ವೀಕೆಂಡ್ ಕರ್ಫ್ಯೂ ಮಧ್ಯೆ ಧಾರಾವಾಹಿ ಚಿತ್ರೀಕರಣ : ಪೊಲೀಸರಿಂದ ದಂಡ
Team Udayavani, Jan 17, 2022, 4:28 PM IST
ಕೊಟ್ಟಿಗೆಹಾರ: ವೀಕೆಂಡ್ ಕರ್ಫ್ಯೂ ನಡುವೆಯೂ ಫಲ್ಗುಣಿಯ ಹೊಟೇಲ್ವೊಂದರಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಧಾರಾವಾಹಿ ತಂಡಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ, ಫಲ್ಗುಣಿ ಗ್ರಾಮದ ಕಾಫಿ ಕಾರ್ನರ್ ಕೆಫೆ ಹೊಟೇಲ್ನಲ್ಲಿ ಭಾನುವಾರ ಮುದ್ದುಲಕ್ಷ್ಮೀ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಬಣಕಲ್ ಠಾಣೆ ಪಿಎಸ್ಐ ಗಾಯತ್ರಿ ಅವರು ಧಾರಾವಾಹಿ ತಂಡಕ್ಕೆ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವೀಕೆಂಡ್ ಕರ್ಫ್ಯೂ ನಡುವೆಯೂ ಧಾರಾವಾಹಿ ಚಿತ್ರೀಕರಣ ನಡೆಸಿರುವುದರಿಂದ ಧಾರಾವಾಹಿ ತಂಡ ಹಾಗೂ ಹೊಟೇಲ್ ಮಾಲೀಕರಿಗೆ ದಂಡ ವಿಧಿಸಿ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಚಿತ್ರೀಕರಣ ನಡೆಸದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ ಪರೀಕ್ಷಾ ಕಿಟ್ ದುರ್ಬಳಕೆ: ಔಷಧ ಮಾರಾಟಗಾರರಿಗೆ ಸರಕಾರದ ಎಚ್ಚರಿಕೆ