೆ. ಭಟ್ಕಳದ ಗರ್ಭಿಣಿ ಗಂಟಲ ದ್ರವ ಮಾದರಿ ಸಂಗ್ರಹದ ವರದಿ ಇನ್ನೂ ಬಂದಿಲ್ಲ.