ಶಾಸಕ ಯು.ಟಿ. ಖಾದರ್ ಗನ್ ಮ್ಯಾನ್ ಗೂ ಕೋವಿಡ್ ಪಾಸಿಟಿವ್
Team Udayavani, Jul 8, 2020, 4:20 PM IST
ಮಂಗಳೂರು : ಶಾಸಕ ಯು. ಟಿ. ಖಾದರ್ ಗನ್ ಮ್ಯಾನ್ ಮತ್ತು ಸಿಟಿ ಸ್ಪೆಷಲ್ ಬ್ರಾಂಚ್ (CSB ) ಸಿಬಂದಿಗೂ ಕೂಡಾ ಕೋವಿಡ್ ಸೋಂಕು ದೃಢಪಟ್ಟಿದೆ.
ಗನ್ ಮ್ಯಾನ್ ಕಳೆದ 10 ದಿನಗಳಿಂದ ರಜೆಯಲ್ಲಿದ್ದು ಜೊತೆಗೆ ಸಿಟಿ ಸ್ಪೆಷಲ್ ಬ್ರಾಂಚ್ (CSB) ಸಿಬಂದಿ ರಜೆಯಲ್ಲಿ ತನ್ನ ಊರಾದ ರಾಯಚೂರಿಗೆ ಹೋಗಿ ಬಂದಿದ್ದರು ಎನ್ನಲಾಗಿದೆ ಆದರೆ ಇಂದು ಇಬ್ಬರ ವರದಿಯಲ್ಲೂ ಸೋಂಕು ದೃಢಪಟ್ಟಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಅತೀ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ ರಾಕೆಟ್ ವೇಗದಲ್ಲಿ ಮೇಲೇರುತ್ತಿವೆ.