ಈ ವರ್ಷ ಐಪಿಎಲ್ ನಡೆಯದಿದ್ದರೆ ಭಾರತೀಯ ಕ್ರಿಕೆಟಿಗರ ವೇತನ ಕಡಿತ?
Team Udayavani, Apr 9, 2020, 5:22 AM IST
ಮುಂಬಯಿ: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ 13ನೇ ಆವೃತ್ತಿ ಐಪಿಎಲ್ ಟಿ20 ಕ್ರಿಕೆಟ್ ಕೂಡ ನಡೆಯುತ್ತದೋ, ಇಲ್ಲವೋ ಎನ್ನುವ ಬಗ್ಗೆ ಎಲ್ಲೆಡೆ ಜೋರಾದ ಚರ್ಚೆ ನಡೆಯುತ್ತಿದೆ.
ಈ ಬೆನ್ನಲ್ಲೆ ಐಪಿಎಲ್ ನಡೆಯದಿದ್ದರೆ ವಿರಾಟ್ ಕೊಹ್ಲಿ ಪಡೆಯ ವೇತನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡಿತಗೊಳಿಸಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.