ಮತದಾನ: ಸೊರಬದಲ್ಲಿ ಜಾಸ್ತಿ, ಮಾನ್ವಿಯಲ್ಲಿ ಕಡಿಮೆ

Team Udayavani, Apr 25, 2019, 3:35 AM IST

ಬೆಂಗಳೂರು: ಎರಡನೇ ಹಂತದಲ್ಲಿ ಮಂಗಳವಾರ ಮತದಾನ ನಡೆದ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 112 ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.82.59ರಷ್ಟು ಮತದಾನ ಆಗಿದ್ದರೆ, ರಾಯಚೂರು ಲೋಕಸಭೆ ವ್ಯಾಪ್ತಿಗೆ ಬರುವ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.55.50ರಷ್ಟು ಮತದಾನ ಆಗಿದೆ.

ಉಳಿದಂತೆ ಈ 14 ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 112 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ-ಸದಲಗಾ ಶೇ.80.79, ಹಾನಗಲ್‌ ಶೇ.80.80, ತೀರ್ಥಹಳ್ಳಿ ಶೇ.80.59, ಶಿಕಾರಿಪುರದಲ್ಲಿ ಶೇ.80.64ರಂತೆ ಅತಿ ಹೆಚ್ಚು ಮತದಾನ ಆಗಿದೆ. ಅದೇ ರೀತಿ, ರಾಯಚೂರು ನಗರ ಶೇ.55.54, ಯಾದಗಿರಿ ಶೇ.56.20, ಕಲಬುರಗಿ ಉತ್ತರ ಶೇ.56.89, ವಿಜಯಪುರ ನಗರ ಶೇ.56.89, ಕಲಬುರಗಿ ದಕ್ಷಿಣ ಶೇ.57.04, ಆಳಂದ ಶೇ.57.01ರಂತೆ ಅತಿ ಕಡಿಮೆ ಮತದಾನ ಆಗಿದೆ.

ಎರಡನೇ ಹಂತದಲ್ಲಿ ಶೇ.68.43ರಷ್ಟು ಮತದಾನ: ಎರಡನೇ ಹಂತದಲ್ಲಿ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಸರಾಸರಿ ಶೇ.68.43ರಷ್ಟು ಮತದಾನ ದಾಖಲಾಗಿದೆ. ಈ 14 ಕ್ಷೇತ್ರಗಳಲ್ಲಿ 2014ರ ಲೋಕಸಭಾ ಚುನಾವಣೆಯ ಶೇಕಡವಾರು ಮತ ಪ್ರಮಾಣಕ್ಕೆ ಹೊಲಿಕೆ ಮಾಡಿದರೆ ಶೇ.2.39ಷ್ಟು ಮತ ಪ್ರಮಾಣ ಹೆಚ್ಚಾಗಿದೆ. ಕಳೆದ ಬಾರಿ ಈ ಕ್ಷೇತ್ರಗಳಲ್ಲಿ ಶೇ.66.82ರಷ್ಟು ಮತದಾನ ಆಗಿತ್ತು.

ಶಿವಮೊಗ್ಗದಲ್ಲಿ ಅತಿ ಹೆಚ್ಚು ಶೇ.76.43ರಷ್ಟು ಮತದಾನ ಆಗಿದ್ದರೆ, ರಾಯಚೂರಿನಲ್ಲಿ ಅತಿ ಕಡಿಮೆ ಶೇ.57.91ರಷ್ಟು ಮತದಾನ ಆಗಿದೆ. ಈ 14 ಕ್ಷೇತ್ರಗಳಲ್ಲಿ 2014ರಲ್ಲಿ ಚಿಕ್ಕೋಡಿ ಅತಿ ಹೆಚ್ಚು ಶೇ.74.29 ಹಾಗೂ ಕಲಬುರಗಿಯಲ್ಲಿ ಅತಿ ಕಡಿಮೆ ಶೇ.57.96ರಷ್ಟು ಮತದಾನ ಆಗಿತ್ತು.

ಮೊದಲ ಹಂತದಲ್ಲಿ ಮತದಾನ ನಡೆದಿದ್ದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.81ರಷ್ಟು ಮತದಾನ ಆಗಿತ್ತು. ಈ ಕ್ಷೇತ್ರಗಳಿಗೆ ಹೊಲಿಸಿದರೆ 2ನೇ ಹಂತದ ಕ್ಷೇತ್ರಗಳಲ್ಲಿ ಶೇ.0.37ರಷ್ಟು ಕಡಿಮೆ ಮತದಾನ ಆಗಿದೆ. ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 2.43 ಕೋಟಿ ಮತದಾರರ ಪೈಕಿ 85.94 ಲಕ್ಷ ಪುರುಷರು ಹಾಗೂ 80.33 ಲಕ್ಷ ಮಹಿಳೆಯರು ಸೇರಿ ಒಟ್ಟು 1.66 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಎರಡನೇ ಹಂತದ ಅಂತಿಮ ಮತ ಪ್ರಮಾಣ
ಕ್ಷೇತ್ರ ಶೇಕಡವಾರು ಮತ
ಚಿಕ್ಕೋಡಿ- ಶೇ.75.52
ಬೆಳಗಾವಿ- ಶೇ.67.31
ಬಾಗಲಕೋಟೆ- ಶೇ.70.59
ವಿಜಯಪುರ- ಶೇ.61.70
ಕಲಬುರಗಿ- ಶೇ.60.88
ರಾಯಚೂರು- ಶೇ.57.91
ಬೀದರ- ಶೇ.62.69
ಕೊಪ್ಪಳ- ಶೇ.68.41
ಬಳ್ಳಾರಿ- ಶೇ.69.59
ಹಾವೇರಿ- ಶೇ.73.99
ಧಾರವಾಡ- ಶೇ.70.13
ಉತ್ತರ ಕನ್ನಡ- ಶೇ.74.10
ದಾವಣಗೆರೆ- ಶೇ.73.03
ಶಿವಮೊಗ್ಗ- ಶೇ.76.43

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

ಹೊಸ ಸೇರ್ಪಡೆ