
Health Tips: ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಈ ಲೋಷನ್ ಬಳಸಿ..
ವಿವಿಧ ಸಂಸ್ಥೆಗಳು ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ತಯಾರಿಸುತ್ತವೆ.
Team Udayavani, May 24, 2023, 5:35 PM IST

ಬೇಸಿಗೆಯಲ್ಲಿ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಈಗಿನ ಬಿಸಿಲಿಗೆ ಚರ್ಮ ಬಹಳ ಬೇಗ ಟ್ಯಾನ್ ಆಗುತ್ತದೆ. ಚರ್ಮ ಸುಟ್ಟಂತೆ ಆಗುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್ ಲೋಷನ್ ಉತ್ತಮ ಪರಿಹಾರ. ತ್ವಚೆಯ ಆರೈಕೆಯಲ್ಲಿ ಸನ್‌ಸ್ಕ್ರೀನ್ ಲೋಷನ್ ಮುಖ್ಯ ಪಾತ್ರ ವಹಿಸುತ್ತದೆ.
ಸೂರ್ಯನ ಯುವಿ ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ. ಸನ್‌ಸ್ಕ್ರೀನ್ ಲೋಷನ್ ಉಪಯೋಗಿಸುವುದರಿಂದ ಇದನ್ನು ತಡೆಗಟ್ಟಬಹುದು. ಸನ್ ಸ್ಕ್ರೀನ್ ಲೋಷನ್ ಯಾವ ಸಮಯದಲ್ಲಿ ಯಾವ ರೀತಿಯಾಗಿ ಹಾಗೂ ಯಾರೆಲ್ಲ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ಸೂರ್ಯನ ಕಿರಣದಿಂದ ನಮ್ಮ ಚರ್ಮವನ್ನು ರಕ್ಷಿಸಲು ಸನ್ಸ್ಕ್ರೀನ್ ಲೋಷನ್ ಬಳಸುವುದು ಉತ್ತಮ. ಇದು ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಸನ್‍ಸ್ಕ್ರೀನ್ ಗಣನೀಯವಾಗಿ ಬಳಸುವುದರಿಂದ ಮುಖದಲ್ಲಿನ ಮೊಡವೆ, ಶುಷ್ಕತೆ, ಸುಕ್ಕು, ತುರಿಕೆ ಸೇರಿದಂತೆ ಇನ್ನಿತರ ಚರ್ಮದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.
ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದರ ಮುಖ್ಯ ಉದ್ದೇಶವೇ ತ್ವಚೆಯನ್ನು ಬಿಸಿಲಿನಿಂದ ಕಾಪಾಡಿಕೊಳ್ಳುವುದು. ನೇರವಾದ ಅಥವಾ ಕಠಿಣವಾದ ಸೂರ್ಯನ ಬೆಳಕಿನಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಡೆಯಲು ಮನೆಯಿಂದ ಹೊರ ಹೋಗುವ ಮುನ್ನ ತಪ್ಪದೇ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ.
ಲೋಷನ್ ಮುಖಕ್ಕೆ ಮಾತ್ರವಲ್ಲದೆ ಸೂರ್ಯನ ಕಿರಣಗಳು ಬೀಳುವ ದೇಹದ ಇತರ ಅಂಗಗಳಿಗೂ ಹಚ್ಚಿ. ಹೆಚ್ಚಿನವರು ಸನ್‍ಸ್ಕ್ರೀನ್ ಕೇವಲ ಮುಖಕ್ಕೆ ಮಾತ್ರ ಹಚ್ಚುತ್ತಾರೆ. ಹೀಗೆ ಮಾಡಬಾರದು. ಅದರ ಬದಲಿಗೆ ಸೂರ್ಯನ ಕಿರಣಗಳು ಬೀಳುವ ನಮ್ಮ ದೇಹದ ಇತರ ಭಾಗಗಳಿಗೂ ಹಚ್ಚಬೇಕು. ತೋಳು, ಕಾಲು, ಕೈ ಕತ್ತುಗಳಿಗೂ ಹಚ್ಚಿಕೊಳ್ಳುವುದು ಉತ್ತಮ.
ಸನ್ ಸ್ಕ್ರೀನ್ ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎಂಬುದನ್ನು ಪರಿಶೀಲಿಸಿ, 30+ ಅಥವಾ 50 ಎಸ್‍ಪಿಎಫ್ ಗಿಂತ ಹೆಚ್ಚಿರುವುದನ್ನು ಖರೀದಿಸಿ. ಹೆಚ್ಚು ಸಮಯ ಸೂರ್ಯನ ಬೆಳಕಿಗೆ ತೆರೆದುಕೊಳ್ಳುವವರು ಹೆಚ್ಚು ಪ್ರಮಾಣದ ಎಸ್‍ಪಿಎಫ್ ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ಬಳಸಬೇಕು ಎಂದು ತಜ್ಞರು ಹೇಳುತ್ತಾರೆ.
ವಿವಿಧ ಸಂಸ್ಥೆಗಳು ಸನ್ ಸ್ಕ್ರೀನ್ ಕ್ರೀಮ್‍ಗಳನ್ನು ತಯಾರಿಸುತ್ತವೆ. ಆದ್ದರಿಂದ ಮಾರುಕಟ್ಟೆಯಲ್ಲಿ ನಮಗೆ ಸಾಕಷ್ಟು ಆಯ್ಕೆಗಳಿವೆ. ನಮ್ಮ ಚರ್ಮಕ್ಕೆ ಯಾವುದು ಸೂಕ್ತವೆಂದು ಪರಿಶೀಲಿಸಿ ಖರೀದಿಸುವುದು ಉತ್ತಮ. ಕೆಲವರಿಗೆ ರಾಸಾಯನಿಕ ಉತ್ಪನ್ನಗಳಿಂದ ತಯಾರಿಸಿದ ಲೋಷನ್ ಅಲರ್ಜಿ ಉಂಟು ಮಾಡುತ್ತದೆ. ಹಾಗಾಗಿ ಅಲರ್ಜಿಯಾಗುವ ಉತ್ಪನ್ನಗಳ ಬಗ್ಗೆ ತಿಳಿದುಕೊಂಡು ಪರಿಶೀಲಿಸಿ ಖರೀದಿಸಿ.
ಲೋಷನ್ ಅಥವಾ ಕ್ರೀಮ್ ಮುಖಕ್ಕೆ ಹಚ್ಚುವ ಮೊದಲು ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಿ, ನಂತರ ಅದನ್ನು ಖರೀದಿ ಮಾಡುವುದು ಅಥವಾ ಬಳಸುವುದು ಒಳಿತು. ಸನ್ ಸ್ಕ್ರೀನ್ ಲೋಷನ್ ಕೇವಲ ಬಿಸಿಲಿರುವಾಗ ಮಾತ್ರವಲ್ಲದೇ ಪ್ರತಿಯೊಂದು ಋತುಮಾನದಲ್ಲೂ ಬಳಸಬಹುದು. ನಿತ್ಯವೂ ಮುಖಕ್ಕೆ ಸನ್‍ಸ್ಕ್ರೀನ್ ಹಚ್ಚುವುದರಿಂದ ಚರ್ಮ ಸೂರ್ಯನ ಕಿರಣದಿಂದ ರಕ್ಷಣೆ ಪಡೆದುಕೊಳ್ಳುವುದರ ಜೊತೆಗೆ ತ್ವಚೆಗೆ ಸಂಬಂಧಿಸಿದ ಇತರ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು.
ಒಮ್ಮೆ ಹಚ್ಚಿದ ಸನ್‍ಸ್ಕ್ರೀನ್ ದೀರ್ಘ ಸಮಯಗಳ ಕಾಲ ಉಳಿದುಕೊಳ್ಳುವುದಿಲ್ಲ. ನಮ್ಮ ದೇಹಕ್ಕೆ ನೀರು ತಗುಲಿದಾಗ, ಬೆವರಿದಾಗ ಅಥವಾ ಬಟ್ಟೆಯಿಂದ ಮುಖವನ್ನು ಒರೆಸಿಕೊಂಡಾಗ ಕ್ರೀಮ್ ಸುಲಭವಾಗಿ ಸ್ವಚ್ಛವಾಗುತ್ತದೆ. ಹಾಗಾಗಿ ಪ್ರತಿ ಎರಡು ಗಂಟೆಗೊಮ್ಮೆ ಕ್ರೀಮ್ ಹಚ್ಚಿಕೊಳ್ಳಬೇಕು. ಆಗ ಚರ್ಮದ ಸಮಸ್ಯೆಯನ್ನು ನಿವಾರಿಸಬಹುದು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

Beauty Tips: ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು….

Non-vegetarian Recipes; ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್…

Fort;ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗದ ಜಂಜೀರಾ ಕೋಟೆ ಬಗ್ಗೆ ಗೊತ್ತಾ?

‘ಮತ್ತದೇ ಬೇಸರ, ಮತ್ತೆ ಸಂಜೆ…’ ಒದ್ದೆ ಮೈದಾನದಲ್ಲಿ ಜಾರಿ ಬಿತ್ತು RCB ಟ್ರೋಫಿ ಕನಸು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
