ಶುದ್ಧ ಕುಡಿಯುವ ನೀರು ಪೂರೈಕೆಮಾಡಲು ಮಾಡಲು ಸರ್ಕಾರ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬಹುದು?

Team Udayavani, Nov 20, 2019, 4:17 PM IST

ದೇಶದ ಹದಿಮೂರು ರಾಜ್ಯಗಳ ರಾಜಧಾನಿಗಳಲ್ಲಿ ಪೈಪ್ ಮೂಕ ಮನೆ ಮನೆಗೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರ್ತಮಾನ ಮಹಾನಗರಗಳ ನಿವಾಸಿಗಳಲ್ಲಿ ಆತಂಕವನ್ನು ಉಂಟುಮಾಡಿತ್ತು. ಈ ಹಿನ್ನಲೆಯಲ್ಲಿ ಉದಯವಾಣಿ “ಮಹಾನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಮಾಡಲು ಮಾಡಲು ಸರ್ಕಾರ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬಹುದು? ಎಂಬ ಪ್ರಶ್ನೆಯನ್ನು ಕೇಳಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳು ಇಂತಿವೆ.

ರವಿ ಎಚ್ :  ಮೊದಲು ಕಲ್ಯಾಣಿಗಳನ್ನು ಸ್ವಚ್ಚಗೊಳಿಸಬೇಕು. ನಂತರ ಅದನ್ನು WTP ಗೆ ಪಂಪ್ ಮಾಡಬೇಕು. ಸ್ವಚ್ಚ ನೀರನ್ನು ಮನೆಗಳಿಗೆ ಬಿಡಬೇಕು.ವಾಟರ್ ಮೀಟರ್ ಗಳನ್ನು ಗಳನ್ನು ಸಮರ್ಪಕವಾಗಿ ಆಳವಡಿಸಿ ನೀರಿನ ಮಾಪನ ಆಳೆಯಬೇಕು.

ಸಣ್ಣಮಾರಪ್ಪ ಚಂಗಾವರ:  ಜನಸಂಖ್ಯೆಗೆ ಅನುಗುಣವಾಗಿ ನೀರು ಶುದ್ಧೀಕರಣ ಘಟಕಗಳನ್ನು ತೆರೆಯಬೇಕು. ಇವುಗಳು ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ನೀರನ್ನು ಶೇಖರಿಸುವ, ಶುದ್ಧೀಕರಿಸುವ ಅಥವಾ ಬಳಕೆಯಾಗುವ ವಸ್ತುಗಳಲ್ಲಿ ಗುಣಮಟ್ಟತೆ ಕಾಪಾಡಿಕೊಂಡು ವ್ಯರ್ಥವಾಗದಂತೆ ಎಚ್ಚರವಹಿಸಬೇಕು. ಇದೆಲ್ಲಕ್ಕಿಂತ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ಮಾಡಬೇಕು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ