ವಿಶೇಷ ಏನಿದೆ?

Team Udayavani, Jun 9, 2020, 4:35 AM IST

vishesha-yenide

ಅಮೆರಿಕನ್‌ ಲೇಖಕ ಮಾರ್ಕ್‌ ಟ್ವೇನ್‌, ಅದೊಮ್ಮೆ ಗೆಳೆಯರೊಂದಿಗೆ ಯುರೋಪ್‌ಗೆ ಪ್ರವಾಸ ಹೋಗಿದ್ದ. ಮಾರ್ಕ್‌ ಟ್ವೇನ್‌ನ ಪ್ರಸಿದ್ಧಿಯ ಬಗ್ಗೆ ಟೂರ್‌ ಗೈಡ್‌ಗಳಿಗೆ ಹೇಗೆ ತಿಳಿಯಬೇಕು? ಇವರ್ಯಾರೋ ಪ್ರವಾಸಿಗಳು ಎಂದೇ ಅವರು  ಭಾವಿಸಿದ್ದರು. ತಮಗೆ ಗೊತ್ತಿದ್ದ, ಗೊತ್ತಿಲ್ಲದ ಎಲ್ಲ ಕಥೆಗಳನ್ನೂ ಚರಿತ್ರಾರ್ಹ ಸಂಗತಿಗಳೆಂದೇ ಬಣ್ಣಿಸುತ್ತಿದ್ದರು. ಎಷ್ಟೋ ಸಲ, ಇಂಥ ಅತಿರಂಜಿತ ಕಥೆಗಳಲ್ಲಿ ಕಾಳಿಗಿಂತ ಜೊಳ್ಳೇ ಹೆಚ್ಚಿದೆಯೆಂಬುದು ಅರಿವಿಗೆ ಬರುತ್ತಿದ್ದರೂ, ಮಾರ್ಕ್‌ ಟ್ವೇನ್‌ ಮತ್ತು ಸಂಗಡಿಗರಿಗೆ ಏನೂ ಮಾಡಲು ಅವಕಾಶವಿರಲಿಲ್ಲ.

ಕೊನೆಗೊಂದು ದಿನ ಅವರು ಒಂದು ಉಪಾಯ ಮಾಡಿದರು. “ಗೈಡ್‌ ಎಂಥ ಅದ್ಭುತ ಕಥೆಯನ್ನೇ ಹೇಳಲಿ, ಅದಕ್ಕೊಂದು ತೇಲುಹೇಳಿಕೆಯಂಥ ಬದಲಿ ಉತ್ತರ  ಹೇಳಿಬಿಡಬೇಕು. ಅದೇನು ಮಹಾ ಎಂಬಂತೆ, ವ್ಯಂಗ್ಯದ ಮಾತುಗಳಾಡಿ ಚುಚ್ಚಬೇಕು. ನಮ್ಮ ಊರಲ್ಲಿ ಇದಕ್ಕಿಂತ ದೊಡ್ಡದು, ಇದಕ್ಕಿಂತ ಚೆಲುವಾದದ್ದು, ಇದಕ್ಕಿಂತ ಪುರಾತನವಾ ದದ್ದು ಇದೆ ಎಂಬ ಧಾಟಿಯಲ್ಲಿ ಮಾತಾಡಿ ಗೈಡ್‌ಗಳ  ಪ್ರತಿಷ್ಠೆ ಒಡೆಯಬೇಕು’-ಎಂದು ನಿರ್ಧರಿಸಿದರು. ಸರಿ. ತಂಡ ಯುರೋಪಿನ ಒಂದು ದೊಡ್ಡ ಮ್ಯೂಸಿಯಂನ ದರ್ಶನ ಮಾಡುತ್ತಿತ್ತು.

ಅಲ್ಲೂ ಒಬ್ಬ ಗೈಡ್‌ ಇವರಿಗೆ ಎಡತಾಕಿದ. ಅದು ನೋಡಿ ಜಾರ್ಜ್‌ ದೊರೆ ಬಳಸಿದ ಖಡ್ಗ, ಇದು  ಕ್ಯಾಥರೀನ್‌ ರಾಣಿ ಬಳಸಿದ ಗೌನು, ಅದು ಫಿಲಿಪ್‌ ದೊರೆ ಬಳಸಿದ ಪೀಕುದಾನಿ… ಹೀಗೆ, ಪ್ರತಿಯೊಂದು ವಸ್ತುವನ್ನು ತೋರಿಸುತ್ತಲೂ, ಉದ್ದುದ್ದದ ವಿವರಣೆ ನೀಡುತ್ತಿದ್ದ. ಹಾಗೇ ಮುಂದುವರಿ ಯುತ್ತ, ಒಂದು ಹಳೇ ಕಾಲದ ಕಾಗದ  ತೋರಿಸಿದ. “ಇದರ ವಿಶೇಷ ಏನು ಗೊತ್ತೆ? ಇದು ಕ್ರಿಸ್ಟೊಫ‌ರ್‌  ಕೊಲಂಬಸ್‌, ರಾಣಿ ಇಸಬೆಲಾಳಿಗೆ ಬರೆದ ಅಮೂಲ್ಯವಾದ ಪತ್ರ’ ಎಂದ. ಕೊಲಂಬಸ್‌ ಯಾತ್ರೆ ಹೊರ ಡುವ ಮುನ್ನ ಇಸಬೆಲಾಳಿಗೆ ನಿವೇದನೆ ಮಾಡಿಕೊಂಡನೆಂದೂ,

ಅದಕ್ಕೆ  ಆಕೆ ಒಪ್ಪಿ ಧನಸಹಾಯ ಮಾಡಿದಳೆಂಬುದೂ, ಭಾರತ ಮುಟ್ಟುವ ಬದಲು ಕೊಲಂಬಸ್‌ ಅಮೆರಿಕಾ ದೇಶವನ್ನು ಶೋಧಿಸಿದನೆಂದೂ ಇತಿಹಾಸ ಓದಿದವರಿಗೆಲ್ಲ ಗೊತ್ತಿದೆ. ಗೈಡ್‌ನ‌ ಪೀಠಿಕೆ ಮುಗಿದು ಮುಖ್ಯ ಕಥೆ ಶುರುವಾಗುವ ಮೊದಲೇ ಮಾರ್ಕ್‌ ಟ್ವೇನ್‌ ಆತನನ್ನು ತಡೆದು ಹೇಳಿದ- “ಏನು,  ಕೊಲಂಬಸ್‌ ಬರೆದ ಪತ್ರವೇ? ಅಕ್ಷರ ಎಲ್ಲ ಸೊಟ್ಟಸೊಟ್ಟಗಾಗಿದೆ. ನಮ್ಮೂರಲ್ಲಿ ಹತ್ತು- ಹನ್ನೆರಡು ವರ್ಷದ ಹುಡುಗರ ಕೈಬರಹ ಇದಕ್ಕಿಂತ ಚೆನ್ನಾಗಿದೆ’.

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.