Udayavni Special

ಆ ವಿಜಯದಶಮಿಯಂದು “ಸಂಘ’ ಮಾತ್ರವೇ ಪ್ರಾರಂಭವಾಗಲಿಲ್ಲ…


Team Udayavani, Oct 25, 2020, 6:10 AM IST

ಆ ವಿಜಯದಶಮಿಯಂದು “ಸಂಘ’ ಮಾತ್ರವೇ ಪ್ರಾರಂಭವಾಗಲಿಲ್ಲ…

ಕೆಲವು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಾರಪತ್ರಿಕೆಯೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘ ಚಾಲಕ ರಾಗಿದ್ದ ಬಾಳಾಸಾಹೇಬ ದೇವರಸರ ಭಾವ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ “ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಎಂದು ಬಣ್ಣಿಸಿತ್ತು. ಇದು ಎಪ್ಪತ್ತರ ದಶಕದ ಘಟನೆ. ಸಂಘಟನೆಯೊಂದು ಪ್ರಾರಂಭವಾಗಿ ಕೇವಲ ನಲುವತ್ತೆ„ದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪತ್ರಿಕೆಯೊಂದು ಆ ರೀತಿ ಬರೆಯಬೇಕಾದರೆ ಸಂಘದ ಶಕ್ತಿ ಇವತ್ತು ಯಾವ ಮಟ್ಟಿಗಿದೆ ಎಂದು ನಾವು ಕಲ್ಪಿಸಿಕೊಳ್ಳಬಹುದು.

ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ಅವರು (ಮಾರ್ಗರೆಟ್‌ ಎಲಿಜಬೆತ್‌ ನೊಬೆಲ್‌) ನೀಡಿದ್ದ “ಭಾರತವು ಪಾರತಂತ್ರ್ಯದಿಂದ ವಿಮೋಚನೆಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯವೂ ಸ್ವಲ್ಪ ಸಮಯವನ್ನು ರಾಷ್ಟ್ರಕ್ಕಾಗಿ ತೆಗೆದಿಡಬೇಕು’ ಎಂಬ ಕರೆಯು ಡಾ| ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ಮನದಲ್ಲಿ “ಸಂಘ’ವನ್ನು ಪ್ರಾರಂಭಿಸುವ ಚಿಂತನೆಯ ಬೀಜವನ್ನು ನೆಟ್ಟಿತು. ಅದರ ಫಲವಾಗಿ ಇವತ್ತು ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಸಂಘ ನಮ್ಮ ಕಣ್ಮುಂದೆ ನಿಂತಿದೆ.

ಗೌರವಾನ್ವಿತ ಸ್ಥಾನಮಾನಗಳನ್ನು ಪಡೆದು ಅಧಿಕಾರದ ಫಲವನ್ನು ಸವಿಯುವ ಸುಲಭದ ಮತ್ತು ಆಕರ್ಷಕ ಹಾದಿಯನ್ನು ಬಿಟ್ಟು ಅತೀ ಕಷ್ಟದ ಸಾಮಾಜಿಕ ಸಂಘಟನೆಯ ಹಾದಿಯನ್ನು ಹೆಡಗೇವಾರ್‌ ತುಳಿದರು. ಈ ಸಂಘಟನೆಯ ನಿರ್ಮಾಣಕ್ಕೆ ಅವರು ವಿನೂತನ ಸಾಧನವಾದ ನಿತ್ಯ ಶಾಖೆಯ ಕಾರ್ಯಪದ್ಧತಿಯನ್ನು ಹುಟ್ಟುಹಾಕಿದರು. ಈ ಹಾದಿ ಸುದೀರ್ಘ‌ ಮತ್ತು ಕಠಿನವಾದ ಹಾದಿ ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಡಾ| ಹೆಡಗೇವಾರರ ಅಚಲ ವಿಶ್ವಾಸ ಮತ್ತು ಸೇವೆಯನ್ನು ಸ್ವಯಂ ಇಚ್ಛೆಯಿಂದ ಅಪ್ಪಿಕೊಂಡ ಕೋಟ್ಯಂತರ ದೇವದುರ್ಲಭ ಕಾರ್ಯ ಕರ್ತರ ಕಾರಣದಿಂದ ಸಂಘ ಇವತ್ತು ವಿಶ್ವಾದ್ಯಂತ ಸರ್ವ ವ್ಯಾಪಿ ಸರ್ವಸ್ಪರ್ಶಿಯಾಗಿದೆ.

ಆರೆಸ್ಸೆಸ್‌ ಪ್ರಾರಂಭವಾದದ್ದು 1925ರಲ್ಲಿ. ಅದೀಗ 95 ವಸಂತಗಳನ್ನು ಪೂರೈಸಿದೆ. ಆದರೆ ಸಂಘ ಎಂದಿಗೂ ಎರಡಾಗಿಲ್ಲ. ಬದಲಿಗೆ ನಿರಂತರವಾಗಿ ಬೆಳೆಯುತ್ತಾ ಬಂದಿದೆ. ವಿಕಾಸಗೊಂಡಂತೆಲ್ಲ ಸಮಾ ಜದ ಪರಿಸ್ಥಿತಿಯು “ಸಂಘದ ಸ್ವಯಂಸೇವಕರು ಹೊಸದನ್ನೇನಾದರೂ ಮಾಡಬೇಕು ಎಂದು’ ಅಪೇಕ್ಷಿಸಿತ್ತು. ಅದರ ಪರಿಣಾಮವಾಗಿ ವಿವಿಧ ಕ್ಷೇತ್ರಗಳ ಮೂಲಕ ವಿಕಾಸ ಪ್ರಾರಂಭ ಆಯಿತು.

ಅಂದರೆ ಆ ವಿಜಯದಶಮಿಯಂದು ಪ್ರಾರಂಭವಾಗಿದ್ದು ಸಂಘ ಮಾತ್ರವಲ್ಲ. ಅದು ತನ್ನ ಅನೇಕಾನೇಕ ಆಯಾಮಗಳಿಗೆ ಜನ್ಮನೀಡಿತು. ಸಂಘ ತನ್ನ ವಿವಿಧ ಕ್ಷೇತ್ರಗಳ ಮೂಲಕ ವಿಸ್ತಾರವನ್ನು ಪ್ರಾರಂಭಿಸಿದ್ದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂಲಕ. ಅಭಾವಿಪವು ರಾಷ್ಟ್ರೀಯ ದೃಷ್ಟಿಕೋನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಮತ್ತು ಶೈಕ್ಷಣಿಕ ಮತ್ತು ರಾಷ್ಟ್ರೀಯ ಸುರಕ್ಷೆಯ ಸಮಸ್ಯೆಗಳಿಗಾಗಿ ಸ್ಪಂದಿಸುವ ಸಂಘಟನೆಯಾಗಿ 1948ರಲ್ಲಿ ಪ್ರಾರಂಭವಾಯಿತು. ಇವತ್ತು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಜಗತ್ತಿನಲ್ಲಿ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆ.

1936ರಲ್ಲಿ ಆರಂಭವಾದ ರಾಷ್ಟ್ರ ಸೇವಿಕಾ ಸಮಿತಿ ಈಗ ದೇಶಾದ್ಯಂತ 5,200ಕ್ಕೂ ಅಧಿಕ ಶಾಖೆಗಳ ಮೂಲಕ ಮಹಿಳೆಯರಿಗೆ ಭಾರತೀಯ ಸಂಸ್ಕೃತಿ ಮತ್ತು ಅದರ ಸಂರಕ್ಷಣೆಗೆ ಪ್ರೇರಣೆ ನೀಡುತ್ತಿದೆ. ಇದರ ಸ್ವಯಂ ಸೇವಕಿಯರು 700ಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಮಹಿಳಾ ಸ್ವಯಂ ಸೇವಾ ಸಂಘಟನೆಯಾಗಿ ಇಂದು ಕಣ್ಣ ಮುಂದಿದೆ.

ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬಾರದ ಬುಡಕಟ್ಟು ಜನರನ್ನು ರಾಷ್ಟ್ರೀಯ ಮುಖ್ಯಧಾರೆಗೆ ತರುವ ಪ್ರಯತ್ನವಾಗಿ 1952ರಲ್ಲಿ ಪ್ರಾರಂಭವಾದ “ವನವಾಸಿ ಕಲ್ಯಾಣ ಆಶ್ರಮ” ಭಾರತದಲ್ಲಿರುವ ಸುಮಾರು 10 ಕೋಟಿ ವನವಾಸಿಗಳ ಅಭ್ಯುದಯಕ್ಕೆ ಶ್ರಮಿಸುತ್ತಿದೆ.

ಭಾರತೀಯ ಜನಸಂಘ “ಸಂಘ’ದ ಯೋಜ ನೆಯಂತೆ ಟಿಸಿಲೊಡೆದ ಸಂಘಟನೆಯ ಲ್ಲದಿದ್ದರೂ ಪ್ರಖರ ರಾಷ್ಟ್ರವಾದಿ ಆಗಿದ್ದ ಡಾ| ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರ ಅಪೇಕ್ಷೆಯ ಮೇರೆಗೆ ಸಂಘದ ಅತ್ಯುತ್ತಮ ಪ್ರತಿಭೆಗಳನ್ನು ಭಾಜಪಕ್ಕೆ ಕಳುಹಿಸಿ ಕೊಡಲಾಯಿತು. ಭಾರತೀಯ ಜನತಾ ಪಕ್ಷವಾಗಿ ಪರಿವರ್ತನೆಗೊಂಡ ಸಂಘಟನೆ ಇಂದು ದೇಶದ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ಇಂದು ದೇಶದ ಚುಕ್ಕಾಣಿ ಹಿಡಿವ ನಾಯಕರಿಂದ ಪ್ರಾರಂಭಿಸಿ ಅನೇಕ ಉನ್ನತ ಹುದ್ದೆಗಳಲ್ಲಿ ಸಂಘದ ಸ್ವಯಂ ಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂಘ ಟನೆಯ ನೈಜ ಶಕ್ತಿಯ ಪರಿಚಯ ಮಾಡಿಸುತ್ತದೆ.

ಭಾರತೀಯ ಮಜ್ದೂರ್‌ ಸಂಘವನ್ನು 1955ರಲ್ಲಿ ಕುಶಲ ಸಂಘಟಕರು ಮತ್ತು ತತ್ವಜ್ಞಾನಿಯಾಗಿದ್ದ ದತ್ತೋಪಂತ ಠೇಂಗಡಿಯವರ ಪ್ರಾರಂಭಿಸಿದರು. “ರಾಷ್ಟ್ರವನ್ನು ಔದ್ಯೋಗೀಕರಣಗೊಳಿಸಿ, ಉದ್ಯೋಗವನ್ನು ಶ್ರಮಿಕೀಕರಣಗೊಳಿಸಿ, ಶ್ರಮಿಕರನ್ನು ರಾಷ್ಟ್ರೀಕರಣಗೊಳಿಸಿ’ ಎನ್ನುವ ಘೋಷವಾಕ್ಯದೊಂದಿಗೆ ಕಾರ್ಮಿಕ ಕ್ಷೇತ್ರದ ಬಗೆಗಿನ ಅವರ ಚಿಂತನೆಗಳು ಹೊಸ ಸಿದ್ಧಾಂತಕ್ಕೆ ನಾಂದಿಯಾದವು. ಪ್ರಸ್ತುತ 85 ಲಕ್ಷ ಸದಸ್ಯತ್ವ ಹೊಂದಿರುವ ಭಾರತೀಯ ಮಜ್ದೂರ್‌ ಸಂಘ ದೇಶದ ಅತೀ ದೊಡ್ಡ ಕಾರ್ಮಿಕ ಸಂಘಟನೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಸಾಂಸ್ಕೃತಿಕ ಮೌಲ್ಯಾಧಾರಿತ ಸಂಸ್ಕಾರವು ಸಿಗುವಂತಾಗಬೇಕೆಂಬ ಹಂಬಲದಿಂದ 1977ರಲ್ಲಿ ಪ್ರಾರಂಭಗೊಂಡ ವಿದ್ಯಾಭಾರತಿ ಇಂದು 29 ಸಾವಿರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಸುಮಾರು 37 ಸಾವಿರ ಶಿಕ್ಷಕರು ಹಾಗೂ ಮೂವತ್ತು ಲಕ್ಷ ವಿದ್ಯಾರ್ಥಿಗಳು ವಿದ್ಯಾಭಾರತಿಯ ಯೋಜನೆಯಡಿ ಸಂಪರ್ಕ ಹೊಂದಿದ್ದಾರೆ. ದೇಶದ ಅತೀ ದೊಡ್ಡ ಸರಕಾರೇತರ ಶೈಕ್ಷಣಿಕ ಸಂಘಟನೆ ಎಂಬ ಗರಿಮೆ ಇಂದು ವಿದ್ಯಾಭಾರತಿಯದ್ದಾಗಿದೆ.

ಭಾರತೀಯ ಕಿಸಾನ್‌ ಸಂಘ
ರೈತರ ಜೀವನ ಮಟ್ಟವನ್ನು ಉತ್ತಮಗೊಳಿ ಸುವುದಕ್ಕಾಗಿ ಕೃಷಿ ಸಂಶೋಧನೆಗೆ ಪ್ರೋತ್ಸಾಹ ಸೇರಿದಂತೆ ಅನೇಕ ರೈತರ ಕಲ್ಯಾಣದ ವಿವಿಧ ಸಂಕಲ್ಪಗಳೊಂದಿಗೆ ಪ್ರಾರಂಭವಾಗಿ ಇವತ್ತು 8 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ.

ಗುಡ್ಡಗಾಡು ಗ್ರಾಮೀಣ ಹಾಗೂ ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಅವಕಾಶವಂಚಿತರಿಗೆ ನೆರವು ನೀಡುವ ಉದ್ದೇಶದಿಂದ ಪ್ರಾರಂಭವಾದ ಸೇವಾಭಾರತಿಯು 1 ಲಕ್ಷಕ್ಕೂ ಅಧಿಕ ಸೇವಾ ಯೋಜನೆಗಳನ್ನು ಇಂದಿಗೂ ಮುನ್ನಡೆಸುತ್ತಿದೆ.

ಇವು ಕೆಲವೇ ಕೆಲವು ಉದಾಹರಣೆಗಳು ಮಾತ್ರ. ಸಮಾಜದ ಎಲ್ಲ ಮಜಲುಗಳಲ್ಲೂ ವ್ಯಾಪಿಸಿರುವ ಸಂಘದ ಎಲ್ಲ ವಿವಿಧ ಕ್ಷೇತ್ರಗಳ ಕಿರು ವಿವರಗಳೇ ಬೃಹತ್‌ ಬೆಟ್ಟದಷ್ಟಾಗಬಹುದು. ಹಾಗಾಗಿ ಇನ್ನುಳಿದ ಕೆಲವು ಪ್ರಮುಖ ಸಂಘಟನೆಗಳ ಹೆಸರುಗಳನ್ನು ಮಾತ್ರ ನೆನಪಿಸುತ್ತೇನೆ. ಅವುಗಳ ಪ್ರಸ್ತುತ ಕಾರ್ಯಶೈಲಿ ಕಾರ್ಯವ್ಯಾಪ್ತಿ ಖಂಡಿತವಾಗಿಯೂ ನಿಮ್ಮ ಕಣ್ಮುಂದೆ ಬರುತ್ತದೆ.

ವಿಶ್ವಹಿಂದೂ ಪರಿಷತ್‌, ಸ್ವದೇಶಿ ಜಾಗರಣ ಮಂಚ್‌, ಸಂಸ್ಕೃತ ಭಾರತಿ, ಇತಿಹಾಸ ಸಂಕಲನ ಸಮಿತಿ, ಸಂಸ್ಕಾರ ಭಾರತಿ, ಅಖೀಲ ಭಾರತೀಯ ಅಧಿವಕ್ತಾ ಪರಿಷತ್‌, ಅಖೀಲ ಭಾರತೀಯ ಸಾಹಿತ್ಯ ಪರಿಷತ್‌, ಸಹಕಾರ ಭಾರತಿ, ಭಾರತ ವಿಕಾಸ ಪರಿಷತ್‌, ಹಿಂದೂ ಸೇವಾ ಪ್ರತಿಷ್ಠಾನ, ಕ್ರೀಡಾಭಾರತಿ, ಹಿಂದೂ ಜಾಗರಣ ಮಂಚ್‌, ಸಾಮಾಜಿಕ ಸಮರಸತಾ ಮಂಚ್‌, ಆರೋಗ್ಯ ಭಾರತಿ, ವಿಜ್ಞಾನ ಭಾರತಿ, ಲಘು ಉದ್ಯೋಗ ಭಾರತಿ, ಪೂರ್ವ ಸೈನಿಕ ಸೇವಾ ಪರಿಷತ್‌, ಅಖೀಲ ಭಾರತೀಯ ಗ್ರಾಹಕ ಪಂಚಾಯತ್‌, ಇತ್ಯಾದಿ. ಇವೆಲ್ಲವೂ ಅಖೀಲ ಭಾರತ ಮಟ್ಟ ‌ಲ್ಲಿ ಮುಂಚೂಣಿಯಲ್ಲಿರುವ ಸಂಘಟನೆಗಳು ಅನ್ನುವುದು ಗಮನಾರ್ಹ ಸಂಗತಿ, ಮಾತ್ರವಲ್ಲ ಅಧ್ಯಯನ ಯೋಗ್ಯವೂ ಹೌದು.

ಇನ್ನು ಗತಿವಿಧಿಗಳ ರೂಪದಲ್ಲಿ ಧರ್ಮಜಾಗರಣ, ಕುಟುಂಬ ಪ್ರಬೋಧನ, ಗ್ರಾಮವಿಕಾಸ, ಗೋಸೇವಾ, ಸಾಮರಸ್ಯ -ಹೀಗೆ ಸಮಾಜದ ಪ್ರತಿಯೊಂದು ಪದರಗಳಲ್ಲಿ ಸಂಘ ತಲುಪಿದೆ.

ಸಂಘ ಈ ಪ್ರಾಚೀನ ನಾಡಿಗೆ ಮಾಡಿರುವ ಸೇವೆಯ ಅಗಾಧತೆ ಇತರರು ಕಲ್ಪಿಸಿಕೊಂಡಿ ರುವುದ ಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. “ಸಿದ್ಧಾಂತ ಮತ್ತು ಆ ಸಿದ್ಧಾಂತ ‌ನ್ನು ಆಧರಿಸಿ ನಿರ್ಮಿಸಲ್ಪಟ್ಟ ಸಂಘಟನೆಯು ತನ್ನ ಬೆಳವಣಿಗೆಯಲ್ಲಿ ನಿರ್ಲಕ್ಷ್ಯ, ಉಪಹಾಸ ಮತ್ತು ಸ್ವೀಕಾರ ಎಂಬ 3 ಹಂತಗಳನ್ನು ಹಾದು ಹೋಗುತ್ತದೆ’ ಎನ್ನುವುದು ಚಿಂತಕರೊಬ್ಬರ ಅಭಿಪ್ರಾಯ. ಸಂಘ ಈ 3 ಹಂತಗಳನ್ನು ಯಶಸ್ವಿಯಾಗಿ ದಾಟಿದೆ. ಸಂಘ ಪ್ರಾರಂಭವಾಗಿ 95 ವರ್ಷಗಳು ಸಂದಿವೆ. ಸಿಲ್ವರ್‌ಜ್ಯುಬಿಲಿ, ಗೋಲ್ಡನ್‌ ಜ್ಯುಬಿಲಿ, ಪ್ಲಾಟಿನಂ ಜುಬಿಲಿ ಇವೆಲ್ಲವುಗಳನ್ನು ದಾಟಿ ಬಂದಿದೆ, ಆದರೆ ಅಲ್ಲೆಲ್ಲೂ ಆ ಜುಬಿಲಿಗಳ ಆಚರಣೆ ನಡೆದಿಲ್ಲ. ಯಾಕೆಂದರೆ ಸಂಘ ವಿಶ್ವಾಸವಿಟ್ಟಿರುವುದು ಕಾರ್ಯದಲ್ಲಿಯೇ ವಿನಾ ಕಾರ್ಯಕ್ರಮಗಳಲ್ಲಿ ಅಲ್ಲ.

ಅದೆಷ್ಟೋ ಬಾರಿ ತನ್ನ ಬುಡಕ್ಕೆ ಕೊಡಲಿ ಏಟು ಬಿದ್ದಾಗಲೂ ಅದನ್ನು ನಿವಾರಿಸಿಕೊಂಡು ಇವತ್ತು ಸಂಘದ ಸಸಿ ಹೆಮ್ಮರವಾಗಿ ತನ್ನೆಲ್ಲ ರೆಂಬೆ ಕೊಂಬೆಗಳಲ್ಲೂ ಯಥೇತ್ಛವಾಗಿ ಫಲವನ್ನು ಧರಿಸಿ ಕಂಗೊಳಿಸುತ್ತಿದೆಯೆಂದರೆ ಅದರ ಅರ್ಥ 1925ರ ವಿಜಯದಶಮಿಯಂದು ಪ್ರಾರಂಭವಾಗಿದ್ದು ಕೇವಲ ಸಂಘ ಮಾತ್ರವಲ್ಲ…

– ಪ್ರಕಾಶ್‌ ಮಲ್ಪೆ, ಉಡುಪಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸದಾಶಯ : ತುಳುವಿನ ಚಿತ್ತ ..ಅಧಿಕೃತ ಭಾಷೆಯಾಗುವತ್ತ

ಸದಾಶಯ : ತುಳುವಿನ ಚಿತ್ತ ..ಅಧಿಕೃತ ಭಾಷೆಯಾಗುವತ್ತ

ಮಕ್ಕಳಲ್ಲಿ ಮಾನವೀಯತೆ ಬೆಳೆಸಿ; ಮನೆಯೇ ಮೊದಲ ಪಾಠಶಾಲೆಯಾಗಲಿ

ಮಕ್ಕಳಲ್ಲಿ ಮಾನವೀಯತೆ ಬೆಳೆಸಿ; ಮನೆಯೇ ಮೊದಲ ಪಾಠಶಾಲೆಯಾಗಲಿ

ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ

ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ!

ಬಾಲ ಸಿಕ್ಕಿ ಹಾಕಿಕೊಂಡಿರುವುದೊಂದೇ ಅಡ್ಡಿ!

ಬಾಲ ಸಿಕ್ಕಿ ಹಾಕಿಕೊಂಡಿರುವುದೊಂದೇ ಅಡ್ಡಿ!

31ನೇ ಜಿಲ್ಲೆಯಾಗಿ ವಿಜಯನಗರ : ವಿಜಯನಗರಕ್ಕೆ 6, ಬಳ್ಳಾರಿಗೆ 5 ತಾಲೂಕು

31ನೇ ಜಿಲ್ಲೆಯಾಗಿ ವಿಜಯನಗರ : ವಿಜಯನಗರಕ್ಕೆ 6, ಬಳ್ಳಾರಿಗೆ 5 ತಾಲೂಕು

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

KUD

ಪೊಲೀಸ್‌ ಗೈರು: ದಲಿತ ಕುಂದುಕೊರತೆ ಸಭೆ ರದ್ದು

NEWBORN

ಆಚಾರ್ಯ ಎಲೈವ್‌: ನವಜಾತ ಶಿಶುವಿನ ಆರೈಕೆ, ಅಂತರಾಷ್ಟ್ರೀಯ ವಿಚಾರ ಸಂಕಿರಣ

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.