ಜನವರಿ 14 ರಂದು ಸಚಿವ ಶ್ರೀಪಾದ ನಾಯಕ್ ಪತ್ನಿಯ ಅಂತ್ಯಕ್ರೀಯೆ
Team Udayavani, Jan 13, 2021, 5:37 PM IST
ಪಣಜಿ: ಗೋಕರ್ಣದ ಸಮೀಪದ ಹಿಲ್ಕೂರ್ – ಹೊಸ್ಕಂಬಿ ಕ್ರಾಸ್ ಬಳಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ರವರ ಪತ್ನಿ ವಿಜಯಾ ನಾಯ್ಕ ರವರ ಅಂತ್ಯಕ್ರಿಯೆ ಜನವರಿ 14 ಗುರುವಾರದಂದು ಪೊಂಡಾ ಸಮೀಪದ ಅಡಪೈಯಲ್ಲಿ ನಡೆಯಲಿದೆ.
ಗುರುವಾರ ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ವಿಜಯಾ ನಾಯ್ಕ ರವರ ಪಾರ್ಥಿವ ಶರೀರವನ್ನು ಪಣಜಿ ಸಮೀಪದ ರಾಯಬಂದರ್ ಸಾಪೇಂದ್ರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಂತರ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಗ್ರಾಮವಾದ ಅಡಪೈಗೆ ತರಲಾಗುವುದು. ಅಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾನ್ಹ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಅಡಪೈಯ ಅವರ ನಿವಾಸದಿಂದ ಸ್ಮಶಾನದ ವರೆಗೆ ಅಂತಿಮ ಮೆರವಣಿಗೆ ನಡೆಯಲಿದೆ ಎನ್ನಲಾಗಿದೆ.
ವಿಜಯಾ ನಾಯ್ಕ ರವರು ತಮ್ಮ ಮೂವರು ಗಂಡುಮಕ್ಕಳಾದ ಸಿದ್ದೇಶ, ಸಾಯೀಶ್ ಮತ್ತು ಯೊಗೇಶ್, ಮತ್ತು ಕುಟುಂಬವನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ
ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ
ಒಬಿಸಿಗಳಿಗೆ ಆದ್ಯತೆ ನೀಡಿದ್ರೂ; ನ್ಯಾಯ ಸಿಗೋದು ಅನುಮಾನ
ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?
ಸೈದ್ದಾಂತಿಕ ಬದ್ಧತೆಯ ಬಗ್ಗೆ ರಾಹುಲ್ ಗಾಂಧಿ ಬಿಡಿಸಿ ಹೇಳಬೇಕು: ಕುಮಾರಸ್ವಾಮಿ