
ಉದ್ಯಮ ಮಿತ್ರ ಸರ್ಕಾರ: ವಿವಾದ್ ಸೇ ವಿಶ್ವಾಸ್- 2 ಯೋಜನೆ
ವಾಣಿಜ್ಯ ವಿವಾದಗಳ ಪರಿಹಾರಕ್ಕೆ ಮತ್ತೊಂದು ಯೋಜನೆ ಪ್ರಕಟ
Team Udayavani, Feb 2, 2023, 6:15 AM IST

ಉದ್ಯಮ ಸ್ನೇಹಿ ನಿರ್ಣಯಗಳ ಮೂಲಕ ವ್ಯಾಪಾರ-ವಹಿವಾಟು ಸುಲಭಗೊಳಿಸಲು ಹಲವು ಕ್ರಮ ಕೈಗೊಂಡಿರುವ ಮೋದಿ ಸರ್ಕಾರ, ಉದ್ಯಮಿಗಳಿಗೆ ಪೂರಕವಾಗುವಂತೆ ವಿವಾದ್ ಸೇ ವಿಶ್ವಾಸ್-2, ಒನ್ ಸ್ಟಾಪ್ ಸಲ್ಯೂಷನ್, ಇ-ಕೋರ್ಟ್‌ಗಳ ಸ್ಥಾಪನೆ ಸೇರಿದಂತೆ ವಿವಿಧ ಪರಿಹಾರಗಳನ್ನು ಘೋಷಿಸಿದೆ.
ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ಜತೆಗಿನ ಒಪ್ಪಂದಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ವಿವಾದ್ ಸೇ ವಿಶ್ವಾಸ್-2 ಅನ್ವಯ ಪರಿಹಾರ ಯೋಜನೆ ಘೋಷಿಸುವುದಾಗಿ ತಿಳಿಸಿದೆ.
ಅಲ್ಲದೇ, ವಿವಿಧ ಸರ್ಕಾರಿ ಸಂಸ್ಥೆಗಳಿಗೆ ವ್ಯಕ್ತಿಯ ಒಂದೇ ಮಾಹಿತಿಯನ್ನು ಪ್ರತ್ಯೇಕವಾಗಿ ಒದಗಿಸುವುದನ್ನು ತಡೆಗಟ್ಟಲು ಪರಿಹಾರಕ್ರಮವಾಗಿ ಒನ್‌ಸ್ಟಾಪ್- ಒನ್‌ಸಲ್ಯೂಷನ್ ಯೋಜನೆ ಪರಿಚಯಿಸಲು ನಿರ್ಣಯಿಸಿದೆ.
ಜತೆಗೆ ವಿವಾದಗಳ ಪರಿಹಾರಕ್ಕಾಗಿ 7 ಸಾವಿರ ಕೋಟಿ ರೂ.ವೆಚ್ಚದಲ್ಲಿ ಇ- ಕೋರ್ಟ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಉದ್ಯಮ ಸ್ಥಾಪನೆಗೆ ಅಗತ್ಯವಿರುವ ಸರ್ಕಾರದ ಎಲ್ಲಾ ಡಿಜಿಟಲ್ ಸೇವೆಗಳನ್ನು ಪ್ಯಾನ್‌ಕಾರ್ಡ್‌ಗಳನ್ನು ಆಧಾರವಾಗಿಟ್ಟುಕೊಂಡೇ ಬಳಸಿಕೊಳ್ಳಲು ಅನುವು ಮಾಡಿಕೊಡುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Russia-Ukraine War ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸಿದ ರಾಹುಲ್ ಗಾಂಧಿ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

ಕಣ್ಣೂರು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: CCTVಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ

BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ