ವಿಜಯ್‌ ಹಜಾರೆ ಟ್ರೋಫಿ-2021 : ಬರೋಡವನ್ನು ಬಗ್ಗುಬಡಿದ ಕರ್ನಾಟಕ


Team Udayavani, Dec 13, 2021, 5:30 AM IST

ವಿಜಯ್‌ ಹಜಾರೆ ಟ್ರೋಫಿ-2021 : ಬರೋಡವನ್ನು ಬಗ್ಗುಬಡಿದ ಕರ್ನಾಟಕ

ತಿರುವನಂತಪುರ: ರವಿವಾರ ವಿಜಯ್‌ ಹಜಾರೆ ಟ್ರೋಫಿ-2021 : ಬರೋಡವನ್ನು ಬಗ್ಗುಬಡಿದ ಕರ್ನಾಟಕರದ ಮಳೆಪೀಡಿತ ಪಂದ್ಯದಲ್ಲಿ ಬರೋಡವನ್ನು ವಿಜೆಡಿ ನಿಯಮದಂತೆ 6 ವಿಕೆಟ್‌ಗಳಿಂದ ಬಗ್ಗುಬಡಿದ ಕರ್ನಾಟಕ, “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ 3ನೇ ಗೆಲುವು ದಾಖಲಿಸಿದೆ.

ವಿ. ಕೌಶಿಕ್‌ ಮತ್ತು ಕೆ.ಸಿ. ಕಾರ್ಯಪ್ಪ ಬೌಲಿಂಗಿಗೆ ಉತ್ತರಿಸಲಾಗದೆ ಚಡಪಡಿಸಿದ ಬರೋಡ 48.3 ಓವರ್‌ಗಳಲ್ಲಿ 176 ರನ್ನಿಗೆ ಕುಸಿಯಿತು. ಜವಾಬು ನೀಡತೊಡಗಿದ ಕರ್ನಾಟಕ 37 ಓವರ್‌ಗಳಲ್ಲಿ 4ಕ್ಕೆ 134 ರನ್‌ ಗಳಿಸಿದ ವೇಳೆ ಮಳೆ ಸುರಿಯಿತು.

ಹೀಗಾಗಿ ಗುರಿಯನ್ನು ಮರು ನಿಗದಿಗೊಳಿಸಲಾಯಿತು. 42 ಓವರ್‌ಗಳಲ್ಲಿ 147 ರನ್‌ ತೆಗೆಯುವ ಟಾರ್ಗೆಟ್‌ ಲಭಿಸಿತು. 38.4 ಓವರ್‌ಗಳಲ್ಲಿ 4ಕ್ಕೆ 150 ರನ್‌ ಬಾರಿಸುವ ಮೂಲಕ ಕರ್ನಾಟಕ ಗೆದ್ದು ಬಂದಿತು.

ಇದು “ಬಿ’ ವಿಭಾಗದ 4 ಪಂದ್ಯಗಳಲ್ಲಿ ಕರ್ನಾಟಕಕ್ಕೆ ಒಲಿದ 3ನೇ ಗೆಲುವು. ತಮಿಳುನಾಡು ಕೂಡ ಇಷ್ಟೇ ಪಂದ್ಯ ಗಳನ್ನಾಡಿ 12 ಅಂಕ ಹೊಂದಿದೆ. ರನ್‌ರೇಟ್‌ನಲ್ಲಿ ಮುಂದಿ ರುವ ಕಾರಣ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದೆ. ತಮಿಳುನಾಡು +1.634, ಕರ್ನಾಟಕ +1.046 ರನ್‌ರೇಟ್‌ ಹೊಂದಿದೆ. ಮಂಗಳವಾರದ ಅಂತಿಮ ಗ್ರೂಪ್‌ ಪಂದ್ಯದಲ್ಲಿ ಕರ್ನಾಟಕ-ಬಂಗಾಲ ಮುಖಾಮುಖೀ ಆಗಲಿವೆ. ಅಂದೇ ತಮಿಳುನಾಡು ಬರೋಡವನ್ನು ಎದುರಿಸಲಿದೆ.

ಬರೋಡ ಬ್ಯಾಟಿಂಗ್‌ ಕುಸಿತ
ಬರೋಡದ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಕೇದಾರ್‌ ದೇವಧರ್‌ (31)-ಆದಿತ್ಯ ವಾಗೊ¾àಡೆ (27) ಮೊದಲ ವಿಕೆಟಿಗೆ 12 ಓವರ್‌ಗಳಿಂದ 59 ರನ್‌ ಒಟ್ಟುಗೂಡಿಸಿದರು. ವಿ. ಕೌಶಿಕ್‌ ಆರಂಭಿಕರಿಬ್ಬರನ್ನೂ ಔಟ್‌ ಮಾಡುವ ಮೂಲಕ ಬರೋಡ ಕುಸಿತವನ್ನು ತೀವ್ರಗೊಳಿಸಿದರು. 117 ರನ್‌ ಅಂತರದಲ್ಲಿ ಬರೋಡದ ಎಲ್ಲ ವಿಕೆಟ್‌ ಉದುರಿ ಹೋಯಿತು. ಕೌಶಿಕ್‌ 38ಕ್ಕೆ 3, ಕೆ.ಸಿ. ಕಾರ್ಯಪ್ಪ 28ಕ್ಕೆ 3, ಪ್ರವೀಣ್‌ ದುಬೆ 31ಕ್ಕೆ 2 ವಿಕೆಟ್‌ ಉರುಳಿಸಿದರು. 40 ರನ್‌ ಮಾಡಿದ ಭಾನು ಪನಿಯ ಬರೋಡ ತಂಡದ ಟಾಪ್‌ ಸ್ಕೋರರ್‌.

ಚೇಸಿಂಗ್‌ ವೇಳೆ ವನೌಡೌನ್‌ ಬ್ಯಾಟ್ಸ್‌ಮನ್‌ ಕೆ. ಸಿದ್ಧಾರ್ಥ್ 46 ರನ್‌ ಮಾಡಿ ಅಜೇಯರಾಗಿ ಉಳಿದರು. ಮುಂಬಯಿಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಕಾರ ಆರ್‌. ಸಮರ್ಥ್ 35 ರನ್‌ ಮಾಡಿ ಬ್ಯಾಟಿಂಗ್‌ ಫಾರ್ಮ್ ಮುಂದುವರಿಸಿದರು.

ನಾಯಕ ಮನೀಷ್‌ ಪಾಂಡೆ 19 ರನ್‌ ಮಾಡಿದರೆ, ಕರುಣ್‌ ನಾಯರ್‌ ಖಾತೆಯನ್ನೇ ತೆರೆಯಲಿಲ್ಲ. ಇಬ್ಬರೂ ರನೌಟ್‌ ಆಗಿ ನಿರ್ಗಮಿಸಿದರು. ರೋಹನ್‌ ಕದಂ 14 ರನ್‌, ಎಸ್‌. ಶರತ್‌ ಅಜೇಯ 21 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಬರೋಡ-48.3 ಓವರ್‌ಗಳಲ್ಲಿ 176 (ಭಾನು ಪನಿಯ 40, ದೇವಧರ್‌ 31, ವಾಗೊ¾àಡೆ 27, ಕಾರ್ಯಪ್ಪ 28ಕ್ಕೆ 3, ಕೌಶಿಕ್‌ 38ಕ್ಕೆ 3, ದುಬೆ 31ಕ್ಕೆ 2). ಕರ್ನಾಟಕ-38.4 ಓವರ್‌ಗಳಲ್ಲಿ 4 ವಿಕೆಟಿಗೆ 150 (ಕೆ. ಸಿದ್ಧಾರ್ಥ್ ಔಟಾಗದೆ 46, ಆರ್‌. ಸಮರ್ಥ್ 35, ಎಸ್‌. ಶರತ್‌ ಔಟಾಗದೆ 21).

ಕೊನೆಯ ಸ್ಥಾನಕ್ಕೆ
ಕುಸಿದ ಮುಂಬಯಿ
ದಿನದ ಮತ್ತೊಂದು ಮಳೆ ಪಂದ್ಯದಲ್ಲಿ ಬಂಗಾಲ ವಿರುದ್ಧ ಮುಂಬಯಿ 67 ರನ್ನುಗಳ ಸೋಲಿಗೆ ತುತ್ತಾಯಿತು. ಈ ಫ‌ಲಿತಾಂಶಕ್ಕೂ ವಿಜೆಡಿ ನಿಯಮವನ್ನು ಅಳವಡಿಸಲಾಯಿತು. 4 ಪಂದ್ಯಗಳಲ್ಲಿ 3ನೇ ಸೋಲನುಭವಿಸಿದ ಮುಂಬಯಿ “ಬಿ’ ವಿಭಾಗದ ಅಂತಿಮ ಸ್ಥಾನಕ್ಕೆ ಕುಸಿದಿದೆ.

ಅನುಸ್ತೂಪ್‌ ಮಜುಮಾªರ್‌ (110) ಮತ್ತು ಶಬಾಜ್‌ ಅಹ್ಮದ್‌ (106) ಅವರ ಶತಕ ಸಾಹಸದಿಂದ ಬಂಗಾಲ 7 ವಿಕೆಟಿಗೆ 318 ರನ್‌ ಪೇರಿಸಿತು. ಮುಂಬಯಿ 41 ಓವರ್‌ಗಳಲ್ಲಿ 8 ವಿಕೆಟಿಗೆ 223 ರನ್‌ ಗಳಿಸಿತು. ಸೂರ್ಯಕುಮಾರ್‌ ಯಾದವ್‌ 49, ಅರ್ಮಾನ್‌ ಜಾಫ‌ರ್‌ 47 ರನ್‌ ಮಾಡಿದರು.

ಇದನ್ನೂ ಓದಿ:ಬಾಂಗ್ಲಾ ವನಿತಾ ಕ್ರಿಕೆಟ್‌ ತಂಡದಲ್ಲಿ 2 ಒಮಿಕ್ರಾನ್‌ ಕೇಸ್‌

ಕೇರಳಕ್ಕೆ ಮೂರನೇ ಜಯ
ರವಿವಾರದ ಪಂದ್ಯದಲ್ಲಿ ಛತ್ತೀಸ್‌ಢವನ್ನು 5 ವಿಕೆಟ್‌ಗಳಿಂದ ಉರುಳಿಸುವ ಮೂಲಕ ಕೇರಳ 3ನೇ ಗೆಲುವನ್ನು ದಾಖಲಿಸಿತು. ಸಿಜೊಮೋನ್‌ ಜೋಸೆಫ್ ಬೌಲಿಂಗ್‌ ದಾಳಿಗೆ (33ಕ್ಕೆ 5) ತತ್ತರಿಸಿದ ಛತ್ತೀಸ್‌ಗಢ 46.2 ಓವರ್‌ಗಳಲ್ಲಿ 189 ರನ್ನಿಗೆ ಕುಸಿಯಿತು. ಜವಾಬಿತ್ತ ಕೇರಳ 34.3 ಓವರ್‌ಗಳಲ್ಲಿ 5 ವಿಕೆಟಿಗೆ 193 ರನ್‌ ಮಾಡಿತು. ವಿನೂಪ್‌ ಮನೋಹರನ್‌ ಔಟಾಗದೆ 54, ಮೊಹಮ್ಮದ್‌ ಅಜರುದ್ದೀನ್‌ 45 ರನ್‌ ಬಾರಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಜೋಸೆಫ್ 27 ರನ್‌ ಮಾಡಿದರು.

ಇದಕ್ಕೂ ಮೊದಲು ಚಂಡೀಗಢ, ಮಹಾರಾಷ್ಟ್ರ ವಿರುದ್ಧ ಕೇರಳ ಜಯ ಸಾಧಿಸಿತ್ತು. ಮಧ್ಯಪ್ರದೇಶ ವಿರುದ್ಧ 40 ರನ್ನುಗಳಿಂದ ಎಡವಿತ್ತು.

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.